Nandi Hills : 2025 ಕ್ಕೆ ಪ್ರವಾಸ ಹೋಗಲು ಸಿದ್ದರಾದ ವರಿಗೆ ಶಾಕ್! ನಂದಿ ಹಿಲ್ಸ್ ಗೆ ನಿರ್ಬಂದ ವಿವರ ನೋಡಿ.
Nandi Hills :- ಹೊಸವರ್ಷಾಚರಣೆಗೆ ಇನ್ನೇನು ಕ್ಷಣಗಣನೆ ಪ್ರಾರಂಭವಾಗಿದೆ. ಹೀಗಾಗಿ ಹೊಸ ವರ್ಷಕ್ಕೆ ಪ್ರವಾಸಿ ಸ್ಥಳಗಳಿಗೆ ತೆರಳಲು ಸಖತ್ ಪ್ಲಾನ್ ಮಾಡಲಾಗಿರುತ್ತೆ. ಹೀಗೆ ನೀವೇನಾದರೂ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಹಿಲ್ಸ್ ಗೆ (Nandi Hills) ಹೋಗಲು ಪ್ಲಾನ್ ಮಾಡಿದ್ರೆ ಈಗಲೇ ಬದಲಾಯಿಸಿ.
ಹೌದು ಚಿಕ್ಕಬಳ್ಳಾಪುರದ ನಂದಿ ಹಿಲ್ಸ್ ಪ್ರವಾಸಿಗರ ಸ್ವರ್ಗ. ಪ್ರತಿ ವರ್ಷ ಕ್ರಿಸ್ ಮಸ್ , ಹೊಸವರ್ಷಾಚರಣೆಗೆ ಈ ಭಾಗಕ್ಕೆ ಪ್ರವಾಸ ಬರುವವರ ಸಂಖ್ಯೆ ಹೆಚ್ಚು.
ಆದ್ರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಇದೀಗ ನಿರ್ಬಂಧದ ಶಾಕ್ ನೀಡಿದೆ.
ನಂದಿ ಗಿರಿಧಾಮದಲ್ಲಿ 2025ರ ಹೊಸ ವರ್ಷಾ ಸಂಭ್ರಮಾಚರಣೆಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಂಪೂರ್ಣವಾಗಿ ನಿಷೇಧಿಸಿದೆ.
ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1ರ ರಾತ್ರಿ 11 ಗಂಟೆಯವರೆಗೆ ನಂದಿ ಬೆಟ್ಟಕ್ಕೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ. ಜೊತೆಗೆ ಅತಿಥಿ ಗೃಹಗಳಿಗೆ ಪ್ರವೇಶ ಕೂಡ ನಿರ್ಬಂಧಿಸಿದೆ.
ಈ ಮೂಲಕ ನಂದಿ ಬೆಟ್ಟದಲ್ಲಿ ಹೊಸ ವರ್ಷ ಆಚರಣೆ ಮಾಡಲು ಯೋಜನೆಯಲ್ಲಿದ್ದವರಿಗೆ ಶಾಕ್ ನೀಡಿದೆ.
ನಂದಿ ಬೆಟ್ಟಕ್ಕೆ ಸಾಮನ್ಯ ದಿನಗಳಲ್ಲಿಯೇ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಅದರಲ್ಲೂ ಹೆಚ್ಚಿನ ಪ್ರವಾಸಿಗರು ಬರುವುದೇ ಹೊಸ ವರ್ಷದ ಸಮಯದಲ್ಲಿ. ಈ ವೇಳೆಯೇ ಪ್ರವಾಸಿಗರಿಗೆ ನಿರ್ಬಂಧ ಹೇರಿರುವುದರಿಂದ ಪ್ರವಾಸೋದ್ಯಮದ ಆರ್ಥಿಕತೆ ಮೇಲೆಯೂ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.
ಕಳೆದ ಬಾರಿಯ 2024ರ ಹೊಸ ವರ್ಷದ ವೇಳೆ ಇದೇ ರೀತಿಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. ಹಾಗೆಯೇ 2025ರ ಹೊಸ ವರ್ಷಾಚರಣೆಗೂ ನಿರ್ಬಂಧ ಹೇರಲಾಗಿದೆ.

ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದಲ್ಲಿ ಬೆಳಗಿನ ವೇಳೆ ಸೂರ್ಯೋದ ಹಾಗೂ ಸಂಜೆ ವೇಳೆ ಸೂರ್ಯಸ್ತವನ್ನು ನೋಡುವುದೇ ಮಜಾ. ಇದರಿಂದ ಮನಸಿಗೆ ನೆಮ್ಮದಿ ಸಿಕ್ಕಂತಾಗುತ್ತದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಸುಂದರ ವಾತಾವರಣ, ತಂಪಾದ ಹವಾಗುಣ, ಇಬ್ಬನಿ, ಗಿಡ, ಮರ, ಬಳ್ಳಿಗಳ ಸೊಬಗು, ನಕ್ಕು ನಲಿದು ನಲಿಸುವ ವಿವಿಧ ರೀತಿಯ ಹೂಗಳ ಚೆಂದದ ವಯ್ಯಾರ ಎತವರನ್ನೂ ತನ್ನತ್ತ ಸೆಳೆಯುತ್ತದೆ.
ಇದನ್ನೂ ಓದಿ;-JOG FALLS | ಮೂರು ತಿಂಗಳು ಪ್ರವಾಸಿಗರಿಗೆ ನಿರ್ಬಂಧ ಕಾರಣ ಇಲ್ಲಿದೆ.
ಬೆಂಗಳೂರಿನಿಂದ 61 ಕಿಲೋ ಮೀಟರ್ ದೂರದಲ್ಲಿರುವ ನಂದಿ ಬೆಟ್ಟ ನಂದಿದುರ್ಗ ಎಂದು ಕರೆಯುತ್ತಾರೆ.
ನಂದಿ ಬೆಟ್ಟವು ಸಮುದ್ರ ಮಟ್ಟದಿಂದ 1,478 ಮೀಟರ್ ಅಂದರೆ 4,850 ಅಡಿಗಳಷ್ಟು ಎತ್ತರದಲ್ಲಿದೆ.
ಯೋಗ ನಂದೀಶ್ವರ ದೇವಾಲಯದ ಹೊರಭಾಗವನ್ನು ಕಾವಲು ಕಾಯುತ್ತಿರುವ ಗೂಳಿ ನಂದಿಯ ಅದ್ಭುತ ಪ್ರತಿಮೆಯಿದೆ. ಆದ್ದರಿಂದ ಈ ಸ್ಥಳಕ್ಕೆ ನಂದಿ ಬೆಟ್ಟ ಎಂದು ಹೆಸರಿಸಲಾಗಿದೆ. ಯೋಗ ನಂದೀಶ್ವರ ದೇವಾಲಯವು ಬೆಟ್ಟಗಳ ಮೇಲೆ ನೆಲೆಗೊಂಡಿದೆ ಮತ್ತು ಶಿವನ ವಾಸಸ್ಥಾನವಾಗಿದೆ.

ಹೀಗಾಗಿ ಪರಿಸರದ ಜೊತೆ ಧಾರ್ಮಿಕ ಕ್ಷೇತ್ರವೂ ಇದಾಗಿದ್ದು ರಾಜ್ಯ ಹೊರ ರಾಜ್ಯದ ಪ್ರವಾಸಿಗರ ಮೆಚ್ಚಿನ ತಾಣವೂ ಹೌದು.
ಸಧ್ಯ ಹೊಸವರ್ಷಾಚರಣೆ ಸಂದರ್ಭದಲ್ಲಿ ಇಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸುತ್ತಿದೆ.