ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Kedarnath:ಚಾರ್ ಧಾಮ್ ಯಾತ್ರೆಗೆ ಚಾಲನೆ; ತೆರದ ಕೇದಾರನಾಥ ಧಾಮದ ಬಾಗಿಲು.

ರುದ್ರಪ್ರಯಾಗ: ಉತ್ತರಾಖಂಡದ (uttarakand) ಪವಿತ್ರ ಚಾರಧಾಮ್ ಯಾತ್ರೆಯ ಭಾಗವಾಗಿ, ಕೇದಾರನಾಥ (kedaranath) ಧಾಮದ ಬಾಗಿಲುಗಳನ್ನು ತೆರಲಾಯಿತು. ಬೆಳಿಗ್ಗೆ 7 ಗಂಟೆಗೆ ವೃಷಭ ಲಗ್ನದಲ್ಲಿ ಭಕ್ತರ ದರ್ಶನಕ್ಕಾಗಿ ಶಾಸ್ತ್ರೋಕ್ತವಾಗಿ ತೆರೆಯಲಾಯಿಗಿದ್ದು ಭಕ್ತ ಸಾಗರವೇ ಸೇರಿತು.
11:00 PM May 02, 2025 IST | ಶುಭಸಾಗರ್
ರುದ್ರಪ್ರಯಾಗ: ಉತ್ತರಾಖಂಡದ (uttarakand) ಪವಿತ್ರ ಚಾರಧಾಮ್ ಯಾತ್ರೆಯ ಭಾಗವಾಗಿ, ಕೇದಾರನಾಥ (kedaranath) ಧಾಮದ ಬಾಗಿಲುಗಳನ್ನು ತೆರಲಾಯಿತು. ಬೆಳಿಗ್ಗೆ 7 ಗಂಟೆಗೆ ವೃಷಭ ಲಗ್ನದಲ್ಲಿ ಭಕ್ತರ ದರ್ಶನಕ್ಕಾಗಿ ಶಾಸ್ತ್ರೋಕ್ತವಾಗಿ ತೆರೆಯಲಾಯಿಗಿದ್ದು ಭಕ್ತ ಸಾಗರವೇ ಸೇರಿತು.

Kedarnath:ಚಾರ್ ಧಾಮ್ ಯಾತ್ರೆಗೆ ಚಾಲನೆ; ತೆರದ ಕೇದಾರನಾಥ ಧಾಮದ ಬಾಗಿಲು.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ರುದ್ರಪ್ರಯಾಗ: ಉತ್ತರಾಖಂಡದ (uttarakand) ಪವಿತ್ರ ಚಾರಧಾಮ್ ಯಾತ್ರೆಯ ಭಾಗವಾಗಿ, ಕೇದಾರನಾಥ (kedaranath) ಧಾಮದ ಬಾಗಿಲುಗಳನ್ನು ತೆರಲಾಯಿತು. ಬೆಳಿಗ್ಗೆ 7 ಗಂಟೆಗೆ ವೃಷಭ ಲಗ್ನದಲ್ಲಿ ಭಕ್ತರ ದರ್ಶನಕ್ಕಾಗಿ ಶಾಸ್ತ್ರೋಕ್ತವಾಗಿ ತೆರೆಯಲಾಯಿಗಿದ್ದು ಭಕ್ತ ಸಾಗರವೇ ಸೇರಿತು.

ಕೇದಾರನಾಥ ದೇವಾಲಯವನ್ನು ಈ ಬಾರಿ 108 ಕ್ವಿಂಟಾಲ್ ವಿವಿಧ ರೀತಿಯ ಹೂಗಳಿಂದ ಅಲಂಕರಿಸಲಾಗಿದೆ. ನೇಪಾಳ, ಥಾಯ್‌ಲ್ಯಾಂಡ್ ಮತ್ತು ಶ್ರೀಲಂಕಾದಿಂದ ತರಲಾದ ಗುಲಾಬಿ, ಮಲ್ಲಿಗೆ ಸೇರಿದಂತೆ 54 ಬಗೆಯ ಹೂಗಳಿಂದ ದೇವಾಲಯದ ಶೃಂಗರಿಸಲಾಗಿದೆ.

ಗುರುವಾರ ಸಂಜೆ ಬಾಬಾ ಕೇದಾರನಾಥನ ಪಂಚಮುಖಿ ಡೋಲಿಯು ಕೇದಾರನಾಥ ಧಾಮಕ್ಕೆ ಆಗಮಿಸಿತು. ಡೋಲಿಯ ಆಗಮನದ ಸಂದರ್ಭದಲ್ಲಿ ಭಕ್ತರು ಭಕ್ತಿಭಾವದಿಂದ ಸ್ವಾಗತಿಸಿದರು. ಬಾಗಿಲು ತೆರೆಯುವ ಸಮಾರಂಭದಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಭಾಗವಹಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮೊದಲ ಪೂಜೆ ಸಲ್ಲಿಸಲಾಯಿತು.

Advertisement

ಇದನ್ನೂ ಓದಿ:-Karnataka Weather: ಕರ್ನಾಟಕದ ಈ ಜಿಲ್ಲೆಗಳಲ್ಲಿ ಮೇ 6 ರವರೆಗೆ ಮಳೆ ಎಚ್ಚರಿಕೆ

ಬಾಗಿಲು ತೆರೆಯುತ್ತಿದ್ದಂತೆ ಭಕ್ತರು ತಮ್ಮ ಶ್ರದ್ಧೆಯನ್ನು ಜಯಕಾರಗಳ ಮೂಲಕ ವ್ಯಕ್ತಪಡಿಸಿದರು. ದೇವಾಲಯದ ಸುತ್ತಲೂ ಭಕ್ತರ ದಂಡು ಜಮಾಯಿಸಿತು. ಕೇದಾರನಾಥ ಧಾಮದಲ್ಲಿ ಈ ಬಾರಿ ಭಕ್ತರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಭದ್ರತೆ, ಆರೋಗ್ಯ ಸೇವೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೇದಾರನಾಥ ಯಾತ್ರೆಗಾಗಿ ಸರ್ಕಾರವು ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಿದೆ. ಈ ಬಾರಿ ಕೇದಾರನಾಥ ಮತ್ತು ಯಮುನೋತ್ರಿ ಮಾರ್ಗದಲ್ಲಿ 4,300ಕ್ಕೂ ಹೆಚ್ಚು ಕುದುರೆ-ಗಾಡಿ ಸಂಚಾಲಕರು ಸೇವೆಯನ್ನು ಒದಗಿಸಲಿದ್ದಾರೆ. ಇದರ ಜೊತೆಗೆ, ಯಾತ್ರಿಗಳ ಸುರಕ್ಷತೆಗಾಗಿ ಪ್ಯಾರಾ ಮಿಲಿಟರಿ ಫೋರ್ಸ್‌ನ ತುಕಡಿಯನ್ನು ಮೊದಲ ಬಾರಿಗೆ ನಿಯೋಜಿಸಲಾಗಿದೆ.

Advertisement
Tags :
KarnatakaKedarnatha templeuttaralandಕೇಧಾರನಾಥ ದೇವಸ್ಥಾನ
Advertisement
Next Article
Advertisement