Bhatkal| ಗೋ ಬುರುಡೆ ಪ್ರಕರಣ| ಬಯಲು ಮಾಡಿದವರೇ ಆರೋಪಿಗಳು!
Bhatkal| ಗೋ ಬುರುಡೆ ಪ್ರಕರಣ| ಬಯಲು ಮಾಡಿದವರೇ ಆರೋಪಿಗಳು!
ಕಾರವಾರ/Bhatkal :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಅರಣ್ಯ ಪ್ರದೇಶದಲ್ಲಿ ನೂರಾರು ಗೋವುಗಳ ಎಲುಬುಗಳು ಪತ್ತೆಯಾದ ಪ್ರಕರಣದಲ್ಲಿ ಪ್ರಕರಣದ ತನಿಖೆಯನ್ನೇ ದಾರಿ ತಪ್ಪಿಸಲು ಸ್ಥಳೀಯ ಅನ್ಯ ಕೋಮಿನ ವ್ಯಕ್ತಿಯಿಂದ ಯತ್ನ ನಡೆದಿದೆಯೇ ಎಂಬ ಅನುಮಾನ ಹುಟ್ಟಿದೆ.
ಗೋವುಗಳ ಬುರುಡೆ ಪತ್ತೆ ಮಾಡಿ ಘಟನೆ ಹೊರಗೆಳದವರನ್ನೇ ಇಲ್ಲಿ ಆರೋಪಿಗಳಂತೆ ಬಿಂಬಿಸಲಾಗಿದೆ.
Bhatkal|ಒಂದು ವಿಡಿಯೋ ದಿಂದ ಬಯಲಾಯ್ತು ಭಟ್ಕಳ ಬುರುಡೆ ರಹಸ್ಯ| ಅರಣ್ಯಾಧೀಕಾರಿ ಇಂದ ದೂರು ದಾಖಲು
ಅಧಿಕಾರಿಗಳು ಸ್ಥಳಕ್ಕೆ ತೆರಳಿ ರಾಶಿ ರಾಶಿ ಮೂಳೆ ಪತ್ತೆ ಮಾಡಿದ್ರೂ ಪ್ರಕರಣ ಸುಳ್ಳು ಎಂದು ಬಿಂಬಿಸಲು ಯತ್ನಮಾಡಲಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹಬ್ಬಿಸಿದ್ದಾರೆ ಎಂದು ಭಟ್ಕಳ ಶಹರ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದೆ.ಟ್ಕಳ ಮಗ್ದೂಂ ಕಾಲೋನಿ ನಿವಾಸಿ ತಾಹೀರ್ ಮಸ್ತಾನ್ ಎಂಬಾತ ದೂರು ನೀಡಿದ್ದು ,ಭಟ್ಕಳದ
ಶ್ರೀನಿವಾಸ, ಶ್ರೀಕಾಂತ್ ಹಾಗೂ ಇನ್ನೂ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹಬ್ಬಿಸಿ ಉದ್ದೇಶಪೂರ್ವಕ ಸಮಾಜದಲ್ಲಿ ಶಾಂತಿ-ಭಂಗ ಮಾಡಿದ್ದಾರೆ.ಸೆ.10ರಂದು ಸಂಜೆ 5:30 ರಿಂದ 6:00 ಗಂಟೆ ನಡುವೆ ಶ್ರೀನಿವಾಸ ಭಟ್ಕಳ, ಶ್ರೀಕಾಂತ್ ಭಟ್ಕಳ ಹಾಗೂ ಇತರ ನಾಲ್ವರು ಸೇರಿ ಮಗ್ದೂಮ್ ಕಾಲೋನಿ ಗುಡ್ಡ ಪ್ರದೇಶ ತೆರಳಿದ್ದರು,ಭಟ್ಕಳದಲ್ಲಿ ಗುಂಪು ಕಟ್ಟಿಕೊಂಡು ಬಂದು ಸುತ್ತಾಡಿ ಹೋಗಿದ್ದು, ಇದನ್ನು ಕಣ್ಣಾರೆ ನೋಡಿದ್ದೇನೆ,ಸೆ.11ರಂದು ಅಲ್ಲಿ ಕೆಲವು ಪ್ರಾಣಿಗಳ ಎಲುಬುಗಳು ಕಂಡುಬಂದಿವೆ ಎಂದು ಪೋಟೊಗಳನ್ನು ಎಡಿಟ್ ಮಾಡಿದ್ದಾರೆ,
ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಹಾಗೂ ಭಯ ಹುಟ್ಟಿಸುವ ಮಾಹಿತಿ ಸಾರ್ವಜನಿಕರಲ್ಲಿ ಹರಡಿಸಿದ್ದಾರೆ.ಈ ಕೃತ್ಯ ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಶಾಂತಿ ಭಂಗ ಉಂಟುಮಾಡುವ ಉದ್ದೇಶದಿಂದ ಮಾಡಲ್ಪಟ್ಟಿದೆ,ಇದರಿಂದ ಸ್ಥಳೀಯರಲ್ಲಿ ಆತಂಕ, ಗೊಂದಲ ಉಂಟಾಗಿದ್ದು, ಶಾಂತಿ ಕದಡುವ ಸಾಧ್ಯತೆಗಳು ಹೆಚ್ಚಾಗಿವೆ.ಈ ರೀತಿಯ ಕೃತ್ಯಗಳು ಭಾರತಿಯ ನ್ಯಾಯ ಸಂಹಿತೆಯ ಅನೇಕ ವಿಧಾನದಡಿಯಲ್ಲಿ ಶಿಕ್ಷಾರ್ಹವಾಗಿದೆ,ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಪ್ರಾರ್ಥಿಸುತ್ತೇನೆ ಎಂದು ದೂರು ನೀಡಿದ್ದಾರೆ.
ಭಟ್ಕಳ ಮಗ್ದೂಂ ಕಾಲೋನಿ ಹಿಂದೆ ಅರಣ್ಯ ಪ್ರದೇಶದ ಗುಡ್ಡ ಭಾಗ ಸರ್ವೇ ನಂಬರ್ 74ರಲ್ಲಿ ಭಾರೀ ಪ್ರಮಾಣದಲ್ಲಿ ದನಗಳ ಮೂಳೆ ಪತ್ತೆಯಾಗಿತ್ತು.
ವರದಿ ಪ್ರಸಾರ ಬೆನ್ನಲ್ಲೇ ಸ್ಥಳಕ್ಕೆ ಡಿವೈಎಸ್‌ಪಿ ಮಹೇಶ್ ಕೆ., ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವುಡ,
ಪಿಎಸ್‌ಐ ನವೀನ, ಪಶುವೈದ್ಯಾಧಿಕಾರಿ, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದರು ,ಸ್ಥಳದಲ್ಲಿ ಭಾರೀ ಪ್ರಮಾಣದ ಗೋವುಗಳ ಮೂಳೆಗಳು ಪತ್ತೆಯಾದ ಹಿನ್ನೆಲೆ ಭಟ್ಕಳ ನಗರ ಠಾಣೆಯಲ್ಲಿ ಅರಣ್ಯಾಧಿಕಾರಿಗಳೇ ಕುದ್ದು ಪ್ರಕರಣ ದಾಖಲಿಸಿದ್ದರು.