For the best experience, open
https://m.kannadavani.news
on your mobile browser.
Advertisement

Ankola :ಮರ ಕಡಿದು ಕಡಿದ ಟೊಂಗೆ ನೆಟ್ಟ ಪುರಸಭೆ ಸಿಬ್ಬಂದಿ-ಹೀಗೂ ಇರುತ್ತೆ ನೋಡಿ

ಕಾರವಾರ/ಅಂಕೋಲ:- ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿನ (ankola) ಸ್ಮಶಾನ ಭೂಮಿಯಲ್ಲಿ ಇದ್ದ 6 ಕ್ಕೂ ಹೆಚ್ಚು ಮರಗಳನ್ನು ಅರಣ್ಯ ಇಲಾಖೆ ಅನುಮತಿ ಪಡೆಯದೇ ರಸ್ತೆಗಾಗಿ ಪುರಸಭೆಯ ಮುಖ್ಯಾಧಿಕಾರಿ ಸೂಚನೆಯಂತೆ ತುಂಡರಿಸಿ ನಂತರ ಜನಪ್ರತಿನಿಧಿಗಳ ಆಕ್ರೋಶ ಹೆಚ್ಚಾದಾಗ ವಿಶ್ವ ಪರಿಸರ ದಿನವೇ ಕಡಿದ ಮರದ ರೆಂಬೆಗಳನ್ನು ಗುಂಡಿತೋಡಿ ನೆಟ್ಟ ವಿಚಿತ್ರ ಘಟನೆ ನಡೆದಿದೆ.
07:27 PM Jun 06, 2025 IST | ಶುಭಸಾಗರ್
ಕಾರವಾರ/ಅಂಕೋಲ:- ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿನ (ankola) ಸ್ಮಶಾನ ಭೂಮಿಯಲ್ಲಿ ಇದ್ದ 6 ಕ್ಕೂ ಹೆಚ್ಚು ಮರಗಳನ್ನು ಅರಣ್ಯ ಇಲಾಖೆ ಅನುಮತಿ ಪಡೆಯದೇ ರಸ್ತೆಗಾಗಿ ಪುರಸಭೆಯ ಮುಖ್ಯಾಧಿಕಾರಿ ಸೂಚನೆಯಂತೆ ತುಂಡರಿಸಿ ನಂತರ ಜನಪ್ರತಿನಿಧಿಗಳ ಆಕ್ರೋಶ ಹೆಚ್ಚಾದಾಗ ವಿಶ್ವ ಪರಿಸರ ದಿನವೇ ಕಡಿದ ಮರದ ರೆಂಬೆಗಳನ್ನು ಗುಂಡಿತೋಡಿ ನೆಟ್ಟ ವಿಚಿತ್ರ ಘಟನೆ ನಡೆದಿದೆ.
ankola  ಮರ ಕಡಿದು ಕಡಿದ ಟೊಂಗೆ ನೆಟ್ಟ ಪುರಸಭೆ ಸಿಬ್ಬಂದಿ ಹೀಗೂ ಇರುತ್ತೆ ನೋಡಿ
ಅತ್ಯಂತ ಕಡಿಮೆ ದರದಲ್ಲಿ ಎಲ್ಲಾ ಅಗತ್ಯ ವಸ್ತುಗಳು ಲಭ್ಯ- ಕಾರವಾರ ಬಸ್ ನಿಲ್ದಾಣದ ಹಿಂಭಾಗ ಬ್ರಾಹ್ಮಣ ಗಲ್ಲಿ ,ಕಾರವಾರ.

Ankola :ಮರ ಕಡಿದು ಕಡಿದ ಟೊಂಗೆ ನೆಟ್ಟ ಪುರಸಭೆ ಸಿಬ್ಬಂದಿ-ಹೀಗೂ ಇರುತ್ತೆ ನೋಡಿ

Advertisement

ಕಾರವಾರ/ಅಂಕೋಲ:- ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿನ (ankola) ಸ್ಮಶಾನ ಭೂಮಿಯಲ್ಲಿ ಇದ್ದ 6 ಕ್ಕೂ ಹೆಚ್ಚು ಮರಗಳನ್ನು ಅರಣ್ಯ ಇಲಾಖೆ ಅನುಮತಿ ಪಡೆಯದೇ  ರಸ್ತೆಗಾಗಿ ಪುರಸಭೆಯ ಮುಖ್ಯಾಧಿಕಾರಿ ಸೂಚನೆಯಂತೆ ತುಂಡರಿಸಿ ನಂತರ ಜನಪ್ರತಿನಿಧಿಗಳ ಆಕ್ರೋಶ ಹೆಚ್ಚಾದಾಗ ವಿಶ್ವ ಪರಿಸರ ದಿನವೇ ಕಡಿದ ಮರದ ರೆಂಬೆಗಳನ್ನು ಗುಂಡಿತೋಡಿ ನೆಟ್ಟ ವಿಚಿತ್ರ ಘಟನೆ ನಡೆದಿದೆ.

ಇದನ್ನೂ ಓದಿ:-Ankola ಶಿರೂರು ದುರಂತದಲ್ಲಿ ಜೀವ ಉಳಸಿಕೊಂಡಾತ ಸಿಡಿಲಿಗೆ ಬಲಿ!

ಹೌದು ಅಂಕೋಲ ನಗರದ ಕೋಟೆವಾಡ ಹಿಂದೂ ರುದ್ರಭೂಮಿಯಲ್ಲಿ ಇದ್ದ ಆರಕ್ಕೂ ಹೆಚ್ಚು ಮರಗಳನ್ನು ಪುರಸಭೆ ಮುಖ್ಯಾಧಿಕಾರಿ ಅಕ್ಷತಾ ಸೂಚನೆ ಮೇರೆಗೆ ಆಲದ ಮರಗಳನ್ನು ತುಂಡರಿಸಲಾಗಿತ್ತು. ಈ ವಿಷಯ ಪುರಸಭಾ ಸದಸ್ಯರಿಗೆ ತಿಳಿದಾಗ ಇದನ್ನು ವಿರೋಧ ಪಡಿಸಿದ್ದರು. ತಕ್ಷಣ ಎಚ್ಚೆತ್ತ ಮುಖ್ಯಾಧಿಕಾರಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಕಡಿದ ಆಲದ ಮರದ ಟೊಂಗೆಗಳನ್ನು ನೆಟ್ಟು ನಗೆಪಾಟಲಿಗೆ ಒಳಗಾಗಿದ್ದಾರೆ.

ಇನ್ನು ಸ್ಮಶಾನ ಭೂಮಿಗಾಗಿ ಮೀಸಲಿಟ್ಟ ಹಣವನ್ನು ರಸ್ತೆ ನಿರ್ಮಾಣಕ್ಕೆ ಬಳಸಲಾಗಿದೆ, ಇದೇ ಭಾಗದಲ್ಲಿ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆ ಮಾಹಿತಿಗೂ ತರದೇ 50 ರಿಂದ 60 ವರ್ಷದ ಆಲದ ಮರ ತುಂಡರಿಸಲಾಗಿದೆ.ಇನ್ನು ಪುರಸಭೆ ಆಡಳಿತಾಧಿಕಾರಿಯ ಈ ವರ್ತನೆಯಿಂದ ಸಿಟ್ಟಿಗೆದ್ದ ಪುರಸಭೆ ಅಧ್ಯಕ್ಷರು ಸದಸ್ಯರು ಕಡಿದ ಮರದ ಬಳಿಯೇ ಗಿಡ ನೆಟ್ಟಿದ್ದು, ಮರ ತುಂಡರಿಸಿದ ಮುಖ್ಯಾಧಿಕಾರಿಯನ್ನು ಅಮಾನತು ಮಾಡಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಪ್ರಕೃತಿ ಮೆಡಿಕಲ್ ,ಕಾರವಾರ.
Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ