ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Birth Waiting Homes: ಉತ್ತರ ಕನ್ನಡ ಜಿಲ್ಲೆಯಲ್ಲೊಂದು ಜನನಕ್ಕೆ ಕಾಯುವ ಮನೆ! ಏನಿದರ ವಿಶೇಷ? ವಿವರ ನೋಡಿ

ಉತ್ತರ ಕನ್ನಡದಲ್ಲಿ ಜನನಕ್ಕೆ ಕಾಯುವ ಮನೆಗಳು! ಗುಡ್ಡಗಾಡು ಪ್ರದೇಶದ ಗರ್ಭಿಣಿ ಮಹಿಳೆಯರಿಗೆ ಸುರಕ್ಷಿತ ಹೆರಿಗೆ, ಉಚಿತ ಸೇವೆ ಮತ್ತು ಆರೈಕೆ ಸೌಲಭ್ಯ.
10:53 PM Sep 09, 2025 IST | ಶುಭಸಾಗರ್
ಉತ್ತರ ಕನ್ನಡದಲ್ಲಿ ಜನನಕ್ಕೆ ಕಾಯುವ ಮನೆಗಳು! ಗುಡ್ಡಗಾಡು ಪ್ರದೇಶದ ಗರ್ಭಿಣಿ ಮಹಿಳೆಯರಿಗೆ ಸುರಕ್ಷಿತ ಹೆರಿಗೆ, ಉಚಿತ ಸೇವೆ ಮತ್ತು ಆರೈಕೆ ಸೌಲಭ್ಯ.

Birth Waiting Homes: ಉತ್ತರ ಕನ್ನಡ ಜಿಲ್ಲೆಯಲ್ಲೊಂದು ಜನನಕ್ಕೆ ಕಾಯುವ ಮನೆ! ಏನಿದರ ವಿಶೇಷ? ವಿವರ ನೋಡಿ

Advertisement

ಕಾರವಾರ :- ಮಹಿಳೆ ಮತ್ತು ನವಜಾತು ಶಿಶುವಿನ ಮರಣ ತಡೆಗಟ್ಟಲು ಸರಕರವು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ.

ಪ್ರಸ್ತುತ ಗುಡ್ಡಗಾಡು ಪ್ರದೇಶ ಮತ್ತು ಸೂಕ್ತ ರಸ್ತೆ ಸಂಪರ್ಕವಿಲ್ಲದ, ಬುಡಕಟ್ಟು ಸಮುದಾಯದ ಗ್ರಾಮದಲ್ಲಿನ ಗರ್ಭಿಣಿ ಮಹಿಳೆಯರಿಗೆ ಸುರಕ್ಷಿತ ಹೆರಿಗೆ ಮತ್ತು ಆರೋಗ್ಯಪೂರ್ಣ ಮಗುವಿನ ಜನನವಾಗುವ ನಿಟ್ಟಿನಲ್ಲಿ , ಜನನಕ್ಕೆ ಕಾಯುವ ಮನೆಯ (Birth Waiting  Homes) ಸೌಲಭ್ಯವನ್ನು ರಾಜ್ಯದ ಚಾಮರಾಜನಗರ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದೆ.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.80 ಕ್ಕೂ ಅಧಿಕ ಭಾಗ ಅರಣ್ಯದಿಂದ ಕೂಡಿದ್ದು, ಇಲ್ಲಿನ ಹಲವಾರು ಗ್ರಾಮಗಳು ಅರಣ್ಯ ಭಾಗದಲ್ಲಿದ್ದು ರಾತ್ರಿಯ ವೇಳೆ ಮತ್ತು ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ಸಕಾಲದಲ್ಲಿ ಆಸ್ಪತ್ರೆಗಳಿಗೆ ತಲುಪುವುದು ಕಷ್ಟಸಾಧ್ಯ.ಅದರಲ್ಲೂ ಇಂತಹ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರು ಇನ್ನೂ ಹೆಚ್ಚಿನ ತೊಂದರೆ ಎದುರಿಸಲಿದ್ದಾರೆ.

Uttara kannada: ಉತ್ತರ ಕನ್ನಡ ಜಿಲ್ಲೆಯ 53 ದ್ವೀಪಗಳಲ್ಲಿ ಭದ್ರತೆ ಹೆಚ್ಚಳಕ್ಕೆ ಸಿಸಿ ಕ್ಯಾಮರ ಅಳವಡಿಕೆ- ಎಸ್.ಪಿ ಮಿಥುನ್ ಹೆಚ್.ಎನ್

ಆದ್ದರಿಂದ ಗರ್ಭಿಣಿ ಮಹಿಳೆಯರ ಸುರಕ್ಷತೆಗಾಗಿ ಜನನಕ್ಕೆ ಕಾಯುವ ಮನೆಯ ಸೌಲಭ್ಯವನ್ನು ಜಿಲ್ಲೆಯ ಸಿದ್ದಾಪುರ, ಮುಂಡಗೋಡು, ಯಲ್ಲಾಪುರ ಮತ್ತು ಜೋಯಿಡಾ ತಾಲೂಕು ಆಸ್ಪತ್ರೆಗಳಲ್ಲಿ ಜಾರಿಗೆ ತರಲಾಗಿದೆ.

ಈ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಗರ್ಭಿಣಿ ಮಹಿಳೆಯರಿಗಾಗಿ 6 ಹಾಸಿಗೆಯ ಬೆಡ್ ಗಳನ್ನು ಕಾಯ್ದಿರಿಸಿದ್ದು, ಗರ್ಭ ಧರಿಸಿ 38 ವಾರಗಳು ಅಥವಾ ಅದಕ್ಕೂ ಮೇಲ್ಪಟ್ಟ , ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಗದ ಗುಡ್ಡಗಾಡು ಪ್ರದೇಶದ, ರಸ್ತೆ ಸಂಪರ್ಕ ಇಲ್ಲದ ಪ್ರದೇಶದ ಗರ್ಭೀಣಿ ಮಹಿಳೆ ಈ ಕೇಂದ್ರಕ್ಕೆ ದಾಖಲಾಗಬಹುದಾಗಿದೆ.

ಆಕೆಗೆ ಜನನವಾಗುವವರೆಗೆ ಈ ಕೇಂದ್ರದಲ್ಲಿ ಆಕೆಗೆ ಮತ್ತು ಆಕೆಯ ಒಬ್ಬರು ಸಹಾಯಕರಿಗೆ ಉಚಿತ ಊಟ ಉಪಹಾರದೊಂದಿಗೆ , ಉತ್ತಮ ರೀತಿಯ ಚಿಕಿತ್ಸೆ ಮತ್ತು ಆರೈಕೆಯ ಮೂಲಕ ಸುರಕ್ಷಿತವಾಗಿ ಹೆರಿಗೆಯಾಗುವಂತೆ ನೋಡಿಕೊಳ್ಳಲಾಗುವುದು.

ಈ ಕೇಂದ್ರದಲ್ಲಿ ದಾಖಲಾಗುವ ಮಹಿಳೆಗೆ ಎಲ್ಲಾ ರೀತಿಯಲ್ಲೂ ಸುರಕ್ಷತೆ ಒದಗಿಸುವ ದೃಷ್ಠಿಯಿಂದ ಈ ಯೋಜನೆಗಾಗಿಯೇ ಪ್ರತ್ಯೇಕವಾಗಿ ಒಬ್ಬರು ಶುಶ್ರೂಶಕರು ಮತ್ತು ಸೆಕ್ಯುರಿಟಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಕೂಡ ಯೋಜನೆಯಲ್ಲಿ ಅನುಮತಿ ನೀಡಲಾಗಿದೆ.

ಹೆರಿಗೆಯಾಗುವವರೆಗೆ ಮತ್ತು ಜನನದ ನಂತರವೂ ಈ ಕೇಂದ್ರದಲ್ಲಿ ಹೆಚ್ಚಿನ ಮುತುವರ್ಜಿಯಿಂದ ಆರೈಕೆ ಮಾಡಲಾಗುವುದು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಜನನಕ್ಕೆ ಕಾಯುವ ಮನೆಯ (Birth Waiting  Homes) ಸೌಲಭ್ಯವನ್ನು ಈಗಾಗಲೇ ಆಗಸ್ಟ್ ತಿಂಗಳಲ್ಲಿ ಜಾರಿಗೊಳಿಸಲಾಗಿದೆ.

ಈ ಕೇಂದ್ರದಲ್ಲಿ ಪ್ರಸವ ಪೂರ್ವದಲ್ಲಿ ಮತ್ತು ಪ್ರಸವ ನಂತರ ಗರ್ಭಿಣಿ ಮಹಿಳೆ ಮತ್ತು ನವಜಾತ ಶಿಶುಗಳಿಗೆ ಉತ್ತಮ ಆರೈಕೆ ನೀಡಲಾಗುತ್ತಿದ್ದು, ಪ್ರಸವ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಕಂಡು ಬಂದಲ್ಲಿ ಸಕಾಲದಲ್ಲಿ ಹೆಚ್ಚಿನ ಚಿಕಿತ್ಸೆಗೆ ಸಮೀಪದ ಆಸ್ಪತ್ರೆಗಳಿಗೆ ಆಂಬುಲೆನ್ಸ್ ಮೂಲಕ ಸ್ಥಳಾಂತರಿಸಿ ಗರ್ಭಿಣಿ ಮಹಿಳೆಯ ಸುರಕ್ಷತೆಗೆ ಪ್ರಥಮಾಧ್ಯತೆ ನೀಡಲಾಗುತ್ತಿದೆ.

ಇದುವರೆಗೆ ಜಿಲ್ಲೆಯಲ್ಲಿ 10 ಗರ್ಭಿಣಿ ಮಹಿಳೆಯರನ್ನು ಈ ಕೇಂದ್ರಗಳಲ್ಲಿ ದಾಖಲು ಮಾಡಿಕೊಳ್ಳಲಾಗಿದ್ದು, 8 ಮಂದಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದೆ.

 ಪ್ರಸ್ತುತ ಇಬ್ಬರು ಮಹಿಳೆಯರು ಈ ಕೇಂದ್ರದಲ್ಲಿದ್ದಾರೆ ಎಂದು ಡಾ.ನಟರಾಜ್, ಆರ್.ಸಿ.ಹೆಚ್. ಅಧಿಕಾರಿ, ಆರೋಗ್ಯ ಇಲಾಖೆ ಇವರು ಮಾಹಿತಿ ನೀಡಿದ್ದಾರೆ.

ಯೋಜನೆ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲ!

ಆಶಾ ಕಾರ್ಯಕರ್ತರಿಂದ ಗರ್ಭಿಣಿ ಮಹಿಳೆಯ ಆರೋಗ್ಯ ವಿಚಾರಣೆ(ಸಂಗ್ರಹ ಚಿತ್ರ.Google)

ಇನ್ನು ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ. ಆದರೇ ಮಾಹಿತಿ ಕೊರತೆಯಿಂದ ಅವಷ್ಯಕತೆ ಇರುವ ಮಹಿಳೆಯರಿಗೆ ಈ ಸೌಲಭ್ಯ ದೊರಕದೇ ಇರುವಂತೆ ಆಗಿದೆ. ಯೋಜನೆ ಜಾರಿಗೆ ತಂದರೂ ಆರೋಗ್ಯ ಇಲಾಖೆ ಈ ಮಾಹಿತಿಯನ್ನು ಹೆಚ್ವು ಪ್ರಸರ ಪಡಿಸಿಲ್ಲ.

Yallapur :ವಿದ್ಯಾರ್ಥಿ ಹತ್ಯೆ ಮಾಡಲು ಮಚ್ಚು ಬೀಸಿದ್ದ ರೌಡಿ ಶೀಟರ್ ಕಾಲಿಗೆ ಗುಂಡೇಟು! 

ಜಿಲ್ಲೆಯಲ್ಲಿ ಗುಡ್ಡಗಾಡು ಪ್ರದೇಶವಿದ್ದು ಗರ್ಭಿಣಿ ಸ್ತ್ರೀಯರು ಪ್ರಸವಕ್ಕೆ ಆಸ್ಪತ್ರೆಗೆ ತೆರಳಲು ಕಷ್ಟಪಡಬೇಕಿದೆ. ಈ ಯೋಜನೆ ಸಂಪೂರ್ಣ ಉಚಿತವಾಗಿದ್ದು, ಅಂಬುಲೆನ್ಸ್ ಸೇವೆ ಸಹ ಒಳಗೊಂಡಿದೆ.

ಗರ್ಭಿಣಿಯಾಗಿ ನಿಗದಿ ದಿನಾಂಕ ಬರುವ ಮೊದಲೇ ಆಸ್ಪತ್ರೆಗೆ ಸೇರಬಹುದಾಗಿದ್ದು ಎಲ್ಲಾ ಖರ್ಚನ್ನು ಆರೋಗ್ಯ ಇಲಾಖೆ ನೀಡುತಿದ್ದು ಜಿಲ್ಲೆಯ ಜನ ಇದನ್ನು ಬಳಸಿಕೊಳ್ಳಬೇಕಾಗಿದೆ.

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ
Advertisement
Tags :
Birth Waiting Homes KarnatakaFree Maternity Care SchemeJoida Birth Waiting HomesKarnataka Government Health ProgramMaternity Care in KarnatakaMundgod Taluk Health ServicesSafe Delivery SchemeSiddapur Hospital FacilitiesUttara Kannada Health SchemeYellapur Healthcare for Women
Advertisement
Next Article
Advertisement