ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Goa|ರಾಮನಗರ -ಗೋವಾ ರಾಷ್ಟ್ರೀಯ ಹೆದ್ದಾರಿ ನಿರ್ಬಂಧ ತೆರವು| ಯಾವೆಲ್ಲ ವಾಹನಗಳಿಗೆ ಅವಕಾಶ ವಿವರ ಇಲ್ಲಿದೆ

ಉತ್ತರ ಕನ್ನಡದ ರಾಮನಗರ–ಗೋವಾ ರಾಷ್ಟ್ರೀಯ ಹೆದ್ದಾರಿ NH-4A ಯಲ್ಲಿ ವಾಹನ ಸಂಚಾರ ನಿರ್ಬಂಧ ತೆರವು. ಜಿಲ್ಲಾಧಿಕಾರಿ ಆದೇಶದಿಂದ ಭಾರಿ ವಾಹನಗಳು ಹಾಗೂ ಪ್ರಯಾಣಿಕರಿಗೆ ಸಂಚಾರ ಸುಲಭ.
03:36 PM Sep 23, 2025 IST | ಶುಭಸಾಗರ್
ಉತ್ತರ ಕನ್ನಡದ ರಾಮನಗರ–ಗೋವಾ ರಾಷ್ಟ್ರೀಯ ಹೆದ್ದಾರಿ NH-4A ಯಲ್ಲಿ ವಾಹನ ಸಂಚಾರ ನಿರ್ಬಂಧ ತೆರವು. ಜಿಲ್ಲಾಧಿಕಾರಿ ಆದೇಶದಿಂದ ಭಾರಿ ವಾಹನಗಳು ಹಾಗೂ ಪ್ರಯಾಣಿಕರಿಗೆ ಸಂಚಾರ ಸುಲಭ.

Goa|ರಾಮನಗರ -ಗೋವಾ ರಾಷ್ಟ್ರೀಯ ಹೆದ್ದಾರಿ ನಿರ್ಬಂಧ ತೆರವು| ಯಾವೆಲ್ಲ ವಾಹನಗಳಿಗೆ ಅವಕಾಶ ವಿವರ ಇಲ್ಲಿದೆ

Advertisement

ಕಾರವಾರ :-ಉತ್ತರ ಕನ್ನಡ ಜಿಲ್ಲೆಯ ಮೂಲಕ ಗೋವಾ(goa) ವನ್ನು ಸಂಪರ್ಕಿಸುವ ಗೋವಾ- ರಾಮನಗರ ರಾಷ್ಟ್ರೀಯ ಹೆದ್ದಾರಿ NH -4a ನಲ್ಲಿ ವಾಹನಗಳ ನಿರ್ಬಂಧವನ್ನು  ತೆರವು ಮಾಡಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಆದೇಶಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರ ಅನಮೋಡ್ -ಗೋವಾ ಪಂಪರ್ಲಿಸುವ ರಸ್ತೆಯಲ್ಲಿ ಎಲ್ಲಾ ವಾಹನಗಳಿಗೂ ಸಂಚಾರಕ್ಕೆ ಅನುಮತಿ ನೀಡಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಆದೇಶ ಮಾಡಿದ್ದಾರೆ.

ಜುಲೈ 5 ರಂದು ಅಬ್ಬರದ ಮಳೆಗೆ ಅನಮೋಡ್ ಬಳಿ ಹೆದ್ದಾರಿ ಕುಸಿತವಾಗಿತ್ತು ರಸ್ತೆ ಕುಸಿದ ಹಿನ್ನಲೆಯಲ್ಲಿ ರಾಮನಗರ ಭಾಗದಿಂದ ಗೋವಕ್ಕೆ ತೆರಳುವ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಇದರಿಂದ ಬೆಳಗಾವಿ ಮೂಲಕ ಗೋವಾ ತೆರಳುವ ವಾಹನಗಳಿಗೆ ಸಮಸ್ಯೆ ಉಂಟಾಗಿತ್ತು. ಇನ್ನು ಕಾರವಾರದ ಮೂಲಕ ಗೋವಾಕ್ಕೆ ತೆರಳಬೇಕಾದ ಅನಿವಾರ್ಯತೆ ತಲೆದೂರಿತ್ತು.

Advertisement

Goa liquor:ಅಕ್ರಮ ಗೋವಾ ಮದ್ಯ ಮಾರಾಟ ಹಳಿಯಾಳ ಪೊಲೀಸ್ ಕಾನಸ್ಟೇಬಲ್ ಬಂಧನ

ಇದೀಗ ಮಳೆ ಅಬ್ಬರ ಕಡಿಮೆ ಆಗಿದ್ದು ಕುಸಿದ ಭಾಗದಲ್ಲಿ ಸರಿಪಡಿಸಿದ ಕಾರಣ ವಾಹನಗಳಿಗೆ ಸಂಚಾರಕ್ಕೆ ಅನುವನ್ನು ಗೋವಾ ರಾಜ್ಯದ ದಕ್ಷಿಣ ಗೋವಾದ ಜಿಲ್ಲಾಧಿಕಾರಿ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಪತ್ರ ಉಲ್ಲೇಖದ ಮೂಲಕ ಅನುಮತಿ ನೀಡಲಾಗಿದೆ.

ಇದರಿಂದ ಬೆಳಗಾವಿ,ಹುಬ್ಬಳ್ಳಿಯಿಂದ ಗೋವಾಕ್ಕೆ ತೆರಳುವ  ಭಾರಿ ವಾಹನಗಳಿಗೆ ,ಪ್ರಯಾಣಿಕರಿಗೆ ಅನುಕೂಲ ಆಗಲಿದೆ.

 

Advertisement
Tags :
Belagavi Goa Route NewsGoa Ramnagar HighwayGoa Road RestrictionsKarwar newsNH 4A NewsUttara Kannada Traffic Updates
Advertisement
Next Article
Advertisement