Joida news: ಈಜು ಕೊಳಕ್ಕೆ ಬಿದ್ದು ಮಗು ಸಾ**
Joida news: ಈಜು ಕೊಳಕ್ಕೆ ಬಿದ್ದು ಮಗು ಸಾ**
ಕಾರವಾರ :- ಹೋಂ ಸ್ಟೇಯೊಂದರ ಈಜುಕೊಳದಲ್ಲಿಪುಟ್ಟ ಬಾಲಕ ಮುಳಗಿ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ(joida) ತಾಲೂಕಿನ ಗಣೇಶ ಗುಡಿಯ ಬಾಡಗುಂದದ ಅಶೋಕ ಹೋಂ ಸ್ಟೇಯಲ್ಲಿ ಇಂದು(ಭಾನುವಾರ) ಸಂಜೆ ನಡೆದಿದೆ.
ಹುಸೇನೈನ್ ರಹೀಮ್ ಖಾನ್ (6), ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಪುಟ್ಟ ಬಾಲಕನಾಗಿದ್ದು, ಬೆಳಗಾವಿಯಿಂದ ಪ್ರವಾಸಕ್ಕೆಂದು ಕುಟುಂಬಸ್ಥರ ಜೊತೆ ಗಣೇಶಗುಡಿಯ ಅಶೋಕ ಹೋಂಸ್ಟೇಗೆ ಬಂದು ತಂಗಿದ್ದರು.
ಪುಟ್ಟ ಬಾಲಕ ಪೊಷಕರ ಗಮನಕ್ಕೆ ಬಾರದೇ ಈಜುಕೊಳದಲ್ಲಿ ಇಳಿದಿದ್ದು ಮುಳುಗಿ ಮೃತಪಟ್ಟಿದ್ದಾನೆ.
ನೀರಲ್ಲಿ ಮುಳುಗಿದ್ದ ಬಾಲಕನನ್ನು ತಕ್ಷಣವೇ ದಾಂಡೇಲಿಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಘಟನೆ ಸಂಬಂಧ ಹೋಮ್ ಸ್ಟೇ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:-Joida :ಪೊಲೀಸರಿಗೆ ಜಾತಿ ನಿಂದನೆ -ಆರೋಪಿಗೆ ನ್ಯಾಯಾಂಗ ಬಂಧನ
ಈ ಹಿಂದೆ ಈ ಬಾಲಕನ ತಂದೆಯೂ ಈಜುಕೊಳದಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳಲಾಗುತಿದ್ದು ಒಂದು ನಿರ್ಲಕ್ಷ ಬಾಳಿ ಬೆಳಕಾಗಬೇಕಾದ ಮಗುವಿನ ಅಂತ್ಯ ಕಂಡಂತಾಗಿದೆ.