Mundgod|ಮುಕಳೆಪ್ಪನಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ -ಪ್ರಮೋದ್ ಮುತಾಲಿಕ್
Mundgod|ಮುಕಳೆಪ್ಪನಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ -ಪ್ರಮೋದ್ ಮುತಾಲಿಕ್
ಕಾರವಾರ :- ಯೂಟ್ಯೂಬರ್ ಮುಕಳೆಪ್ಪ ವಿವಾಹ ವಿವಾದ ಮತ್ತಷ್ಟು ಜಟಿಲವಾಗುತಿದ್ದು ಇದೀಗ ಕುದ್ದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅಖಾಡಕ್ಕೆ ಇಳಿದಿದ್ದಾರೆ. ಇಂದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಪ್ರತಿಭಟನಾ ರ್ಯಾಲಿ ಮಾಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಯೂಟ್ಯೂಬರ್ ಮುಕಳೆಪ್ಪ ಹಾಗೂ ಗಾಯಿತ್ರಿ ವಿವಾಹ ಕಾನೂನು ಬದ್ದವಾಗಿಲ್ಲ ಹೀಗಾಗಿ ಇವರ ವಿವಾಹ ನೊಂದಣಿಯನ್ನು ರದ್ದು ಮಾಡಬೇಕು ಎಂದು ಮುಂಡಗೋಡು ತಹಶಿಲ್ದಾರ್ ಗೆ ಮನವಿ ಪತ್ರ ನೀಡಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ನಮ್ಮ ಹಿಂದೂ ಯುವತಿಯ ಬ್ರೈನ್ ವಾಶ್ ಮಾಡಿ ಪುಸಲಾಯಿಸಿ ಮದುವೆ ಆಗಿದ್ದಾನೆ ,ಯಾವುದೇ ಪರಿಸ್ಥಿತಿಯಲ್ಲಿ ಆಕೆಯನ್ನು ಬಿಟ್ಟುಕೊಡುವುದಿಲ್ಲ ,ಹಿಂದೂ ಸಂಸ್ಕೃತಿಯಲ್ಲೇ ಉಳಿಸಿಕೊಳ್ಳುತ್ತೇವೆ.
Mundgod| ಅಧಿಕಾರಿಮೇಲೆ ಪ್ರಕರಣ ಸರ್ಕಾರಿ ನೊಂದಣಿ ಕಚೇರಿ ಬಂದ್ ಮಾಡಿದ ಅಧಿಕಾರಿಗಳು!
ತಹಶಿಲ್ದಾರ್ ಗೆ ಮದುವೆ ಯ ಲೋಪದೋಷಗಳ ಬಗ್ಗೆ ವಿವರವಾಗಿ ಹೇಳಿದ್ದೇವೆ, ವಿವರ ವಿಹಾವನ್ನು ರದ್ದು ಮಾಡಬೇಕು, ಕಾನೂನು ಪಾಲಿಸದ ಮದುವೆ ಮದುವೆಯಲ್ಲ ,ಇದು ಮೋಸದ ಆಟ ,ಕಾನೂನು ಬಾಹಿರವಾಗಿ ವಿವಾಹ ನೊಂದಣಿ ಮಾಡಿದ ನೊಂದಣಾಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು ,ಇದಕ್ಕೆ ಸಹಕಾರ ಕೊಟ್ಟವರನ್ನೂ ಸಹ ಅಮಾನತು ಮಾಡಬೇಕು.ಸಾಕ್ಷಿದಾರರನ್ನು ಬಂಧಿಸಬೇಕು,ಸಾಕ್ಷಿ ಕೊಟ್ಟವರು ಮದುವೆ ಸಂದರ್ಭದಲ್ಲಿ ಯಾರೂ ಇರಲಿಲ್ಲ ಇದರ ಬಗ್ಗೆ ನಮ್ನ ಬಳಿ ಸಾಕ್ಷಿ ಇದೆ.ಇದನ್ನು ಕೋರ್ಟ ಗೆ ನೀಡುತ್ತೇವೆ ಎಂದರು.
ಇನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ,ಮುಂಡಗೋಡು, ಹಾವೇರಿ ಜಿಲ್ಲೆಯ ಹಾನಗಲ್ ನ ನೊಂದಾವಣಿ ಕಚೇರಿಗಳು ಬ್ರಷ್ಟಾಚಾರ , ಅನೈತಿಕತೆ ,ಅವ್ಯವಹಾರ ನಡೆಯುತ್ತಿದೆ. ಹೀಗಾಗಿ ತಹಶಿಲ್ದಾರ್ ಹಾಗೂ ಡಿಸ್ಟಿಕ್ ರಿಜಿಸ್ಟರ್ ಗೆ ಆಗ್ರಹ ಮಾಡುತಿದ್ದೇನೆ ಮೂರು ಸೆಂಟರ್ ನ ಐದು ವರ್ಷದ ನೊಂದಣಿ ಚಕ್ ಮಾಡಿ ಭ್ರಷ್ಟಾಚಾರ ಬಹಿರಂಗ ಮಾಡಬೇಕು ಎಂದರು.
ಮುಕಳೆಪ್ಪನಿಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ!

ಮುಕಳೆಪ್ಪ ವಿರುದ್ಧ ಸೆ.22 ರಲ್ಲಿ ದೂರು ನೀಡಲಾಗಿದೆ.ಆದರೂ ಬಂಧಿಸುವ ಕೆಲಸವಾಗಿಲ್ಲ,
ಪೊಲೀಸರು ಮುಸ್ಲಿಂ ಅಂದರೆ ಹತ್ತು ಹೆಜ್ಜೆ ಹಿಂದೆ ಹೋಗುತ್ತಾರೆ.ಒಂದು ಪರವಾಗಿ ನಿಲ್ಲುತ್ತಾರೆ.ಸರ್ಕಾರದ ಬೆಂಬಲ ಇರುವುದರಿಂದ ಒತ್ತಡ ಇರುತ್ತದೆ.
ಯೂಟ್ಯೂಬರ್ ಮುಕಳಪ್ಪ ವಿಡಿಯೋ ಶೇರ್ ಮಾಡುವುದನ್ನು ಹಿಂದುಗಳು ಬಂದ್ ಮಾಡಿಬೇಕು.
ಧರ್ಮಸ್ಥಳದ ವಿಷಯದಲ್ಲಿ ಸಮೀರ್ ಗಂಟೆಗಟ್ಟಲೆ ವಿಡಿಯೋ ಮಾಡಿ ಕೋಟಿಗಟ್ಟಲೇ ಗಳಿಸಿದನೋ ಅದೇ ರೀತಿ ನಮ್ಮನ್ನು ದುರುಪಯೋಗ ಮಾಡಿಕೊಳ್ಳುತಿದ್ದಾರೆ. ಮುಕಳೆಪ್ಪ ಹಿಂದೂ ಯುವತಿಯರು ದುಡ್ಡು ಕೊಟ್ಟರೆ ಬರುತ್ತಾರೆ ಎಂದು ಹೇಳುತ್ತಾನೆ, ನಮ್ಮ ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುವ
ಮುಕಳಪ್ಪನಿಗೆ ಬೂಟಲ್ಲಿ ಹೊಡೆಯುತ್ತೇನೆ ಹಿಂದು ಹುಡುಗಿಯರು ಎಂದರೇ ಅಷ್ಟೊಂದು ತುಚ್ಯವೇ ಇವನಿಗೆ. ಯಾವುದೇ ಕಾರಣಕ್ಕೂ ಈತನನ್ನು ಬಿಡುವುದಿಲ್ಲ.
ಪೆಹಲ್ಗಾಮ್ ನಲ್ಲಿ ಧರ್ಮ ಕೇಳಿ ಹೊಡೆದಿದ್ದಾರೆ ,ಆದರೂ ಹಿಂದೂಗಳಿಗೆ ಬುದ್ದಿ ಬರುತ್ತಿಲ್ಲ .ಈ ಧರ್ಮ,ದೇಶ ಉಳಿಸಲು ನೋಡಿ ವ್ಯವಹಾರ ಮಾಡಬೇಕು.ಅಧಿಕೃತ ಸರ್ಕಾರಿ ರಜೆ ಇಲ್ಲದಿದ್ದರೂ ನೊಂದಣಿ ಕಚೇರಿಗೆ ಬೀಗ ಹಾಕಲಾಗಿದೆ.
ಮುಂಡಗೋಡು ವಿವಾಹ ನೊಂದಣಿ ಕಚೇರಿಯಲ್ಲಿ ಕಾನೂನು ಗಾಳಿಗೆ ತೂರಿ ನೊಂದಣಿ ಮಾಡಿದ್ದಾರೆ
ಯುವತಿಯ ತಾಯಿ ಮೋಸ ಆಗಿರುವ ಬಗ್ಗೆ ದೂರು ನೀಡಿ ಮೂರು ದಿನಗಳಾಗಿದೆ.ದೂರಿನ ಸೆಕ್ಟನ್ ಪ್ರಕಾರ ಈ ಪ್ರಕರಣದಲ್ಲಿ ಬಂಧನವಾಗಬೇಕು ಆದರೇ ಇದು ಆಗಿಲ್ಲ ಎಂದು ಅಕ್ರೋಶ ಹೊರಹಾಕಿದರು.