For the best experience, open
https://m.kannadavani.news
on your mobile browser.
Advertisement

Mundgod| ಅಧಿಕಾರಿಮೇಲೆ ಪ್ರಕರಣ ಸರ್ಕಾರಿ ನೊಂದಣಿ ಕಚೇರಿ ಬಂದ್ ಮಾಡಿದ ಅಧಿಕಾರಿಗಳು!

Mundgod news: Marriage registration officer booked in Mukaleppa case shuts office during working hours, leaving citizens stranded. Sriraama Sene leader Pramod Muthalik to visit the office tomorrow for document verification
08:08 PM Sep 24, 2025 IST | ಶುಭಸಾಗರ್
Mundgod news: Marriage registration officer booked in Mukaleppa case shuts office during working hours, leaving citizens stranded. Sriraama Sene leader Pramod Muthalik to visit the office tomorrow for document verification
mundgod  ಅಧಿಕಾರಿಮೇಲೆ ಪ್ರಕರಣ ಸರ್ಕಾರಿ ನೊಂದಣಿ ಕಚೇರಿ ಬಂದ್ ಮಾಡಿದ ಅಧಿಕಾರಿಗಳು

Mundgod| ಅಧಿಕಾರಿಮೇಲೆ ಪ್ರಕರಣ ಸರ್ಕಾರಿ ನೊಂದಣಿ ಕಚೇರಿ ಬಂದ್ ಮಾಡಿದ ಅಧಿಕಾರಿಗಳು!

Mundgod news:-ಯೂಟ್ಯೂಬರ್ ಮುಕಳೆಪ್ಪ  ಪ್ರಕರಣದಲ್ಲಿ ಮುಂಡಗೋಡಿನ ವಿವಾಹ ನೊಂದಣಾಧಿಕಾರಿ ಮೇಲೆ ಪ್ರಕರಣ ದಾಖಲಾಗುತಿದ್ದಂತೆ ನೊಂದಣಾಧಿಕಾರಿ ಕಚೇರಿಯನ್ನು ಕಚೇರಿ ಸಮಯದಲ್ಲಿಯೇ ಬಂದ್ ಮಾಡಿ ಭೀಗ ಹಾಕಿ ಕಚೇರಿ ಸಿಬ್ಬಂದಿಯೊಂದಿಗೆ ನಡೆದ ಘಟನೆ ಜರುಗಿದೆ.ಸೆ.22 ರಂದು ಶ್ರೀರಾಮ ಸೇನೆಯೊಂದಿಗೆ ಗಾಯತ್ರಿ ತಾಯಿ ಶಿವಕ್ಕ ನೊಂದಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದರು.

Advertisement

Mundgod|ಮುಂಡಗೋಡು ಠಾಣೆಯಲ್ಲಿ ಮುಕಳೆಪ್ಪ ,ವಿವಾಹ ನೊಂದಾವಣೆ ಅಧಿಕಾರಿ ಸೇರಿ ಏಳು ಜನರ ಮೇಲೆ ಪ್ರಕರಣ ದಾಖಲು

ಇದರ ನಂತರ ನೊಂದಣಾಧಿಕಾರಿ ಹೇಮಾ ಸೇರಿ ಏಳು ಜನರ ವಿರುದ್ದ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇನ್ನು ನೊಂದಣಾಧಿಕಾರಿ ಹೇಮಾ ರವರು ದಾಖಲೆ ಪರಾಮರ್ಷಿಸದೇ ನಿಯಮ ಮೀರಿ ಹಣ ಪಡೆದು ವಿವಾಹ ನೊಂದಣಿ ಮಾಡಿಕೊಂಡಿದ್ದಾರೆ ಎಂದು ದೂರಿದ್ದರು. ಇನ್ನು ಪ್ರಕರಣ ದಾಖಲಾಗುತಿದ್ದಂತೆ ಇಂದು ಕಚೇರಿಗೆ ಯಾವೊಬ್ಬ ಸಿಬ್ಬಂದಿಯೂ ಬಾರದೇ ಕಚೇರಿಗೆ ಬೀಗ ಹಾಕಲಾಗಿತ್ತು.

Youtuber Mukleppa case| ಮುಂಡಗೋಡಿನ ವಿವಾಹ ನೊಂದಣಿ ಕಚೇರಿಯಲ್ಲಿ  ಶಿವಕ್ಕ ರಂಪಾಟ| ಜೀವ ಬೆದರಿಕೆ ಇದೆ ಎಂದ ಮಗಳು ಗಾಯಿತ್ರಿ

ಇನ್ನು ಕಚೇರಿಗೆ ಬಂದ ಜನ ಕಚೇರಿ ಬೀಗ ಹಾಕಿರುವುದನ್ನು ನೋಡಿ ಕೆಲಸ ಮಾಡಿಸಿಕೊಳ್ಳಲಾಗದೇ ಹಿಂತಿರುಗುವಂತಾಯಿತು. ಕಚೇರಿಯಲ್ಲಿ ಅಧಿಕಾರಿ ಸೇರಿ ಒಟ್ಟು ನಾಲ್ಕು ಜನ ಇದ್ದು ಕಚೇರಿ ಸಮಯದಲ್ಲೇ ಹೀಗೆ ಬೀಗ ಹಾಕಿ ಹೋಗಿರುವುದು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ.

ನೊಂದಣಿ ಕಚೇರಿಗೆ ನಾಳೆ ಮುತಾಲಿಕ್

ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರವರು ನಾಳೆ ಮುಂಡಗೋಡಿಗೆ ಆಗಮಿಸಲಿದ್ದು ಪ್ರಕರಣ ಸಂಬಂಧ ನೊಂದಣಾಧಿಕಾರಿ ಕಚೇರಿಗೆ ಆಗಮಿಸಲಿದ್ದಾರೆ. ಇನ್ನು ವಿವಾಹ ಸಂಬಂಧ ದಾಖಲೆ ಪರಿಶೀಲನೆ ಮಾಡುವ ಸಾಧ್ಯತೆಗಳಿದ್ದು ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ