Bhatkal: ಅರಣ್ಯದಲ್ಲಿ ಗೋವುಗಳ ಅಸ್ಥಿಪಂಜರ ಪತ್ತೆ ಪ್ರಕರಣ ಬೆನ್ನಲ್ಲೇ ಈವರೆಗೆ ಸಿಕ್ತು 2425 ಕೆಜಿ ಗೋಮಾಂಸ!
Bhatkal: ಅರಣ್ಯದಲ್ಲಿ ಗೋವುಗಳ ಅಸ್ಥಿಪಂಜರ ಪತ್ತೆ ಪ್ರಕರಣ ಬೆನ್ನಲ್ಲೇ ಈವರೆಗೆ ಸಿಕ್ತು 2425 ಕೆಜಿ ಗೋಮಾಂಸ!
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ(bhatkal) ಅರಣ್ಯದಲ್ಲಿ ನೂರಾರು ಗೋವುಗಳ ಅಸ್ಥಿಪಂಜರ ಸಿಕ್ಕ ಪ್ರಕರಣಕ್ಕೆ ಬಿಗ್ ಟ್ವಿಷ್ಟ್ ಸಿಕ್ಕಿದೆ.ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದ್ದು ,ಇನ್ನಷ್ಟು ಗೋಕಳ್ಳರ ಹೆಡೆಮುರಿ ಕಟ್ಟಲು ಪೊಲೀಸರು ಸಿದ್ದವಾಗಿದ್ದಾರೆ.
ಅರಣ್ಯದಲ್ಲಿ ಎಲ್ಲೆಂದರಲ್ಲಿ ಬಿದ್ದ ರಾಶಿ ರಾಶಿ ಗೋವುಗಳ ಅಸ್ಥಿಪಂಜರ. ಎಂತವರ ಕರಳೂ ಚುರುಕ್ ಎನ್ನದಿರದು. ಹಲವು ಊರುಗಳಲ್ಲಿ ಕದ್ದ ಗೋವುಗಳನ್ನ ಭಟ್ಕಳಕ್ಕೆ ತಂದು ಮಾಂಸಕ್ಕಾಗಿ ಕಡಿದ ನಂತರ ಉಳಿದ ಮೂಳೆಗಳನ್ನು ಅರಣ್ಯದಲ್ಲಿ ದಲ್ಲಿ ಹಾಕಿ ಪರಾರಿಯಾಗುತಿದ್ದರು.

ಹೌದು ಭಟ್ಕಳದ ಮಗ್ದೂಂ ಕಾಲೂನಿ ಬಳಿಯ ಬೆಳ್ನೆ ಗ್ರಾಮದ ಸರ್ವೆ ನಂಬರ್ 74 ರ ಭಾಗದಲ್ಲಿ ಸಿಕ್ಕ ರಾಶಿ ರಾಶಿ ಮೂಳೆಗಳು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿತ್ತು. ಇನ್ನು ಹಿಂದೂಪರ ಹೋರಾಟಗಾರರು ಸ್ಥಳಕ್ಕೆ ತೆರಳಿ ವಿಡಿಯೋ ಚಿತ್ರೀಕರಿಸಿ ಘಟನೆಯನ್ನು ಖಂಡಿಸಿದ್ದರು. ಆದರೇ ಈ ವಿಡಿಯೋಗಳು ಸುಳ್ಳು ಕೋಮು ಸಂಘರ್ಷ ನಡೆಸಲು ತಂತ್ರಜ್ಞಾನ ಬಳಸಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಮಗ್ದೂಂ ಕಾಲೋನಿಯ ತಾಹೀರ್ ಮಸ್ತಾನ್ ಎಂಬಾತ ಕೆಲವರ ಮೇಲೆ ದೂರು ನೀಡಿದ್ದರು. ಇನ್ನು ಸ್ಥಳಕ್ಕೆ ತೆರಳಿದ್ದ ಪೊಲೀಸರು,ಪುರಸಭೆ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಗೋವುಗಳ ಮೂಳೆ ಇರುವುದನ್ನು ಪತ್ತೆ ಮಾಡಿದ್ದರು. ಇನ್ನು ಬೆಳ್ನೆ ಭಾಗದ ಅರಣ್ಯಾಧಿಕಾರಿ ಭಟ್ಕಳ (bhatkal)ಶಹರ ಠಾಣೆಯಲ್ಲಿ ದೂರು ನೀಡಿದ್ದು ಇದರ ಬೆನ್ನಲ್ಲೇ ಈ ಪ್ರಕರಣ ಸಂಬಂಧ ಎರಡು ತಂಡಗಳನ್ನು ಮಾಡಿ ತನಿಖೆ ಕೈಗೊಂಡಿದ್ದು ,ಇದೀಗ ಭಟ್ಕಳದ ಮೊಹ್ಮದ್ ಸಮಾನ್ ,ಮಹ್ಮದ್ ರಾಹೀನ್ ಎಂಬ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ಭಟ್ಕಳದ ಅರಣ್ಯದಲ್ಲಿ ಸಿಕ್ಕ ಗೋವುಗಳ ಅಸ್ಥಿಪಂಚರದ ಬೆನ್ನುಬಿದ್ದ ಭಟ್ಕಳ ಶಹರ ಠಾಣೆಯ ಸಿಪಿಐ ದಿವಾಕರ್ ನೇತ್ರತ್ವದ ಪಿ.ಎಸ್.ಐ ನವೀನ್ ರವರ ತಂಡ ಇಬ್ಬರನ್ನು ಬಂಧಿಸಿ ಉಳಿದ ಗೋಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇನ್ನು ನಿರಂತರವಾಗಿ ಜಿಲ್ಲೆಯಲ್ಲಿ ಗೋ ಕಳ್ಳತನ ಹತ್ಯೆ ನಡೆಯುತ್ತಿದೆ.ಈ ಒಂದು ವರ್ಷದಲ್ಲಿ 41 ಪ್ರಕರಣ ದಾಖಲಿಸಲಾಗಿದ್ದು , 98 ಜನ ಅಪರಾಧಿಗಳನ್ನು ಜೈಲಿಗೆ ಕಳುಹಿಸಲಾಗಿದೆ. ಇದಲ್ಲದೇ 191 ಹಸುಗಳನ್ನ ರಕ್ಷಣೆ ಮಾಡಿ 2425 ಕೆಜಿ ಗೋ ಮಾಂಸವನ್ನು ಸೀಝ್ ಮಾಡಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲೆಯ ಎಸ್.ಪ ದೀಪನ್ ಮಾಹಿತಿ ನೀಡಿದ್ದಾರೆ.
Bhatkal| ಅರಣ್ಯದಲ್ಲಿ ರಾಶಿ-ರಾಶಿ ಗೋಮೂಳೆ ಪತ್ತೆ ಪ್ರಕರಣ -ಇಬ್ಬರು ಆರೋಪಿಗಳ ಬಂಧನ
ಸದ್ಯ ಭಟ್ಕಳದಲ್ಲಿ ಸಿಕ್ಕ ರಾಶಿ ರಾಶಿ ಗೋವುಗಳ ಅಸ್ಥಿಪಂಜರದ ಬೆನ್ನಹಿಂದೆ ಬಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಆದರೇ ಇನ್ನೂ ಹಲವರು ಈ ಘಟನೆಯ ಹಿಂದೆ ಇದ್ದು ಅವರ ಬಂಧನಕ್ಕೂ ಬಲೆ ಬೀಸಿದ್ದಾರೆ. ಅದರೇ ಜಿಲ್ಲೆಯಲ್ಲಿ ನಿರಂತರ ಗೋವುಗಳ ಹತ್ಯೆ ನಡೆಯುವುದು ನಿಲ್ಲದಿರುವುದು ದುರಂತ.