Dandeliಅಂಬೇವಾಡಿ ಕೈಗಾರಿಕಾ ಪ್ರದೇಶದಲ್ಲಿ ಹೆಜ್ಜೇನು ದಾಳಿ, ಏಳಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ
Dandeliಅಂಬೇವಾಡಿ ಕೈಗಾರಿಕಾ ಪ್ರದೇಶದಲ್ಲಿ ಹೆಜ್ಜೇನು ದಾಳಿ, ಏಳಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ
ಕಾರವಾರ :- ಉತ್ತರ ಕನ್ನಡ(uttara kannda) ಜಿಲ್ಲೆಯ ದಾಂಡೇಲಿ ನಗರದ ಅಂಬೇವಾಡಿಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಹೆಜ್ಜೇನು Honey Bee )ದಾಳಿಯಿಂದ ಏಳಕ್ಕೂ ಹೆಚ್ಚು ಜನ ಕಾರ್ಮಿಕರಿಗೆ ಗಾಯವಾಗಿ ಆಸ್ಪತ್ರೆ ಸೇರಿದ ಘಟನೆ ನಡೆದಿದೆ .

ಇದನ್ನೂ ಓದಿ:-Dandeli : ನಕಲಿ ನೋಡಿನ ಮಾಲೀಕ ಉತ್ತರ ಪ್ರದೇಶದಲ್ಲಿ ಬಂಧನ! ಏನಿದು ಈತನ ಕಥೆ?
ಅಂಬೇವಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಬಿಹಾತಿ ಗೋಡಾನ್ ಕಟ್ಟಡದ ಹೊರಬದಿಯಲ್ಲಿ 30ಕ್ಕೂ ಅಧಿಕ ಜೇನುಗೂಡುಗಳಿದ್ದು, ಇಲ್ಲಿ ಸುತ್ತಮುತ್ತ ಇರುವ ವಿವಿಧ ಸಣ್ಣ ಸಣ್ಣ ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರು ಪ್ರತಿದಿನವೂ ಭಯದಿಂದಲೇ ಕೆಲಸ ನಿರ್ವಹಿಸಬೇಕಾದ ಸ್ಥಿತಿಯಿದೆ. ಶುಕ್ರವಾರ ಹೆಜ್ಜೇನು ದಾಳಿ ಮಾಡಿದ್ದು, ಈ ಸಂದರ್ಭದಲ್ಲಿ ಹತ್ತಿರದ ಇನ್ನಿತರ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಏಳೆಂಟು ಕಾರ್ಮಿಕರಿಗೆ ಹೆಜ್ಜೇನು ಕಚ್ಚಿರುವುದರಿಂದ ಗಾಯವಾಗಿದೆ.
ಇದನ್ನೂ ಓದಿ:-Dandeli :ವಿದ್ಯುತ್ ಶಾಕ್,ಗುತ್ತಿಗೆದಾರ ಸಾ**
ಗಾಯಗೊಂಡವರ ಪೈಕಿ ನಿರ್ಮಲ ನಗರದ ಅನಿಲ್ ಮತ್ತು ಸಂತೋಷ ಹಾಗೂ ಗಾಂಧಿನಗರದ ಕಾರ್ತಿಕ್ ಮತ್ತು ಅಂಕಿತ್ ಇವರಿಗೆ ಹೆಚ್ಚಿನ ಪ್ರಮಾಣದ ಗಾಯವಾಗಿದ್ದು, ಇವರಿಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗಿದೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ಹೆಜ್ಜೇನುಗಳು ಅಂಬೇವಾಡಿ ಕೈಗಾರಿಕಾ ಪ್ರದೇಶದ ಬಿಹಾತಿ ಗೋಡನ್ ಕಟ್ಟಡದ ಹೊರಗಡೆ ಗೂಡು ಕಟ್ಟಿಕೊಂಡಿದ್ದು, ಸ್ಥಳೀಯ ಕಾರ್ಮಿಕರಿಗೆ ಪ್ರತಿ ದಿನ ಭಯದಲ್ಲೇ ಸಂಚರಿಸುವಂತಾಗಿದೆ.