INSIDE STORY : ಆ ಶಿಕ್ಷಕನ ಎಣ್ಣೆ ಮತ್ತು ನಾಲ್ಕು ಮಕ್ಕಳನ್ನು ಬಲಿ ಪಡೆಯಿತೇ? ಆಗಿದ್ದೇನು?
INSIDE STORY Murdeshwar :-ಮುರುಡೇಶ್ವರದಲ್ಲಿ ಪ್ರವಾಸಕ್ಕೆ ಬಂದ ವಿದ್ಯಾರ್ಥಿನಿಯರಲ್ಲಿ ನಾಲ್ಕು ಜನ ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಸಾವಿಗೀಡಾದ ಪ್ರಕರಣ ಹಲವು ಸತ್ಯಗಳನ್ನು ಹೊರಹಾಕಿದೆ.
ಆದರೇ ಈ ಸತ್ಯ ನೀರಿನ ಅಲೆಯಂತೆ ಬಡಿದು ಮಾಯವಾಗಿದೆ. ಹೀಗಾಗಿ ಏನಾಗಿತ್ತು? ಈ ಬಗ್ಗೆ ಸತ್ಯ ಹುಡುಕಾಟದ ಇನ್ ಸೈಡ್ ಸುದ್ದಿ ಇಲ್ಲಿದೆ.
ಕೋಲಾರ ಮುಳಬಾಗಿಲು ಮೊರಾರ್ಜಿ ವಸತಿ ಶಾಲೆಯಿಂದ ಎರಡು ದಿನದ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಲಾಗಿತ್ತು. ಇದಕ್ಕೆ ಕೋಲಾರದ( kolar) ಶಿಕ್ಷಣ ಇಲಾಖೆ ಅನುಮತಿ ಪಡೆದಿದ್ದರು. ಆದರೇ ಎರಡು ದಿನದ ಪ್ರವಾಸ ಶಿಕ್ಷಕರ ಮೋಜು ಮಸ್ತಿಗೆ ಮೂರನೇ ದಿನಕ್ಕೂ ನಿಯಮ ಬಾಹಿರವಾಗಿ ಮುಂದೂಡಿದೆ.
ಶಿಕ್ಷಕರು ಕೋಲಾರಕ್ಕೆ ಮಕ್ಕಳನ್ನು ಕರೆದೊಯ್ಯುವ ಬದಲು ನೇರವಾಗಿ ಮಧ್ಯಾಹ್ನದ ವೇಳೆಗೆ ಮುರುಡೇಶ್ವರಕ್ಕೆ ಆಗಮಿಸಿದ್ದಾರೆ.
ಇನ್ನು ಇಲ್ಲಿ ಮೋಜು ಮಸ್ತಿ ಮಾಡಿ ತಾವು ತಂದಿದ್ದ ಖಾಸಗಿ ಬಸ್ ನಲ್ಲಿ ಹೊರಡಲು ಸಿದ್ದರಾಗಿದ್ದರು. ಈ ವೇಳೆ ಗುತ್ತಿಗೆ ಆಧಾರದಲ್ಲಿ ನಿಯುಕ್ತಿಗೊಂಡಿದ್ದ ಶಿಕ್ಷಕ ಚೌಡಪ್ಪ ಎಂಬಾತ ಮದ್ಯ ಸೇವಿಸಿದ್ದಲ್ಲದೇ ಹೊರಡಲು ಸಿದ್ದವಾಗಿ ಬಸ್ ನಲ್ಲಿ ಕುಳಿತಿದ್ದ ಏಳು ಜನ ವಿದ್ಯಾರ್ಥಿನಿಯರಿಗೆ ಪುಸುಲಾಯಿಸಿ ಸಮುದ್ರದ ಕಡೆ ಕರೆದೊಯ್ದಿದ್ದಾಗಿ ಪ್ರತ್ಯಕ್ಷ ದರ್ಶಿಗಳು ಹೇಳಿದ್ದು ಇಲ್ಲಿ ಅವರೊಂದಿಗೆ ಅಲೆಗಳ ಅಬ್ಬರ ಹೆಚ್ಚಿದ್ದರೂ ಕೈಹಿಡಿದುಕೊಂಡು ಸಮುದ್ರದಲ್ಲಿ ಆಟವಾಡಿದ್ದಾನೆ.
ಆಗ ಅಲೆಗಳ ಅಬ್ಬರಕ್ಕೆ ವಿದ್ಯಾರ್ಥಿನಿಯರು ಶಿಕ್ಷಕನೊಂದಿಗೆ ಮುಳುಗಿದ್ದು ಬೆದರಿದ್ದಾರೆ. ಈ ಸಂದರ್ಭದಲ್ಲಿ ಇವರನ್ನ ನೋಡಿದ ಲೈಪ್ ಗಾರ್ಡ ಸಿಬ್ಬಂದಿ ತಕ್ಷಣ ಹೋಗಿ ಅವರಲ್ಲಿ ಶಿಕ್ಷಕನೂ ಸೇರಿ ನಾಲ್ಕು ಜನರನ್ನು ರಕ್ಷಣೆ ಮಾಡಿದರು. ಆದರೇ 9ನೇ ತರಗತಿ ವಿದ್ಯಾರ್ಥಿನಿ ಶ್ರಾವಂತಿ (15) ಉಪ್ಪು ನೀರು ಕುಡಿದು ಉಸಿರಾಡಲಾಗದೇ ಸಾವು ಕಂಡಿದ್ದರೇ, ದೀಕ್ಷಾ (15), ಲಾವಣ್ಯ (15) ಹಾಗೂ ವಂದನಾ (15) ವಿದ್ಯಾರ್ಥಿನಿಯರು ನೀರಿನಲ್ಲಿ ತೇಲಿ ಹೋಗಿದ್ದು ಇಂದು ಶವವಾಗಿ ಪತ್ತೆಯಾಗಿದ್ದಾರೆ. ಉಳಿದ ಯಶೋಧ, ಲಿಪಿಕಾ, ವೀಕ್ಷಣಾ ರಕ್ಷಣೆಗೊಳಗಾಗಿ RNS ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಶಿಕ್ಷಕರನ್ನು ವಶಕ್ಕೆ ಪಡೆದ ಮುರುಡೇಶ್ವರ ಪೊಲೀಸರು.
ಮೊರಾರ್ಜಿ ವಸತಿ ಶಾಲೆಯ(school) ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ವಿರುದ್ಧ ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.
ಈ ಸಂಬಂಧ ವಸತಿ ಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಕಲಾ (40), ಶಿಕ್ಷಕರಾದ ಸುನೀಲ್ ಆರ್. (33), ಚೌಡಪ್ಪ ಎಸ್. (34), ವಿಶ್ವನಾಥ್ ಎಸ್. (27), ಶಾರದಮ್ಮ ಸಿ.ಎನ್. (37), ನರೇಶ ಕೆ. (30) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇನ್ನು ಆರು ಜನ ಶಿಕ್ಷಕರನ್ನು ಇಂದು ಸಂಜೆ ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಆದರೇ ಶಿಕ್ಷಕ ಮದ್ಯ ಸೇವಿಸಿರುವುದು ರಕ್ಷಣೆ ಮಾಡಿದ ಜನರೇ ಹೇಳಿದ್ದರೂ ಈತನ ವೈದ್ಯಕೀಯ ಪರೀಕ್ಷೆ ನಡೆಯದೇ ಇರುವುದರಿಂದ ಆತ ಪೊಲೀಸರ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾನೆ.
ಇದನ್ನೂ ಓದಿ:-Murdeshwar ದುರಂತ- ಆರು ಜನ ಶಿಕ್ಷಕರ ಮೇಲೆ ಪ್ರಕರಣ ದಾಖಲು- ತಲಾ5 ಲಕ್ಷ ಪರಿಹಾರ ಘೋಷಣ
ನಮಗೆ ಬಂದ ಮಾಹಿತಿ ಯಂತೆ ಶಿಕ್ಷಕರು ಅನುಮತಿ ಪಡೆದ ದಿನಕ್ಕಿಂತ ಹೆಚ್ಚಿನ ದಿನ ಪ್ರವಾಸ ಕೈಗೊಂಡಿದ್ದಾರೆ. ಜೊತೆಗೆ ಮಕ್ಕಳ ಸುರಕ್ಷೆಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಸರ್ಕಾರಿ ಬಸ್ ನಲ್ಲಿ ಬರಬೇಕಾದವರು ಖಾಸಗಿ ಬಸ್ ನಲ್ಲಿ ಬಂದಿದ್ದಾರೆ. ಇಲಾಖೆಯ ಎಲ್ಲಾ ನಿಯಮ ಗಾಳಿಗೆ ತೂರಿದ್ದಾರೆ.
ಇನ್ನು ಶಿಕ್ಷಕ ಚೌಡಪ್ಪ ಮದ್ಯ ಸೇವಿಸಿದ್ದರೂ ಆತನ ರಕ್ತ ಪರೀಕ್ಷೆ ನಡೆಸಲು ವಿಳಂಬ ಆಗಿದೆ. ಹೀಗಾಗಿ 24 ಘಂಟೆ ಆದ್ದರಿಂದ ರಕ್ತ ಪರೀಕ್ಷೆ ನಡೆಸಿದರೂ ಸತ್ಯತೆ ಹೊರಬರಲು ಕಷ್ಟಸಾಧ್ಯ. ಹಾಗಾಗಿ ಆತನ ಆತ್ಮ ಸಾಕ್ಷಿಗೆ ತಲೆಬಾಗಿ ಒಪ್ಪಿಕೊಳ್ಳಬೇಕು ಅಷ್ಟೇ.
ಇನ್ನು ಪೊಲೀಸ್ ಇಲಾಖೆ ಆತನ ರಕ್ತ ಪರೀಕ್ಷೆ ಮಾಡಿಸಲು ಎಡವಿದ್ದು ಬಿಟ್ಟರೇ ಬಹುತೇಕ ಇರುವ ಸತ್ಯವನ್ನು ಹೆಕ್ಕಿ ಪ್ರಕರಣ ದಾಖಲಿಸಿದ್ದಾರೆ.
ಆದರೇ ಶಿಕ್ಷಕರು ಮಾಡಿದ ತಪ್ಪಿನಿಂದ ನಾಳೆ ಪೋಷಕರಿಗೆ ಊರುಗೊಲಾಗಬೇಕಿದ್ದ ನಾಲ್ಕು ಪುಟ್ಟ ಮಕ್ಕಳು ಜೀವವನ್ನು ಕಳೆದುಕೊಂಡಿದ್ದಾರೆ.
ಹೆತ್ತು ಹೊತ್ತು ,ತುತ್ತಿಟ್ಟು ಮಕ್ಕಳನ್ನು ಎದೆಯ ಮಟ್ಟ ಬೆಳಸಿದ ಆ ಪೋಷಕರಿಗೆ ಮಕ್ಕಳನ್ನು ಈರೀತಿ ಕಳೆದುಕೊಳ್ಳುವ ದುರ್ಗತಿ ಬಂದಿದೆ. ಈ ನೋವಿಗೆ ನ್ಯಾಯ ಯಾರು ಕೊಡಬೇಕು.
ಮಕ್ಕಳನ್ನು ಕರೆತಂದು ಕುಡಿದ ಮತ್ತಿನಲ್ಲಿ ನೀರಿಗೆ ಎಳೆದೊಯ್ದ ಆ ಶಿಕ್ಷಕನಿಗೆ ಶಿಕ್ಷೆ ಕೊಡುವವರು ಯಾರು?
ವಿಧಿಯೋ ? ನ್ಯಾಯಾಲಯವೋ ? ಅಥವಾ ಆತನ ಆತ್ಮ ಸಾಕ್ಷಿಯೋ? ಎಂಬ ಪ್ರಶ್ನೆ ಈ ಪುಟ್ಟ ಮಕ್ಕಳ ಸಾವಿನ ಹಿಂದೆ ಕಾಡುತ್ತಿದೆ.