Joga falls:ಜೋಗಾದ ರಾಜಪಾಲ್ಸ್ ನಲ್ಲಿ youtuber ಹುಚ್ಚಾಟ! ಆಮೇಲೇನಾಯ್ತು ಗೊತ್ತಾ?
Joga falls:ಜೋಗಾದ ರಾಜಪಾಲ್ಸ್ ನಲ್ಲಿ youtuber ಹುಚ್ಚಾಟ! ಆಮೇಲೇನಾಯ್ತು ಗೊತ್ತಾ?
ಕಾರವಾರ :- ಜೋಗಾ ಪಾಲ್ಸ್ ನ ( Joga Falls) ಅಪಾಯಕಾರಿ ಸ್ಥಳದಲ್ಲಿ ನಿಂತು ವಿಡಿಯೋ ಚಿತ್ರೀಕರಣ ಮಾಡಿದ ಬೆಂಗಳೂರು ಮೂಲದ ಯುಟ್ಯೂಬರ್ ಹಾಗೂ ಗೈಡ್ ಮೇಲೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿದ್ದಾರೆ.
ಬೆಂಗಳೂರಿನ ಜಾಲಹಳ್ಳಿ ಮೂಲದ ಗೌತಮ್ ಅರಸು(32) ಹಾಗೂ ಸೊರಬ ಮೂಲದ ಗೈಡ್ ಸಿದ್ಧರಾಜ ಮೇಲೆ ಪ್ರಕರಣ ದಾಖಲಾಗಿದೆ.
ಜೋಗ್ ಫಾಲ್ಸ್ ನ ಅಪಾಯದ ಪ್ರದೇಶದಲ್ಲಿನ ಬ್ಲಾಗ್ ಮಾಡಿದ್ದ ಯುಟ್ಯೂಬರ್ ,ಮಾವಿನಗುಂಡಿಯ ಬ್ರಿಟಿಷ್ ಬಂಗಲೆ ಕಡೆಯಿಂದ ರಾಜಾ ಫಾಲ್ಸ್ ಬೀಳುವ ಜಾಗಕ್ಕೆ ತೆರಳಿದ್ದನು.ಅಪಾಯಕಾರಿ ಎಂದು ನಿಷೇಧಿಸಿದ್ದ ಸ್ಥಳವಾಗಿದ್ದರೂ ರಾಜಾ ಫಾಲ್ಸ್ ಬೀಳುವ ಬಂಡೆಗಲ್ಲಿನ ಹತ್ತಿರ ನಿಂತು ವಿಡಿಯೋ ಮಾಡಿದ್ದ ಗೌತಮ್ ಅದನ್ನು
Gowtham Naidu ಎನ್ನುವ ಬ್ಲಾಗ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದನು. ಇದು ಸುಮಾರು 15 ಸಾವಿರ ವೀಕ್ಷಣೆ ಕಂಡಿದ್ದು ಇದನ್ನು ಗಮನಿಸಿದ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲು ಮಾಡಿದ್ದಾರೆ.