ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Dharwad Cyborg insect robotics|ದುಂಬಿ ಕೀಟಕ್ಕೆ ಚಿಪ್‌ ಅಳವಡಿಸಿ ಬೇಹುಗಾರಿಕೆ ಹೊಸ ಅವಿಷ್ಕಾರಕ್ಕೆ ಹೆಜ್ಜೆ ಇಟ್ಟ ಕೃಷಿ ವಿವಿ

Dharwad Agri University unveils cyborg insect robotics. Beetles fitted with chips can aid defense, disaster management, surveillance & farming.
02:35 PM Sep 16, 2025 IST | ಶುಭಸಾಗರ್
Dharwad Agri University unveils cyborg insect robotics. Beetles fitted with chips can aid defense, disaster management, surveillance & farming.

Dharwad Cyborg insect robotics|ದುಂಬಿ ಕೀಟಕ್ಕೆ ಚಿಪ್‌ ಅಳವಡಿಸಿ ಬೇಹುಗಾರಿಕೆ ಹೊಸ ಅವಿಷ್ಕಾರಕ್ಕೆ ಹೆಜ್ಜೆ ಇಟ್ಟ ಕೃಷಿ ವಿವಿ.

Advertisement

 Dharwad Agri University unveils cyborg insect robotics. Beetles fitted with chips can aid defense, disaster management, surveillance & farming. 

ಧಾರವಾಡ: ಹೊರ ದೇಶಗಳಲ್ಲಿ ಜೇನು ಹುಳು ಬಳಸಿ (bee) ಮಾದಕ ವಸ್ತುಗಳ ಕಳ್ಳಸಾಗಾಣಿಕೆಯನ್ನು ತಡೆಯುವ ಕಾರ್ಯ ಯಶಸ್ಸು ಕಂಡಿದೆ. ಇದರ ಬೆನ್ನಲ್ಲೇ ಚೀನಾ ಸಹ ಕೀಟಗಳನ್ನು ಬಳಸಿ ಬೇಹುಗಾರಿಕೆ ನಡೆಸುವ ಕಾರ್ಯದಲ್ಲಿ ಯಶಸ್ಸು ಕಂಡಿದೆ.

ಆದ್ರೆ ಇದೀಗ ಭಾರತವೂ ಇದರ ಒಂದು ಹೆಜ್ಜೆ ಮುಂದಿಟ್ಟಿದೆ.ಬೇಹುಗಾರಿಕೆ, ವಿಪತ್ತು ನಿರ್ವಹಣೆ ಹಾಗೂ ಶೋಧನಾ ಕಾರ್ಯವನ್ನು ಬರೀ ಯಂತ್ರಗಳಷ್ಟೇ ಅಲ್ಲ. ಬದಲಿಗೆ ಸೂಕ್ಷ್ಮ ಯಂತ್ರಗಳೊಂದಿಗೆ ಜೀವಂತ ಕೀಟಗಳಿಂದಲೂ ಮಾಡಬಹುದು ಎಂಬುದನ್ನು ಧಾರವಾಡ (Dharwad) ಕೃಷಿ ಮೇಳದ (Krishi Mela) ವಿಸ್ಮಯಕಾರಿ ಕೀಟ ಪ್ರಪಂಚದಲ್ಲಿ ತೋರಿಸಿಕೊಡಲಾಗಿದೆ.

ಜೀವಂತ ಕೀಟಗಳು ಬೇಹುಗಾರಿಕೆ, ವಿಪತ್ತು ನಿರ್ವಹಣೆ ಹಾಗೂ ಶೋಧ ಕಾರ್ಯ ಮಾಡುವ ಪ್ರಯೋಗವನ್ನು ಧಾರವಾಡದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಅನಾವರಣ ಮಾಡಲಾಗಿದೆ. ಇಂತಹ ಬಲು ಅಪರೂಪದ ಪರಿಕಲ್ಪನೆಯನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯ ಪ್ರಯೋಗ ಮಾಡಿದೆ. ದೇಶದ ರಕ್ಷಣೆ ಮತ್ತು ಭದ್ರತೆಯ ದೃಷ್ಟಿಯಿಂದ ಈ ರೀತಿಯ ಪರಿಕಲ್ಪನೆಗೆ ಕೃಷಿ ವಿವಿ ಹೊಸ ರೂಪ ಕೊಟ್ಟಿದೆ

Advertisement

ಸೈಬರ್ ಟ್ರನ್ ರೋಬೋ ದುಂಬಿ(ಚಿತ್ರ ಕೃಪೆ -ಗೂಗಲ್ )

ಈ ಸಂಶೋಧನೆಗೆ ಸಂಬಂಧಿಸಿದಂತೆ ಕಳೆದ ಮೂರು ವರ್ಷಗಳಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗವು ಸಂಶೋಧನೆ ನಡೆಸಿ ಮಾಹಿತಿ ಕಲೆ ಹಾಕಿದೆ. ಇದೀಗ ಈ ಮಾಹಿತಿ ಒಳಗೊಂಡ ಪರಿಕಲ್ಪನೆಯನ್ನು ಮೇಳದಲ್ಲಿ ಅನಾವರಣಗೊಳಿಸಿದೆ. ಭವಿಷ್ಯದಲ್ಲಿ ಕೀಟಗಳನ್ನು ಯಾವೆಲ್ಲಾ ರೀತಿ ಸದ್ಬಳಕೆ ಮಾಡಿಕೊಳ್ಳಬಹುದೆಂಬ ಚಿಂತನೆಯಿಂದ ಈ ರೀತಿಯ ಪ್ರಯೋಗವನ್ನು ಮಾಡಲಾಗಿದೆ.

NAREGA| ಕೂಲಿ ಕೆಲಸದ ಹಣದಲ್ಲಿ ವಿದ್ಯಾಭ್ಯಾಸ ಪೂರೈಸಿದ ವಿದ್ಯಾರ್ಥಿಗೆ 7 ಚಿನ್ನದ ಪದಕ

ಕೀಟ ಪ್ರಪಂಚದಲ್ಲಿ ಅತೀ ದೊಡ್ಡ ಹೆಸರು ಚಿಟ್ಟೆಯದ್ದು, ಆದರೆ ಚಿಟ್ಟೆಗೆ ಹೋಲಿಸಿದರೆ ದುಂಬಿ ಹುಳುವೇ ಬೇಹುಗಾರಿಕೆ, ವಿಪತ್ತು ನಿರ್ವಹಣೆ ಹಾಗೂ ಶೋಧನಾ ಕಾರ್ಯಕ್ಕೆ ಸೂಕ್ತವಾಗಿದೆ ಎಂದೆನಿಸಿಕೊಂಡಿದೆ. ಅದರ ಜೀವಿತಾವಧಿ ಹಾಗೂ ಸೂಕ್ಷ್ಮ ಯಂತ್ರಗಳನ್ನು ಸುಲಭವಾಗಿ ಅಳವಡಿಸಲು ದೇಹದ ಆಕಾರವೂ ಸಹಕಾರಿಯಾಗಲಿದೆ. ಹೀಗಾಗಿ ದುಂಬಿ ಕೀಟಕ್ಕೆ ಸೂಕ್ಷ್ಮ ಚಿಪ್ ಅಳವಡಿಸುವ ಮೂಲಕ ಬೇಹುಗಾರಿಕೆ, ಶೋಧನಾ ಕಾರ್ಯವಷ್ಟೇ ಅಲ್ಲದೇ ರೈತಾಪಿ ಸಮುದಾಯವು ಕೂಡ ಕೃಷಿಯ ಚಟುವಟಿಕೆ, ಬೆಳೆವಣಿಗೆ ಹಾಗೂ ಕೀಟ-ರೋಗ ಬಾಧೆಗಳ ಬಗ್ಗೆಯೂ ನಿಗಾ ಇಡಬಹುದಾಗಿದೆ.

ಈ ಸಂಶೋಧನೆ ಕೀಟ ರೊಬೋಟಿಕ್ಸ್ (Cyborg insect robotics) ಎಂಬ ಪರಿಕಲ್ಪನೆ ಇದಾಗಿದ್ದು, ಇದು ಜೀವಂತವಾದ ಕೀಟವಾಗಿರದೆ ಎಲೆಕ್ಟ್ರಾನಿಕ್ ಜೀವಿಯಾಗಿದೆ. ಇದು ಬಹಳ ಕಡಿಮೆ ವಿದ್ಯುತ್ ಬಳಕೆಯಿಂದ ಚಲನೆ ಮಾಡಬಹುದಾಗಿದೆ.

Dharwad Cyborg insect robotics – ಪ್ರಮುಖ ಉಪಯೋಗಗಳು

1. ರಕ್ಷಣಾ ಮತ್ತು ಬೇಹುಗಾರಿಕೆ

ಗಡಿಭಾಗದಲ್ಲಿ ಕೀಟಗಳನ್ನು ಬಿಟ್ಟು ಅವುಗಳ ಮೂಲಕ ಶತ್ರು ಚಟುವಟಿಕೆಗಳನ್ನು ಪತ್ತೆಹಚ್ಚಬಹುದು. 30–40 ಕಿ.ಮೀ. ದೂರ ಪ್ರಯಾಣಿಸುವ ಸಾಮರ್ಥ್ಯವು ಸೇನೆಗೆ ಮಹತ್ವದ ಸಹಕಾರ ನೀಡುತ್ತದೆ.

2. ವಿಪತ್ತು ನಿರ್ವಹಣೆ

ಭೂಕಂಪ, ಪ್ರವಾಹ, ಕಟ್ಟಡ ಕುಸಿತ ಮುಂತಾದ ಸಂದರ್ಭಗಳಲ್ಲಿ ಕೀಟಗಳನ್ನು ಶೋಧ ಕಾರ್ಯದಲ್ಲಿ ಬಳಸಬಹುದು. ಮಾನವರಿಗಿಂತ ಕೀಟಗಳು ಕಿರಿದಾದ ಜಾಗಗಳಿಗೆ ಸುಲಭವಾಗಿ ಪ್ರವೇಶಿಸಬಹುದು.

3. ಕೃಷಿ ಕ್ಷೇತ್ರದಲ್ಲಿ ನೂತನ ಪ್ರಯೋಗ

ಬೆಳೆ ಬೆಳವಣಿಗೆಯ ಮೇಲಿನ ನಿಗಾವಹಣೆ

ಕೀಟ/ರೋಗ ಪತ್ತೆ

ರೈತರಿಗೆ ತಕ್ಷಣ ಮಾಹಿತಿ ನೀಡುವ ವ್ಯವಸ್ಥೆ

 

ಏಕೆ ದುಂಬಿ ಕೀಟವೇ ಆಯ್ಕೆ?

ಗಟ್ಟಿತನದ ದೇಹ – ಚಿಪ್ ಅಳವಡಿಸಲು ಅನುಕೂಲ.

ಉದ್ದ ಜೀವಿತಾವಧಿ – ದೀರ್ಘಾವಧಿಯ ಕಾರ್ಯಗಳಲ್ಲಿ ಸಹಕಾರಿ.

ಕಡಿಮೆ ವಿದ್ಯುತ್ ಬಳಕೆ – ಹೆಚ್ಚಿನ ದೂರ ಹಾರಲು ಶಕ್ತಿ ಉಳಿಸಿಕೊಳ್ಳುತ್ತದೆ.

ಚಿಟ್ಟೆ ಅಥವಾ ಇತರ ಕೀಟಗಳಿಗೆ ಹೋಲಿಸಿದರೆ, ದುಂಬಿಯೇ ಬೇಹುಗಾರಿಕೆ, ಶೋಧನಾ ಕಾರ್ಯ ಹಾಗೂ ಕೃಷಿ ನಿಗಾದಲ್ಲಿ ಸೂಕ್ತವೆಂದು ಪತ್ತೆಯಾಗಿದೆ

ಪ್ರಪಂಚದಲ್ಲಿ ಒಟ್ಟು ಹತ್ತು ಲಕ್ಷಕ್ಕೂ ಹೆಚ್ಚು ಕೀಟಗಳಿವೆ. ಅದರಲ್ಲಿ ಯಾವುದೇ ಕೀಟವನ್ನು ಸಹ ಬೇಹುಗಾರಿಕೆಗೆ ಬಳಸಬಹುದು. ಆದರೆ ಗಡಿಯಲ್ಲಿ ಈ ಕೀಟಕ್ಕೆ ಚಿಪ್ ಅಳವಡಿಸಿ ಮುಂದೆ ಬಿಟ್ಟರೆ ಅದು ಒಂದು ಅಥವಾ ಎರಡು ಕಿಲೋಮೀಟರ್ ದೂರ ಮಾತ್ರ ಕ್ರಮಿಸಬಹುದು. ಆದರೆ ಈ ಕೀಟ ಮೂವತ್ತರಿಂದ ನಲವತ್ತು ಕಿಲೋಮೀಟರ್ ದೂರ ಕ್ರಮಿಸಿ ಸೇನೆಗೆ ಸಹಕಾರಿಸಬಹುದು. ಈಗಾಗಲೇ ಚೀನಾ ದೇಶವು ಈ ರೀತಿ ಕೀಟಗಳನ್ನು ಬಳಕೆ ಮಾಡಿಕೊಂಡು ಬೇಹುಗಾರಿಕೆ, ರಕ್ಷಣಾ ವಲಯ ಕ್ಷೇತ್ರದಲ್ಲಿ ಬಳಸುತ್ತಿದೆ. ಈ ಮಾದರಿ ನಡೆ ಭಾರತ ದೇಶದಲ್ಲಿಯೂ ಪ್ರಾಯೋಗಿಕವಾಗಿಯೂ ಸಾಗಿದೆ. ಈ ಪ್ರಾಯೋಗಿಕ ಮಾಹಿತಿ ಆಧರಿಸಿಯೇ ಸೈಬೋರ್ಗ ಕೀಟ ರೊಬೊಟಿಕ್ಸ್ ಎಂಬ ಪರಿಕಲ್ಪನೆ ವಿವಿ ರೂಪಿಸಲಾಗಿದೆ.

ಒಟ್ಟಿನಲ್ಲಿ ಶ್ವಾನ,ಪಾರಿವಾಳ ಗಳಜೊತೆ ಇದೀಗ ಕೀಟಗಳು ಸಹ ದೇಶದ ಭದ್ರತೆಗೆ ಕಾಣಿಕೆ ನೀಡಲು ಸಜ್ಜಾಗಿದ್ದು ಪ್ರಾಯೋಗಿಕ ಹಂತ ಪೂರ್ಣಗೊಂಡಿದೆ.

ನಮ್ಮ ದಿನದ ಪ್ರತಿಯೊಂದು ಸುದ್ದಿಗಳನ್ನು ತಿಳಿಯಲು ನಮ್ಮ ಗ್ರೂಪ್ ಗೆ ಸೇರಲು ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ.

ಕಾರವಾರದ ಗಿಲಾನಿ ಸೂಪರ್ ಮಾರ್ಕೆಟ್ ನಲ್ಲಿ ಭರ್ಜರಿ ಆಫರ್ ,ಗ್ರೂಸರಿ ಕರೀದಿ ದಾರರಿಗೆ ಸಿಗಲಿದೆ ಬಂಪರ್ ಬಹುಮಾನ

ಇದನ್ನೂ ಓದಿ:-Karwar: ಹಬ್ಬದ ಖುಷಿಯನ್ನು ಉಡುಗೊರೆ ಜೊತೆ ಉಳಿತಾಯ ಮಾಡಿ ಆನಂದಿಸಿ ಜಿಲಾನಿ ಹೋಲ್ ಸೇಲ್ ಮಾರ್ಟ ನಲ್ಲಿ ಬಂಪರ್ ಆಫರ್ 

Advertisement
Tags :
Agricultural tech innovations IndiaBee and beetle robotics IndiaBiotech surveillance toolsCyborg beetle chipDefense technology insectsDharwad cyborg insect roboticsDisaster management roboticsInsect surveillance technologyKrishi Mela 2025 innovationsSmart farming solutions
Advertisement
Next Article
Advertisement