ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Tourism |ಮುರುಡೇಶ್ವರದಲ್ಲಿ ಸ್ಕೂಬಾ ಡೈವ್ ಹೆಸರಿನಲ್ಲಿ ಪ್ರವಾಸಿಗರಿಗೆ ವಂಚನೆ -ದೂರು ದಾಖಲು.

Tourists visiting Murudeshwar were cheated in the name of scuba diving after hackers hacked the Netrani Adventures website. Police complaint filed.
11:10 PM Dec 08, 2025 IST | ಶುಭಸಾಗರ್
Tourists visiting Murudeshwar were cheated in the name of scuba diving after hackers hacked the Netrani Adventures website. Police complaint filed.

Tourism |ಮುರುಡೇಶ್ವರದಲ್ಲಿ ಸ್ಕೂಬಾ ಡೈವ್ ಹೆಸರಿನಲ್ಲಿ ಪ್ರವಾಸಿಗರಿಗೆ ವಂಚನೆ -ದೂರು ದಾಖಲು.

Advertisement

ಕಾರವಾರ :- ವರ್ಷದ ಕೊನೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಿಗರ( tourist) ದಂಡೇ ಹರಿದು ಬರುತ್ತದೆ. ವೀಕೆಂಡ್ ಹಾಗೂ ಹೊಸವರ್ಷದ ಸಂಭ್ರಮಕ್ಕಾಗಿ ಇಲ್ಲಿಗೆ ಬರುವ ಪ್ರವಾಸಿಗರು ಮುರುಡೇಶ್ವರ ಹಾಗೂ ಗೋಕರ್ಣದಲ್ಲಿ ಪ್ರವಾಸೋಧ್ಯಮ ಚಟುವಟಿಕೆಯಲ್ಲಿ ಭಾಗಿಯಾಗುತ್ತಾರೆ.

ಇದನ್ನೇ ಬಂಡವಾಳ ಮಾಡಿಕೊಂಡ ಸೈಬರ್ ಹ್ಯಾಕರ್ ಗಳು ಸ್ಕೂಬಾ ಡೈವಿಂಗ್ ಹೆಸರಿನಲ್ಲಿ ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್ಸ್ ನ ವೆಬ್ ಸೈಟ್ ನನ್ನು ಹ್ಯಾಕ್ ಮಾಡಿ ಪ್ರವಾಸಿಗರಿಗೆ ಮುಂಚಿಸಿ ಹಣ ಪಡೆದ ಘಟನೆ ಬೆಳಕಿಗೆ ಬಂದಿದೆ.

ನಕಲಿ ವೆಬ್ ಸೈಟ್

ನೇತ್ರಾಣಿ ಅಡ್ವೇಂಚರ್ ಹೆಸರಿನ ವೆಬ್ ಸೈಟ್ ಹ್ಯಾಕ್ ಮಾಡಿದ ವಂಚಕರು ಸಂಸ್ಥೆಯ ಪೇಜ್ ನಲ್ಲಿ  ತಮ್ಮ ಸಂಪರ್ಕ ಸಂಖ್ಯೆ ನೀಡಿ ಪ್ರವಾಸಿಗರಿಂದ ಮುಂಗಡ ಹಣ ಪಡೆದಿದ್ದಾರೆ.

Advertisement

Murdeshwar : ಮುರುಡೇಶ್ವರ ದಲ್ಲಿ ಹೊರ ರಾಜ್ಯದ ಮಹಿಳೆ ತಂದು ವೇಶ್ಯಾವಾಟಿಕೆ -ಮೂರು ಜನರ ಬಂಧನ.

ಪೇಜ್ ಹ್ಯಾಕ್ ಮಾಡಿ ಮೊಬೈಲ್ ಸಂಖ್ಯೆ  7090059002 ನಂಬರ್ ಸೇರಿಸಿದ್ದು ಸಂಪರ್ಕಿಸುವ ಪ್ರವಾಸಿಗರಿಗೆ ಮುಂಗಡ ಹಣ ಪಡೆದಿದ್ದಾರೆ.ಈ ಕುರಿತು ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್ಸ್ ಸಂಸ್ಥೆಯ ಮಾಲೀಕ ಗಣೇಶ್ ಹರಿಕಾಂತ್ರರವರು ಕಾರವಾರದ  ಸೈಬರ್ ಕ್ರೈಮ್ ಗೆ ದೂರು ನೀಡಿದ್ದಾರೆ.

ವರ್ಷದ ಕೊನೆಯಾದ್ದರಿಂದ ಪ್ರವಾಸಿಗರು ಹೆಚ್ಚು ಮುರುಡೇಶ್ವರಕ್ಕೆ ಬರುತಿದ್ದು ಮುಂಗಡ ಬುಕ್ ಮಾಡುತಿದ್ದಾರೆ. ಇನ್ನು ಬರುವ ಪ್ರವಾಸಿಗರು ಹೀಗೆ ವಂಚನೆಯಾಗುತಿದ್ದು ಪ್ರವಾಸಿಗರು ಎಚ್ಚರದಿಂದ ಇರಬೇಕು ,ಪ್ರವಾಸಿಗರು ಹಣ ಮುಂಗಡ ನೀಡಿ ಬುಕ್ ಮಾಡದಂತೆ ನೇತ್ರಾಣಿ ಅಡ್ವಚರ್ಸ್ ಸಂಸ್ಥೆಯ ಗಣೇಶ್ ಹರಿಕಾಂತ್ರ ರಿಂದ ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ.

Murdeshwara|ಜಮಖಂಡಿಯ 102 ವರ್ಷದ ಪುರಾತನ ಆಂಜನೇಯ ಮೂರ್ತಿ ಮುರ್ಡೇಶ್ವರ ಸಮುದ್ರದಲ್ಲಿ!

ಪ್ರವಾಸಿಗರೇ ಎಚ್ಚರ.!

ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಿಗರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ವರ್ಷದ ಕೊನೆಯಲ್ಲಿ ಆಗಮಿಸುತ್ತಾರೆ. ಇದನ್ನು ಬಂಡವಾಳ ಮಾಡಿಕೊಳ್ಳುವ ವಂಚಕರು ಮುಂಗಡ ಹಣ ಪಡೆದು ಪ್ರವಾಸಿಗರಿಗೆ ವಂಚಿಸುತಿದ್ದಾರೆ.

ಹೀಗಾಗಿ ಅಧಿಕೃತ ವೆಬ್ ಸೈಟ್ , ಸೂಕ್ತ ಮಾಹಿತಿ ಪಡೆಯದೇ ವಂಚನೆಗೊಳಗಾಗಬೇಡಿ. ಪ್ರವಾಸೋಧ್ಯಮ ಇಲಾಖೆ ಜಲಸಾಹಸ ಕ್ರೀಡೆ ಸೇರಿದಂತೆ ಪ್ರತಿಯೊಂದಕ್ಕೂ ನಿಗದಿ ದರ ವ್ಯವಸ್ಥೆ ಮಾಡಿದೆ. ಆದರೇ ಕೆಲವು ಸಂಸ್ಥೆಗಳು ವೀಕೆಂಡ್ ನಲ್ಲಿ ದುಪ್ಪಟ್ಟು ದರ ವಿಧಿಸುತ್ತಿದೆ.

ಇನ್ನು ಬಾಡಿಗೆ ವಾಹನ, ರೂಮ್ ಗಳಲ್ಲೂ ಸಹ ವಂಚನೆ ನಡೆಯುತಿದ್ದು ನಿಗದಿ ದರಕ್ಕಿಂತ ಹೆಚ್ಚು ಪಡೆದು ವಂಚಿಸುತಿದ್ದು ಈ ಬಗ್ಗೆ ಪ್ರವಾಸೋಧ್ಯಮ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಹೀಗಾಗಿ ಪ್ರವಾಸಿಗರು ಜಾಗೃತರಾಗದಿದ್ದರೇ ಹಣ ವಂಚನೆಯಾಗುವುದು ನಿಶ್ಚಿತವಾಗಿದೆ.

 

Advertisement
Tags :
Cyber Crime MurudeshwarGokarna Murudeshwar TourismKarnataka Tourism AlertMurudeshwar Scuba DivingMurudeshwar Tourism FraudNetrani Adventures Website HackNetrani Island AdventureOnline Booking FraudScuba Diving Booking ScamScuba Diving Scam KarnatakaTourist Fraud Uttara KannadaTourist Safety WarningUttara Kannada news
Advertisement
Next Article
Advertisement