ಮುಂಡಗೋಡು ನೊಂದಣಾಧಿಕಾರಿ ಕಚೇರಿಗೆ ಬಾರದ ಅಧಿಕಾರಿ ಸಿಬ್ಬಂದಿ| ನವರದಲ್ಲಿ ಬಿಗಿ ಪೊಲೀಸ್ ಬಂದವಸ್ತ್
ಮುಂಡಗೋಡು ನೊಂದಣಾಧಿಕಾರಿ ಕಚೇರಿಗೆ ಬಾರದ ಅಧಿಕಾರಿ ಸಿಬ್ಬಂದಿ| ನವರದಲ್ಲಿ ಬಿಗಿ ಪೊಲೀಸ್ ಬಂದವಸ್ತ್
ಕಾರವಾರ :- ಯೂಟ್ಯೂಬರ್ ಮುಕಳೆಪ್ಪ ಪ್ರಕರಣದಲ್ಲಿ ಮುಂಡಗೋಡು ವಿವಾಹ ನೊಂದಣಾಧಿಕಾರಿ ಕಚೇರಿ ಹಾಗೂ ಸಿಬ್ಬಂದಿ ಮೇಲೆ ದೂರು ದಾಖಲಾಗುತಿದ್ದಂತೆ ನೊಂದಣಿ ಕಚೇರಿಯನ್ನೇ ಬಂದ್ ಮಾಡಿ ಪರಾರಿಯಾಗಿದ್ದು ಇದೀಗ ಇಂದು ಯಲ್ಲಾಪುರದಿಂದ ಇಬ್ಬರು ಸಿಬ್ಬಂದಿಯನ್ನು ನಿಯೋಜನೆ ಮಾಡುವ ಮೂಲಕ ವಿವಾಹ ನೊಂದಣಾಧಿಕಾರಿ ಕಚೇರಿಯನ್ನು ಓಪನ್ ಮಾಡಲಾಗಿದೆ.
Bhatkal: ಅಣ್ಣನ ಹೆಸರಿನಲ್ಲಿ ಮೂರು ವರ್ಷ ಪದವಿ ಓದಿದ ತಮ್ಮ
ಇನ್ನು ಇಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮುಂಡಗೋಡಿಗೆ ಆಗಮಿಸಿದ್ದು ಪ್ರತಿಭಟನಾ ಮೆರವಣಿಗೆ ನಡೆಸಿದರು. ಇನ್ನು ಅಹಿತಕರ ಘಟನೆ ನಡೆಯದಂತೆ ನೊಂದಣಾಧಿಕಾರಿ ಕಚೇರಿ ಸೇರಿದಂತೆ ನಗರದ ವಿವಿಧ ಭಾಗದಲ್ಲಿ ಬಿಗಿ ಪೊಲೀಸ್ ನಿಯೋಜನೆ ಮಾಡಲಾಗಿತ್ತು.
ನಗರದಲ್ಲಿ ಬಿಗಿ ಬಂದವಸ್ತ್
ಮಡಗೋಡು ನಗರದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಮ್ಮ ಬೆಂಬಲಿಗರೊಂದಿಗೆ ನಗರದ ವಿವಿಧ ಭಾಗದಲ್ಲಿ ಖಂಡನಾ ಮೆರವಣಿಗೆ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ನಗರದಾಧ್ಯಾಂತ ಬಿಗಿ ಪೊಲೀಸ್ ಬಂದವಸ್ತ್ ಕಲ್ಪಿಸಲಾಗಿತ್ತು.
Mundgod| ಅಧಿಕಾರಿಮೇಲೆ ಪ್ರಕರಣ ಸರ್ಕಾರಿ ನೊಂದಣಿ ಕಚೇರಿ ಬಂದ್ ಮಾಡಿದ ಅಧಿಕಾರಿಗಳು!
ಎ.ಎಸ್.ಪಿ ಕೃಷ್ಣಮೂರ್ತಿ ರವರು ಇದರ ಉಸ್ತುವಾರಿ ಹೊತ್ತಿದ್ದು ಪೊಲೀಸ್ ತುಕಡಿಗಳನ್ನು ಸಹ ನಗರದಲ್ಲಿ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಹಶಿಲ್ದಾರ್ ಕಚೇರಿ ಹಾಗೂ ನೊಂದಣಾಧಿಕಾರಿ ಕಚೇರಿಗೆ ಭದ್ರತೆ ವದಗಿಸಲಾಗಿತ್ತು.