For the best experience, open
https://m.kannadavani.news
on your mobile browser.
Advertisement

Mundgod| ಮಾಹಿತಿ ಅರ್ಜಿ ಹಾಕಿ ಕೋಟಿ ಬೇಡಿಕೆ ಇಡುವ ಗ್ಯಾಂಗ್ ಆರೆಸ್ಟ್ | ಇವರ ಹಿಂದಿದೆ ಡೀಲ್ ಗಳ ಸರಮಾಲೆ!

Mundgod:-Hubli Police arrested a gang from Mundgod accused of misusing the Right to Information (RTI) Act to blackmail cooperative banks and officials for crores. ₹1.70 lakh seized during the trap operation.
08:51 PM Nov 06, 2025 IST | ಶುಭಸಾಗರ್
Mundgod:-Hubli Police arrested a gang from Mundgod accused of misusing the Right to Information (RTI) Act to blackmail cooperative banks and officials for crores. ₹1.70 lakh seized during the trap operation.
mundgod  ಮಾಹಿತಿ ಅರ್ಜಿ ಹಾಕಿ ಕೋಟಿ ಬೇಡಿಕೆ ಇಡುವ ಗ್ಯಾಂಗ್ ಆರೆಸ್ಟ್   ಇವರ ಹಿಂದಿದೆ ಡೀಲ್ ಗಳ ಸರಮಾಲೆ
Mundgod| ಮಾಹಿತಿ ಅರ್ಜಿ ಹಾಕಿ ಕೋಟಿ ಬೇಡಿಕೆ ಇಡುವ ಗ್ಯಾಂಗ್ ಆರೆಸ್ಟ್ | ಇವರ ಹಿಂದಿದೆ ಡೀಲ್ ಗಳ ಸರಮಾಲೆ!

Mundgod| ಮಾಹಿತಿ ಅರ್ಜಿ ಹಾಕಿ ಕೋಟಿ ಬೇಡಿಕೆ ಇಡುವ ಗ್ಯಾಂಗ್ ಆರೆಸ್ಟ್ | ಇವರ ಹಿಂದಿದೆ ಡೀಲ್ ಗಳ ಸರಮಾಲೆ!

Advertisement

Hubli / mundgod(06 November 2025) :- ಸಾರ್ವಜನಿಕರಿಗೆ ಸರ್ಕಾರಿ ಇಲಾಖೆಯ ಮಾಹಿತಿಗಳು ಕೈಗೆಟಕುವಂತೆ ಇರಬೇಕು, ಆಡಳಿತ ಪಾರದರ್ಶಕತೆ ಇರಬೇಕು ಎಂಬ ನಿಟ್ಟಿನಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿದೆ. ಆದರೇ ಇದರ ಉಪಯೋಗಕ್ಕಿಂತ ದುರುಪಯೋಗ ಹೆಚ್ಚಾಗುತಿದ್ದು ಮಾಹಿತಿ ಹಕ್ಕಿನಲ್ಲಿ ಮಾಹಿತಿ ಪಡೆದು ಬ್ಲಾಕ್ ಮೇಲ್ ಮಾಡಿ ಹಣ ಪೀಕುತಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ(mundgod) ಗ್ಯಾಂಗ್ ಒಂದನ್ನು ಹುಬ್ಬಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಹೌದು ಉತ್ತರ ಕನ್ನಡ ಜಿಲ್ಲೆಯಶಿರಸಿ,ಯಲ್ಲಾಪುರ,ಮುಂಡಗೋಡಿನಲ್ಲಿ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಪಡೆದು ಬ್ಲಾಕ್ ಮೇಲೆ ಮಾಡಿ ಹಣ ಪೀಕುತಿದ್ದ ಈ ಗ್ಯಾಂಗ್ ಹುಬ್ಬಳ್ಳಿಯಲ್ಲಿ ಲಾಕ್ ಆಗಿದೆ.

ಏನಿದು ಘಟನೆ?

ಗೋಕುಲ್ ರೋಡ್ ನಲ್ಲಿರುವ ಸಮೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಸೇಲ್ಸ್ ಹೆಡ್ ಮತ್ತು ಮ್ಯಾನೇಜರ್ ರವರುಗಳಿಗೆ ಗದಗ್ ಬೆಟಗೇರಿ ಮೂಲದ ಮಂಜುನಾಥ ಹದ್ದಣ್ಣವರ ಎಂಬ ಆರೋಪಿತನು ಸೊಸೈಟಿಯ ವಿರುದ್ಧ ಸುಳ್ಳು ಆರೋಪ ಮಾಡಿ, ಬೆದರಿಸಿ 1.5 ಕೋಟಿ ರೂ ಬೇಡಿಕೆ ಇಟ್ಟಿದ್ದರು.

ಈ  ಕುರಿತು ಹುಬ್ಬಳ್ಳಿಯ (Hubli)ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿತನಾದ ಮಂಜುನಾಥ್ ಹದ್ದಣ್ಣವರ್ ಸೇರಿದಂತೆ ಮುಂಡಗೋಡ ಮೂಲದ ಆರೋಪಿತರಾದ

ವೀರೇಶ್ ಕುಮಾರ್ ಲಿಂಗದಾಳ,ಮಹದೇಶ್ವರ ಲಿಂಗದಾಳ, ಮಹಾಬಲೇಶ್ವರ ಶಿರೂರ್ ,ಶಿವಪ್ಪ ಬೊಮ್ಮನಹಳ್ಳಿ ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದು,

ಬಂಧಿತರಿಂದ 1.70 ಲಕ್ಷ ರೂಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ.

Mundgodu| ksrtc ಬಸ್ ಪಲ್ಟಿ ಪ್ರಾಣಾಪಾಯದಿಂದ ಪಾರಾದ 60 ಕ್ಕೂ ಹೆಚ್ಚು ಪ್ರಯಾಣಿಕರು

1.5 ಕೋಟಿ ಬೇಡಿಕೆ – ಪೊಲೀಸರ ಬಲೆ

ಹುಬ್ಬಳ್ಳಿಯ ಸಮೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಮೇಲೆ ಸುಳ್ಳು ಆರೋಪ ಮಾಡಿ, ಅದರ ವಿರುದ್ಧ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ,ಮಾಹಿತಿ ನೀಡದಿದ್ದರೆ 1.5 ಕೋಟಿ ನೀಡಿ ಎಂದು ಬೆದರಿಕೆ ಹಾಕಿದ್ದರು.

ಈ ಕುರಿತು ಆರೋಪಿಗಳ ಮೇಲೆ ಸಮೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸೇಲ್ಸ್ ಹೆಡ್ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಸೇಲ್ಸ್ ಹೆಡ್ ಮೂಲಕ  ಗುರುವಾರ ಆರೋಪಿಗಳಿಗೆ ಹಣ ನೀಡುತ್ತೇವೆ ಎಂದು ಮುಂಡಗೋಡಿನಿಂದ ಹುಬ್ಬಳ್ಳಿಗೆ ಕರೆಸಿದರು. ಅವರು ನಗದು ಸ್ವೀಕರಿಸುವ ಕ್ಷಣದಲ್ಲಿ ಪೊಲೀಸರು ಹಣದ ಸಮೇತ ಲಾಕ್ ಮಾಡಿದ್ದಾರೆ.ಆರೋಪಿಗಳಿಂದ ₹1.70 ಲಕ್ಷ ವಶಪಡಿಸಿಕೊಳ್ಳಲಾಗಿದೆ.

ಮುಂಡಗೋಡ, ಶಿರಸಿ, ಹಾವೇರಿ, ಶಿಗ್ಗಾವಿ ಸೇರಿ ವಿವಿಧ ಕಡೆಗಳಲ್ಲಿ ಈ ಗ್ಯಾಂಗ್ ಸರ್ಕಾರಿ ಅಧಿಕಾರಿಗಳು,ಸಹಕಾರಿ ಬ್ಯಾಂಕ್ ಗಳಿಗೆ ಬ್ಲಾಕ್ ಮೇಲ್ ಮಾಡಿ ಹಣ ಪೀಕಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

ಇನ್ನು ಮಾಹಿತಿ ಹಕ್ಕಿನಲ್ಲಿ ಮಾಹಿತಿ ಪಡೆದು ಹಣ ಪೀಕುವುದೇ ಇವರ ದಂದೆ ಎಂಬುದು ತಿಳಿದುಬಂದಿದೆ.

ಪಕ್ಕಾ ಕ್ರಿಮಿನಲ್ ಮಹಾದೇಶ್ವರ ಲಿಂಗದಾಳ!

ಮಹಾದೇಶ್ವರ ಲಿಂಗದಾಳ್

ಮುಂಡಗೋಡಿನ ಮಹದೇಶ್ವರ ಲಿಂಗದಾಳ ಎಂಬಾತ ಬ್ಲಾಕ್ ಮೇಲ್ ಮಾಡಿ ಹಣ ಪೀಕುವುದರಲ್ಲಿ ನಿಸ್ಸೀಮನಾಗಿದ್ದು ಈ ಹಿಂದೆ NGO ಸಂಸ್ಥೆಯೊಂದನ್ನು ಹುಟ್ಟುಹಾಕಿ ಲಕ್ಷಾಂತರ ರುಪಾಯಿ ವಂಚಿಸಿದ್ದನು.

ಇನ್ನು ಈತನ ಮೇಲೆ ಮುಂಡಗೋಡಿನಲ್ಲಿ ಪ್ರಕರಣ ಸಹ ಇದೆ. ಹೀಗಿದ್ದರೂ ಈತ ಶಿರಸಿ,ಯಲ್ಲಾಪುರ,ಮುಂಡಗೋಡು ಭಾಗದಲ್ಲಿ ಕೆಲವು ಸಹಕಾರಿ ಬ್ಯಾಂಕ್ ಗೆ ಬ್ಲಾಕ್ ಮೇಲೆ ಮಾಡಿ ಲಕ್ಷ-ಲಕ್ಷ ಹಣ ಪೀಕಿದ್ದಾನೆ ಎಂಬ ಮಾಹಿತಿ ಹೊರಬರುತಿದ್ದು , ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

ಹೀಗಾಗಿ ಹುಬ್ಬಳ್ಳಿ ಪೊಲೀಸರು ಇವರು ಬ್ಲಾಕ್ ಮೇಲೆ ಮಾಡಿದ್ದರೇ ಭಯ ಪಡದೇ ದೂರು ನೀಡುವಂತೆ ಮನವಿ ಮಾಡಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ