Bhatkal:ಪೋಷಕ ನಿರ್ಲಕ್ಷ -ನಾಲೆಗೆ ಬಿದ್ದು ಎರಡು ವರ್ಷದ ಹೆಣ್ಣುಮಗು ಸಾವು ವಿಡಿಯೋ ನೋಡಿ
Bhatkal:ಪೋಷಕ ನಿರ್ಲಕ್ಷ -ನಾಲೆಗೆ ಬಿದ್ದು ಎರಡು ವರ್ಷದ ಹೆಣ್ಣುಮಗು ಸಾವು ವಿಡಿಯೋ ನೋಡಿ
ಕಾರವಾರ:- ಪೋಷಕರ ನಿರ್ಲಕ್ಷ ದಿಂದ ಆಟವಾಡುತಿದ್ದ ಎರಡು ವರ್ಷದ ಹೆಣ್ಣುಮಗು ನಾಲೆಗೆ ಮಗು ಬಿದ್ದು ಸಾವು ಕಂಡ ಘಟನೆ ಉತ್ತರ ಕನ್ನಡ (uttara kannada) ಜಿಲ್ಲೆಯ ಭಟ್ಕಳದ ಜಾಲಿ ಪಟ್ಟಣ ವ್ಯಾಪ್ತಿಯ ಆಝಾದ್ ನಗರದಲ್ಲಿ ನಡೆದಿದೆ. ತೌಸೀಫ್ ಮತ್ತು ಅರ್ಜು ದಂಪತಿಯ ಎರಡು ವರ್ಷದ ಹೆಣ್ಣುಮಗುವಾಗಿದ್ದು , ನಿನ್ನೆ ಮದ್ಯಾಹ್ನದ ವೇಳೆ ಮನೆಯ ಹೊರಗೆ ಮಗು ಆಟವಾಡುತಿದ್ದು ಈ ವೇಳೆ ಎದುರಿಗಿದ್ದ ಕಾಲುವೆಯೊಳಗೆ ಮಗು ಬಿದ್ದಿದೆ. ಸ್ಥಳೀಯರು ತಕ್ಷಣ ಮಗುವನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಸಿದರೂ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅಸುನೀಗಿದೆ. ಇನ್ನು ಈ ಕುರಿತು ಪೋಷಕರು ಇದುವರೆಗೂ ಠಾಣೆಗೆ ದೂರು ನೀಡಿಲ್ಲ. ಇದೀಗ ಸಿಸಿ ಕ್ಯಾಮರಾದ ವಿಡಿಯೋ ತುಣುಕು ಹೊರಬಿದ್ದಿದ್ದು ಘಟನೆ ಬೆಳಕಿಗೆ ಬಂದಿದೆ.
Bhatkal : ನೀರಿನಲ್ಲಿ ಕೊಚ್ಚಿಹೋಗಿ ವ್ಯಕ್ತಿ ಸಾವು.
ಮಳೆಯ ಅಬ್ಬರಕ್ಕೆ ನೀರಿನಲ್ಲಿ ಕೊಚ್ಚಿಹೋಗಿ ವ್ಯಕ್ತಿ ಸಾವು ಕಂಡ ಘಟನೆ ಭಟ್ಕಳದ ಬೆಳಲಖಂಡ ಗ್ರಾಮದಲ್ಲಿ ನಡೆದಿದೆ.ಮಹಾದೇವ ನಾರಾಯಣ ದೇವಾಡಿಗ ಸಾವುಕಂಡ ವ್ಯಕ್ತಿಯಾಗಿದ್ದು ,ಕೆಲಸ ಮುಗಿಸಿ ಮನೆಗೆ ಬರುವ ವೇಳೆ ನೀರಿನಲ್ಲಿ ಕೊಚ್ಚಿಹೋಗಿ ಸಾವು ಕಂಡಿದ್ದಾರೆ ಎಂದು ಅವರ ಪತ್ನಿ ದೂರಿನಲ್ಲಿ ತಿಳಿಸಿದ್ದು ,ಘಟನೆ ಸಂಬಂಧ ಭಟ್ಕಳ (bhatkal) ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.