Goa|ರಾಮನಗರ -ಗೋವಾ ರಾಷ್ಟ್ರೀಯ ಹೆದ್ದಾರಿ ನಿರ್ಬಂಧ ತೆರವು| ಯಾವೆಲ್ಲ ವಾಹನಗಳಿಗೆ ಅವಕಾಶ ವಿವರ ಇಲ್ಲಿದೆ
Goa|ರಾಮನಗರ -ಗೋವಾ ರಾಷ್ಟ್ರೀಯ ಹೆದ್ದಾರಿ ನಿರ್ಬಂಧ ತೆರವು| ಯಾವೆಲ್ಲ ವಾಹನಗಳಿಗೆ ಅವಕಾಶ ವಿವರ ಇಲ್ಲಿದೆ
ಕಾರವಾರ :-ಉತ್ತರ ಕನ್ನಡ ಜಿಲ್ಲೆಯ ಮೂಲಕ ಗೋವಾ(goa) ವನ್ನು ಸಂಪರ್ಕಿಸುವ ಗೋವಾ- ರಾಮನಗರ ರಾಷ್ಟ್ರೀಯ ಹೆದ್ದಾರಿ NH -4a ನಲ್ಲಿ ವಾಹನಗಳ ನಿರ್ಬಂಧವನ್ನು ತೆರವು ಮಾಡಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಆದೇಶಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರ ಅನಮೋಡ್ -ಗೋವಾ ಪಂಪರ್ಲಿಸುವ ರಸ್ತೆಯಲ್ಲಿ ಎಲ್ಲಾ ವಾಹನಗಳಿಗೂ ಸಂಚಾರಕ್ಕೆ ಅನುಮತಿ ನೀಡಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಆದೇಶ ಮಾಡಿದ್ದಾರೆ.
ಜುಲೈ 5 ರಂದು ಅಬ್ಬರದ ಮಳೆಗೆ ಅನಮೋಡ್ ಬಳಿ ಹೆದ್ದಾರಿ ಕುಸಿತವಾಗಿತ್ತು ರಸ್ತೆ ಕುಸಿದ ಹಿನ್ನಲೆಯಲ್ಲಿ ರಾಮನಗರ ಭಾಗದಿಂದ ಗೋವಕ್ಕೆ ತೆರಳುವ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಇದರಿಂದ ಬೆಳಗಾವಿ ಮೂಲಕ ಗೋವಾ ತೆರಳುವ ವಾಹನಗಳಿಗೆ ಸಮಸ್ಯೆ ಉಂಟಾಗಿತ್ತು. ಇನ್ನು ಕಾರವಾರದ ಮೂಲಕ ಗೋವಾಕ್ಕೆ ತೆರಳಬೇಕಾದ ಅನಿವಾರ್ಯತೆ ತಲೆದೂರಿತ್ತು.
Goa liquor:ಅಕ್ರಮ ಗೋವಾ ಮದ್ಯ ಮಾರಾಟ ಹಳಿಯಾಳ ಪೊಲೀಸ್ ಕಾನಸ್ಟೇಬಲ್ ಬಂಧನ
ಇದೀಗ ಮಳೆ ಅಬ್ಬರ ಕಡಿಮೆ ಆಗಿದ್ದು ಕುಸಿದ ಭಾಗದಲ್ಲಿ ಸರಿಪಡಿಸಿದ ಕಾರಣ ವಾಹನಗಳಿಗೆ ಸಂಚಾರಕ್ಕೆ ಅನುವನ್ನು ಗೋವಾ ರಾಜ್ಯದ ದಕ್ಷಿಣ ಗೋವಾದ ಜಿಲ್ಲಾಧಿಕಾರಿ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಪತ್ರ ಉಲ್ಲೇಖದ ಮೂಲಕ ಅನುಮತಿ ನೀಡಲಾಗಿದೆ.
ಇದರಿಂದ ಬೆಳಗಾವಿ,ಹುಬ್ಬಳ್ಳಿಯಿಂದ ಗೋವಾಕ್ಕೆ ತೆರಳುವ ಭಾರಿ ವಾಹನಗಳಿಗೆ ,ಪ್ರಯಾಣಿಕರಿಗೆ ಅನುಕೂಲ ಆಗಲಿದೆ.