ಅನಾಮಿಕ ವ್ಯಕ್ತಿ ನಟೋರಿಯಸ್ ಕೆಲಸ ಮಾಡಿ ಕ್ಷೇತ್ರದಿಂದ ಉಚ್ಚಾಟನೆಗೊಂಡಿದ್ದ: ಧರ್ಮಸ್ಥಳ ಗ್ರಾ.ಪಂ ಮಾಜಿ ಅಧ್ಯಕ್ಷ

ಅನಾಮಿಕ ವ್ಯಕ್ತಿ ನಟೋರಿಯಸ್ ಕೆಲಸ ಮಾಡಿ ಕ್ಷೇತ್ರದಿಂದ ಉಚ್ಚಾಟನೆಗೊಂಡಿದ್ದ: ಧರ್ಮಸ್ಥಳ ಗ್ರಾ.ಪಂ ಮಾಜಿ ಅಧ್ಯಕ್ಷ
ಮಂಗಳೂರು: ಅನಾಮಿಕ ವ್ಯಕ್ತಿ ಯಾರು ಅಂತ ಇಡೀ ಧರ್ಮಸ್ಥಳದವರಿಗೆ (Dharmasthala) ಈಗ ಗೊತ್ತಾಗಿದೆ. ಆತ ನಟೋರಿಯಸ್ ಕೆಲಸ ಮಾಡಿದ ಕ್ಷೇತ್ರದಿಂದ ಉಚ್ಚಾಟನೆ ಆಗಿದ್ದ ಎಂದು ಧರ್ಮಸ್ಥಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ವಕೀಲ ಕೇಶವ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:-Karnataka :ಖಾಸಗಿ ಅಂಬುಲೆನ್ಸ್ ಗಳಿಗೆ ಶಾಕ್ ಕೊಟ್ಟ ಸರ್ಕಾರ- KPME ನಡಿ ಲೈಸೆನ್ಸ್ ಕಡ್ಡಾಯದ ಜೊತೆ ದರ ನಿಗದಿ
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿ (Dharmasthala Mass Burials) ಪ್ರಕರಣ ಸಂಬಂಧ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಪ್ರತಿದಿನ 30 ಸಾವಿರದಷ್ಟು ಪ್ರವಾಸಿಗರು ಧರ್ಮಸ್ಥಳಕ್ಕೆ ಬರುತ್ತಾರೆ. ಅನೇಕ ಸಮಸ್ಯೆಗಳಿಂದ ಬಂದು ಜೀವನವನ್ನು ಅಂತ್ಯ ಮಾಡುತ್ತಿದ್ದರು. ಪ್ರವಾಸಿಗರು ಮೃತಪಟ್ಟರೆ ಅಂತ್ಯಸಂಸ್ಕಾರ ಮಾಡುವುದೇ ದೊಡ್ಡ ಸಾಹಸವಾಗಿತ್ತು. ಅನಾಮಿಕ ವ್ಯಕ್ತಿ ಹೆಣದ ಮೇಲೆ ಇದ್ದ ಚಿನ್ನ, ಹಣ ಕದಿಯುತ್ತಿದ್ದ. ಈ ಕಾರಣಕ್ಕೆ ಆತನನ್ನು 2014ರಲ್ಲಿ ಕೆಲಸದಿಂದ ತೆಗೆದು ಹಾಕಲಾಗಿತ್ತು. ಈ ಬೆಳವಣಿಗೆ ಹಿಂದೆ ಇರುವ ಷಡ್ಯಂತ್ರ ಯಾರದ್ದು ಎಂದು ಗೊತ್ತಿದೆ. ಕ್ಷೇತ್ರದ ಮೇಲೆ ಆರೋಪ ಮಾಡುವವರಿಗೆ ದೇವರು ತಕ್ಕ ಬುದ್ಧಿ ಕೊಡಲಿ ಎಂದರು.
News courtesy-punlictv