For the best experience, open
https://m.kannadavani.news
on your mobile browser.
Advertisement

Kaiga:ಕೈಗಾದಲ್ಲಿ ಎರಡು ಹೊಸ ಅಣು ವಿದ್ಯುತ್ ಘಟಕ: ಈವರೆಗೆ ಕನ್ನಡಿಗರಿಗೆ ಸಿಕ್ಕಿದ್ದೆಷ್ಟು ಉದ್ಯೋಗ ಗೊತ್ತಾ

10:49 PM Aug 06, 2025 IST | ಶುಭಸಾಗರ್
kaiga ಕೈಗಾದಲ್ಲಿ ಎರಡು ಹೊಸ ಅಣು ವಿದ್ಯುತ್ ಘಟಕ  ಈವರೆಗೆ ಕನ್ನಡಿಗರಿಗೆ ಸಿಕ್ಕಿದ್ದೆಷ್ಟು ಉದ್ಯೋಗ ಗೊತ್ತಾ

Kaiga:ಕೈಗಾದಲ್ಲಿ ಎರಡು ಹೊಸ ಅಣು ವಿದ್ಯುತ್ ಘಟಕ: ಈವರೆಗೆ ಕನ್ನಡಿಗರಿಗೆ ಸಿಕ್ಕಿದ್ದೆಷ್ಟು ಉದ್ಯೋಗ ಗೊತ್ತಾ?

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ :- ವಿಶ್ವದಲ್ಲೇ ಅತೀ ಹೆಚ್ಚು ಅಣು ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಜಗತ್ತಿನ ಗಮನ ಸೆಳೆದಿದ್ದ ಉತ್ತರ ಕನ್ನಡ ಜಿಲ್ಲೆಯ(uttara kannada) ಕೈಗಾ ಅಣು ವಿದ್ಯುತ್(kaiga power project) ಸ್ಥಾವರ ದಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದನೆಗಾಗಿ ಐದು ಮತ್ತು ಆರನೇ ಘಟಕಗಳು ನಿರ್ಮಾಣ ಮಾಡಲಾಗುತಿದ್ದು 2030 ರಲ್ಲಿ ಲೋಕಾರ್ಪಣೆ ಗೊಳ್ಳಲಿದೆ. ಈ ಕುರಿತು ಒಂದು ರಿಪೋರ್ಟ ಇಲ್ಲಿದೆ.

ಕಳೆದ 25 ವರ್ಷದಿಂದ ಉತ್ತರ ಕನ್ನಡ ಜಿಲ್ಲೆಯ ಕೈಗಾದಲ್ಲಿ ನಿರ್ಮಾಣವಾಗಿರುವ ಅಣು ವಿದ್ಯುತ್ ಸ್ಥಾವರದ ನಾಲ್ಕು ಘಟಕಗಳು ಕಾರ್ಯನಿರ್ವಹಿಸುತಿದ್ದು ,ಈವರೆಗೆ 13 ಸಾವಿರ ಕೋಟಿ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಿ 1.2 ಲಕ್ಷ ಟನ್ CO2 ನ ಉತ್ಪಾದನೆಯನ್ನು ತಡೆಗಟ್ಟಿದೆ.

ಇದಲ್ಲದೇ ಕೈಗಾ ಯುನಿಟ್ -1 ರ ಘಟಕವು 962 ದಿನಗಳವರೆಗೆ ಕಾರ್ಯನಿರ್ವಹಿಸಿದ ವಿಶ್ವದ ಮೊದಲ ವಾಣಿಜ್ಯ ಪರಮಾಣು ವಿದ್ಯುತ್ ರಿಯಾಕ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಬೆನ್ನಲ್ಲೇ ಇದೀಗ ಐದು ಮತ್ತು ಆರನೇ ಘಟಕ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಈ ಘಟಕದಲ್ಲಿ ತಲಾ 700ಮೆಗಾವಾಟ್ ಅಣು ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ. ಹೀಗಾಗಿ ಇದಕ್ಕೆ ಬೇಕಾದ ರಿಯಾಕ್ಟರ್ ನಿರ್ಮಾಣ,ನ್ಲೂಕ್ಲಿಯರ್ ಘಟಕಗಳ ಸಿವಿಲ್,ಎಲಕ್ಟ್ರಾನಿಕ್ ಕಾಮಗಾರಿಗಳನ್ನು ಎಂ.ಇ.ಐ.ಎಲ್ ಕಂಪನಿ ಹಾಗೂ ಟರ್ಬೈನ್ ವಿಭಾಗದ ಕಾಮಗಾರಿಯನ್ನು ಬಿ.ಹೆಚ್‌.ಇ.ಎಲ್ ಕೈಗೊಳ್ಳುತ್ತಿದೆ.ಇನ್ನು ಸ್ಥಳೀಯರಲ್ಲಿ ಈ ಘಟಕ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿದೆ.ಆದರೇ ಕೈಗಾದಿಂದ ಅಣು ಸ್ಥಾವರಕ್ಕೆ ಹೆಚ್ಚಿನ ಜಾಗವನ್ನು ಪಡೆದಿಲ್ಲ ಇದಲ್ಲದೇ ಕೈಗಾದಿಂದ ಅಣು ವಿಕೀರ್ಣದ ಪ್ರಭಾವ ಕೇವಲ 1% ಮಾತ್ರ ಇದ್ದು ಇದರಿಂದಾಗಿ ಕ್ಯಾನ್ಸರ್ ಬರುತ್ತಿಲ್ಲ, ಇವುಗಳ ಅಧ್ಯಯನಕ್ಕೆ ಸಂಶೋಧನಾ ಸಂಸ್ಥೆಗಳು ಕಾರ್ಯ ನಿರ್ವಹಿಸುತಿದ್ದು ಅವು ಕೂಡ ಅಣು ವಿಕೀರ್ಣದಿಂದ ಕ್ಯಾನ್ಸರ್ ಬರುವ ಬಗ್ಗೆ ವರದಿ ನೀಡಿಲ್ಲ , ನೈಸರ್ಕಿಕವಾಗಿ ನಮ್ಮ ದೇಹಕ್ಕೆ ಹೋಗಿವ ವಿಕೀರ್ಣಗಳಿಗಿಂತ ಕೈಗಾ ದಲ್ಲಿ ಹೊರಹೋಗುವ ವಿಕೀರ್ಣದ ಪ್ರಮಾಣ ಅತೀ ಕಡಿಮೆ ಇದೆ ಎಂದು ಕೈಗಾ ಅಣು ವಿದ್ಯುತ್ ಕೇಂದ್ರದ ನಿರ್ದೇಶಕರಾದ ಬಿ.ವಿನೋದ್ ಕುಮಾರ್ ಮಾಹಿತಿ ನೀಡಿದ್ದಾರೆ.

ಕೈಗಾ ಅಣು ಸ್ಥಾವರದ ಬಗ್ಗೆ ಪತ್ರಕರ್ತರಿಗೆ ಮಾಹಿತಿ ನೀಡುತ್ತಿರುವ ವಿಜ್ಞಾನಿಗಳು

 ಸದ್ಯ ಕೈಗಾದಲ್ಲಿ ಒಟ್ಟು ನಾಲ್ಕು ಅಣು ವಿದ್ಯುತ್  ಘಟಕಗಳು ಕಾರ್ಯನಿರ್ವಹಿಸುತ್ತಿದೆ.ದೇಶದಲ್ಲಿ ಕಲ್ಲಿದ್ದಲು ವಿದ್ಯುತ್ ಉತ್ಪಾದನಾ ಘಟಕವೇ ಹೆಚ್ಚಾಗಿದ್ದು ,ಅಣು ಘಟಕಕ್ಕೆ ಹೋಲಿಸಿದರೆ ಕಲ್ಲಿದ್ದಲು ವಿದ್ಯುತ್ ಉತ್ಪಾನಾ ಘಟಕದಲ್ಲಿ ಖರ್ಚು ಅಧಿಕವಾಗಿದ್ದು ಅಣು ವಿದ್ಯುತ್ ಉತ್ಪಾದನಾ ಘಟಕದಲ್ಲಿ ಖರ್ಚು ಕಡಿಮೆ ಇದ್ದು ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುತ್ತದೆ. ಇದನ್ನೂ ಓದಿ:-Kaiga ನ್ಯೂಕ್ಲಿಯರ್ ಪ್ಲಾಂಟ್ ನಲ್ಲಿ ಗುಂಡು ಹಾರಿಸಿಕೊಂಡ ರಕ್ಷಣಾ ಸಿಬ್ಬಂದಿ ಸಾವು!

ಹೀಗಾಗಿ ಕೇಂದ್ರ ಸರ್ಕಾರ ಹೆಚ್ಚು ಅಣು ವಿದ್ಯುತ್ ಇತ್ಪಾದನಾ ಘಟಕವನ್ನು ನಿರ್ಮಿಸುತಿದ್ದು ,ಸ್ಥಳ ಅಧ್ಯಯನ ನಡೆಸುತ್ತಿದೆ. ದೇಶದಲ್ಲಿ ಒಟ್ಟು 10 ಹೊಸ ಅಣು ವಿದ್ಯುತ್ ಘಟಕ ನಿರ್ಮಾಣ ಮಾಡಲಾಗುತಿದ್ದು ಇದರಲ್ಲಿ ಕರ್ನಾಟಕದ ಕೈಗಾ ಅಣು ಸ್ಥಾವರದ ಐದು ಮತ್ತು ಆರನೇ ಘಟಕವೂ ಒಂದಾಗಿದೆ.ಹರಿಯಾಣದ ಗೋರಖಪುರದಲ್ಲಿ 3,4 ನೇ ಘಟಕ,ಮಧ್ಯಪ್ರದೇಶದ ಚುಟ್ಕಾ ದಲ್ಲಿ 1,2 ನೇ ಘಟಕ ,ರಾಜಸ್ಥಾನದ ಮಹಿಬನ್ಸವಾರಾ ಅಣು ಘಟಕದಲ್ಲಿ 1 ರಿಂದ ನಾಲ್ಕು ಘಟಕಗಳ ನಿರ್ಮಾಣ ನಡೆಯುತ್ತಿದೆ.ಇದಲ್ಲದೇ ಇನ್ನೀ 20 ಘಟಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇನ್ನು ಕೈಗಾದಲ್ಲಿ  1989 ರಲ್ಲಿ ಅಣು ವಿದ್ಯತ್ ಸ್ಥಾವರಕ್ಕಾಗಿ 127 ಹೆಕ್ಟೇರ್ ಜಮೀನು ಸ್ವಾಧೀನ  ಪಡಿಸಿಕೊಳ್ಳಲಾಗಿತ್ತು. 65.9 ಹೆಕ್ಟೇರ್ ಜಮೀನಿನಲ್ಲಿ 1 ರಿಂದ 4 ಘಟಕಗಳು ತಲೆಯೆತ್ತಿದ್ದವು.

ಕೈಗಾ ಅಣು ಸ್ಥಾವರದ 5,6 ನೇ ಘಟಕ ನಿರ್ಮಾಣದ ಸ್ಥಳ

ಇನ್ನು ಉಳಿದ ಜಾಗ ಹಾಗೆಯೇ ಇದ್ದು ಈ ಜಾಗದ 54.09 ಹೆಕ್ಟೇರ್ ನಲ್ಲಿ 5 ಮತ್ತು 6 ನೇ ಘಟಕ ನಿರ್ಮಾಣವಾಗುತ್ತಿದೆ. ಈ ಘಟಕ ನಿರ್ಮಾಣಕ್ಕೆ

21 ಸಾವಿರ ಕೋಟಿ ವೆಚ್ಚ ಮಾಡಲಾಗುತಿದ್ದು ,ಅಣು ರಿಯಾಕ್ಟರ್ ಗಳ ಅಳವಡಿಕೆಗೆ ಬೇಕಾದ ಕಾಮಗಾರಿಗಳು ಮುಗಿದಿವೆ.ಹೀಗಾಗಿ 2030 ರಲ್ಲಿ ಈ ಘಟಕಗಳು ವಿದ್ಯುತ್ ಉತ್ಪಾನೆ ಕಾರ್ಯಾರಂಭ ಮಾಡಲಿದ್ದು ದೇಶದ ಉತ್ಕೃಷ್ಣ ತಂತ್ರಜ್ಞಾನ ಬಳಸಲಾಗುತ್ತಿದೆ. ಗುಣಮಟ್ಟಕ್ಕೆ ಆಧ್ಯತೆ ನೀಡಲಾಗುತ್ತಿದೆ ಎಂಬುದು ಕೈಗಾ ವಿಜ್ಞಾನಿಗಳಾದರಮೇಶ್ ,ತಿಪ್ಪೆಸ್ವಾಮಿ ರವರ ಮಾತು.ಇದನ್ನೂ ಓದಿ:-ಕಾರವಾರದಲ್ಲಿ ನಟ ದರ್ಶನ್ ಬಾವ ಮಂಜುನಾಥ್ ಡಿ ಬಾಸ್ ಬಗ್ಗೆ ಹೇಳಿದ್ದೇನು?

ಕೈಗಾದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿದ್ದೇಷ್ಟು?

ಇನ್ನು ಕೈಗಾದಲ್ಲಿ ಸ್ಥಳೀಯ ಹಾಗೂ ರಾಜ್ಯದ ಜನರಿಗೆ ಹೆಚ್ಚಿನ ಉದ್ಯೋಗ ನೀಡುವ ಗುರಿ ಹೊಂದಲಾಗಿದ್ದು ,ಈಗಾಗಲೇ ನಾಲ್ಕು ಘಟಕದಲ್ಲಿ 1582 ಹೊರಗುತ್ತಿಗೆ ನೌಕರರು,ಉತ್ತರ ಕನ್ನಡ ಜಿಲ್ಲೆಯ 1377 ಜನರು, ಇದರಲ್ಲಿ ಜಿಲ್ಲೆಯ 16 ಕಿ.ಮೀ ವ್ಯಾಪ್ತಿಯ 933 ಜನರು ಕರ್ನಾಟಕದ 1460 ಜನರಿಗೆ ವಿವಿಧ ಹಂತದ ಉದ್ಯೋಗ ನೀಡಲಾಗಿದೆ.ಹೊಸದಾಗಿ ನಿರ್ಮಾಣವಾಗುತ್ತಿರುವ ಐದು ಮತ್ತ ಆರನೇ ಘಟಕದಲ್ಲಿ 475 ಹುದ್ದೆಗಳಲ್ಲಿ ಜಿಲ್ಲೆಯ 224 ಸೇರಿ ರಾಜ್ಯದ ಒಟ್ಟು  279 ಜನರಿಗೆ ಹೊರ ಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡಲಾಗಿದೆ.ಕಾಯಂ ಹುದ್ದೆಗಳಲ್ಲಿ ಒಟ್ಟು 1308 ರಲ್ಲಿ ಬಿ ಮತ್ತು ಸಿ ಗ್ರೂಪ್ ಗಳಲ್ಲಿ 483 ಹಾಗೂ ಎ ಗ್ರೂಪ್ ನಲ್ಲಿ ಶೇ 46 ರಷ್ಟು ಕರ್ನಾಟಕದವರು ಕಾರ್ಯನಿರ್ವಹಿಸುತಿದ್ದಾರೆ. ಒಟ್ಟಿನಲ್ಲಿ ಇದೀಗ ಎರಡು ಹೊಸ ಅಣು ಘಟಕಗಳು ವಿದ್ಯುತ್ ಉತ್ಪಾದನೆಗೆ ಸಿದ್ದವಾಗಿದ್ದು ಇನ್ನೈದು ವರ್ಷದಲ್ಲಿ ತನ್ನ ಕಾರ್ಯ ಪ್ರಾರಂಭಿಸಲಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ