Karnataka| ಪುಟ್ಟ ಮಗುವನ್ನ ಮಹಡಿ ಮೇಲಿಂದ ತಳ್ಳಿ ಹ*** ಮಾಡಿದ ಮಲತಾಯಿ ಮೂರು ದಿನದ ನಂತರ ಸತ್ಯ ಬಯಲು.
Karnataka| ಪುಟ್ಟ ಮಗುವನ್ನ ಮಹಡಿ ಮೇಲಿಂದ ತಳ್ಳಿ ಹ*** ಮಾಡಿದ ಮಲತಾಯಿ ಮೂರು ದಿನದ ನಂತರ ಸತ್ಯ ಬಯಲು.
ಬೀದರ್ 16 September 2025: ಮಗುವಿಗೆ ಆಟ ಆಡಿಸುವ ನೆಪದಲ್ಲಿ ಟೆರಸ್ ಮೇಲೆ ಕರೆದೊಯ್ದು ಮಲತಾಯಿ ಮೂರನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿದ ದಾರುಣ ಘಟನೆ ಬೀದರ್ (bidar) ನಲ್ಲಿ ನಡೆದಿದೆ.
ಹತ್ಯೆ ಮಾಡಿದಾಕೆ ರಾಧಾ ಎಂದಾಗಿದ್ದು ,ಮಗುವಿಗೆ ಆಟ ಆಡಿಸುವ ನೆಪದಲ್ಲಿ ಕುರ್ಚಿ ಮೇಲೆ ಹತ್ತಿಸಿ ಬಳಿಕ ಮಲತಾಯಿ ಮೂರನೇ ಮಹಡಿಯಿಂದ ಬಾಲಕಿಯನ್ನು ತಳ್ಳಿದ್ದಾಳೆ. ಆ ಪುಟ್ಟ ಮಗು ಮೇಲಿನ ಮಹಡಿಹಿಂದ ಬಿದ್ದು ಸಾವು ಕಂಡಿದ್ದು ಮೂರು ದಿನದ ನಂತರ ಪ್ರಕರಣ ದ ಸತ್ಯತೆ ಹೊರಬಂದಿದೆ.
ಹೇಗೆ ಪತ್ತೆಯಾಯ್ತು ಹತ್ಯೆಯ ರಹಸ್ಯ!
ಮಗುವನ್ನ ಕುರ್ಚಿ ಮೇಲೆ ಹತ್ತಿಸಿ, ಯಾರಿಗೂ ಕಾಣದಂತೆ ಟೆರಸ್ ಮೇಲೆ ಓಡಾಡಿದ್ದ ಮಲತಾಯಿ ರಾಧಾ ಮಗುವನ್ನ ತಳ್ಳಿ ಅವಸರದಲ್ಲೆ ಮನೆ ಒಳಗೆ ಹೋಗಿ ಎನೂ ಗೋತ್ತಿಲ್ಲದಂತ್ತೆ ನಾಟಕವಾಡಿದ್ದಳು.
ಕೃತ್ಯ ಎಸಗಿ ರೂಮ್ ಒಳಗೆ ಮಲಗಿದ್ದ ಕ ರಾಧಾನ ಕೃತ್ಯ ನೆರೆಮನೆಯವರು ಸಿಸಿಟಿವಿ ವಿಡಿಯೋವನ್ನ ಪೊಲೀಸರಿಗೆ ಕಳುಹಿಸಿದಾಗ ಮಲತಾಯಿಯ ಕೃತ್ಯ ಬಯಲಾಗಿದೆ.
ಘಟನೆ ಸಂಬಂಧ ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದ್ಯ ಆರೋಪಿ ರಾಧಾ ನ್ಯಾಯಾಂಗ ಬಂಧನದಲ್ಲಿದ್ದಾಳೆ.
ಆಸ್ತಿಪಾಲಾಗುವ ಭಯ ಮಗುವಿನ ಜೀವಕ್ಕೆ ತಂತು ಕುತ್ತು.
ಇನ್ನು ಮೃತ ಬಾಲಕಿಯ ತಾಯಿ ಟಿಬಿ ಕಾಯಿಲೆಯಿಂದ ಮೃತಪಟ್ಟಿದ್ದಳು. ಹೀಗಾಗಿ ಮಗುವಿಗೆ ತಾಯಿಯ ಕೊರತೆ ನೀಗಿಸಲು ಮಗುವಿನ ತಂದೆ ರಾಧ ಎಂಬಾಕೆಯನ್ನು ವಿವಾಹವಾಗಿದ್ದನು.
Karnataka Rain: ರಾಜ್ಯಾದ್ಯಂತ 7 ದಿನ ಮಳೆ, ಈ ಜಿಲ್ಲೆಗಳಿಗೆ ಅಲರ್ಟ್
ಇನ್ನು ತಾಯಿಯಿಲ್ಲದ ಈ ಮಗು ತುಂಬಾ ಚೂಟಿಯಾಗಿದ್ದು ಶಾಲೆಯಲ್ಲಿ ಸಹ ಉತ್ತಮ ವಿದ್ಯಾರ್ಥಿನಿಯಾಗಿದ್ದಳು. ಇನ್ನು ಈಕೆ ದೊಡ್ಡವಳಾದಮೇಲೆ ಇವಳಿಗೂ ಆಸ್ತಿ ನೀಡಬೇಕಾಗುತ್ತದೆ ಎಂದು ದುರಾಲೋಚನೆ ಮಾಡಿದ ರಾಧ ಮಗುವನ್ನು ಪುಸುಲಾಯಿಸಿ ಕಟ್ಟಡದ ಮೂರನೇ ಮಹಡಿಯಿಂದ ಆಟವಾಡಿಸುವ ನೆಪದಲ್ಲಿ ತಳ್ಳಿ ಹತ್ಯೆ ಮಾಡಿದ್ದಾಳೆ. ಮಗುವಿಗೆ ತಾಯಿ ಸ್ಥಾನ ನೀಡಬೇಕಾದ ಮಲತಾಯಿ ಕೊನೆಗೂ ಆಸ್ತಿ ಆಸೆಗೆ ಬಾಳಿ ಬೆಳಕು ಕಾಣಬೇಕಾದ ಪಟ್ಟ ಕಂದನ ಬದುಕನ್ನ ಕಿತ್ತುಕೊಂಡಿದ್ದಾಳೆ.