Karnataka:ಸಾರಿಗೆ ನೌಕರರ ಮುಷ್ಕರಕ್ಕೆ ಉತ್ತರ ಕನ್ನಡ ,ಶಿವಮೊಗ್ಗ ಜಿಲ್ಲೆಯಲ್ಲಿ ಹೇಗಿತ್ತು ಪ್ರತಿಕ್ರಿಯೆ ?
ಸಾರಿಗೆ ನೌಕರರ ಮುಷ್ಕರಕ್ಕೆ ಉತ್ತರ ಕನ್ನಡ ,ಶಿವಮೊಗ್ಗ ಜಿಲ್ಲೆಯಲ್ಲಿ ಹೇಗಿತ್ತು ಪ್ರತಿಕ್ರಿಯೆ ?

ಕಾರವಾರ :- ರಾಜ್ಯಾದ್ಯಂತ ಸಾರಿಗೆ ನೌಕರರು ಕರೆನೀಡಿರುವ ಬಂದ್ ಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೋರ್ಟ (court) ಆದೇಶ ಹಾಗೂ ಸಾರಿಗೆ ನೌಕರರ ಗೊಂದಲದಿಂದ ಜಿಲ್ಲೆಯ ಕಾರವಾರ ಸೇರಿದಂತೆ ಜಿಲ್ಲೆಯ ಏಳು ಡಿಪೋಗಳಲ್ಲಿ ಬೆಳಗಿನಿಂದ ಸ್ಥಳೀಯ ಹಾಗೂ ಹೊರ ಜಿಲ್ಲೆಯ ಸಾರಿಗೆ ಬಸ್ ಗಳು ಎಂದಿನಂತೆ ಸಂಚರಿಸಿತು. ಆದರೇ ಸಾರಿಗೆ ನೌಕರ ಸಂಘದ ಮುಖಂಡರ ಒತ್ತಡಕ್ಕೆ ಮಣಿದ ಕೆಲವು ನೌಕರರು ಬಸ್ ಗಳನ್ನು ನಿಲ್ದಾಣ ಹಾಗೂ ಡಿಪೋ ದಲ್ಲಿ ನಿಲ್ಲಿಸಿ ಬಂದ್ ಗೆ ಬೆಂಬಲ ನೀಡಿದರು.
ಇದನ್ನೂ ಓದಿ:-Karnataka:ರಾಜ್ಯದಲ್ಲಿ ಚುರುಕುಗೊಂಡ ಮುಂಗಾರು:ಎಲ್ಲಿ ಹೇಗಿರಲಿದೆ ಮಳೆ ಪ್ರತಾಪ! ವಿವರ ನೋಡಿ
ಇದರಿಂದಾಗಿ ಹುಬ್ಬಳ್ಳಿ, ಗೋವಾ,ಬೆಳಗಾವಿ, ಧಾರವಾಡ, ಹುಬ್ಬಳ್ಳಿ ,ಮಂಗಳೂರು,ಬೆಂಗಳೂರು ಭಾಗಗಳಿಗೆ ಹೋಗುವ ಬಸ್ ನಲ್ಲಿ ವ್ಯತ್ಯಯ ಉಂಟಾಗಿದೆ. ಇನ್ನು ಸ್ಥಳೀಯ ಸಾರಿಗೆ ಸಹ ವ್ಯತ್ಯಯವಾಗಿದ್ದು ಪ್ರಯಾಣಿಕರು ಇತರೆಡೆ ತೆರಳಲು ಪರದಾಡಿದರು.
ಬದಲಿ ವ್ಯವಸ್ಥೆ ಮಾಡದ ಸಾರಿಗೆ ಇಲಾಖೆ
ಇನ್ನು ಕೋರ್ಟ ಆದೇಶ ಹಿನ್ನಲೆಯಲ್ಲಿ ಸಾರಿಗೆ ಇಲಾಖೆಯಿಂದ ಬದಲಿ ವ್ಯವಸ್ಥೆ ಯನ್ನು ಸಾರಿಗೆ ಇಲಾಖೆ ಡಿಸಿಯವರು ಮಾಡಲಿಲ್ಲ. ಇದರ ಪರಿಣಾಮ ಶಾಲಾ ಮಕ್ಕಳಿಗೆ ದೊಡ್ಡ ಸಮಸ್ಯೆ ತಂದೊಡ್ಡಿತು. ಜಿಲ್ಲೆಯಲ್ಲಿ 500 ಕ್ಕೂ ಹೆಚ್ಚು ಸಾರಿಗೆ ಬಸ್ ಗಳು ಸಂಚರಿಸುತ್ತವೆ. ಖಾಸಗಿ ಬಸ್ ಗಳು ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ವಿರಳವಾಗಿದ್ದು ,ಟೆಂಪೋಗಳು ಮಾತ್ರ ಹಚ್ಚಿನವುಗಳಿವೆ.
ಆದರೇ ಸೂಕ್ತ ಪರ್ಯಾಯ ವ್ಯವಸ್ಥೆ ಇಲ್ಲದೇ ಬಾಡಿಗೆ ವಾಹನಗಳಿಗೆ ಜನ ಅವಲಂಭಿಸುವಂತಾಯಿತು.
ಹೊರ ರಾಜ್ಯಕ್ಕೆ ಎಂದಿನಂತೆ ಸಂಚಾರ
ಕಾರವಾರದಿಂದ ಗೋವಾ,ಮುಂಬೈ ಭಾಗಕ್ಕೆ ತೆರಳುವ ಬಸ್ ಗಳು ಎಂದಿನಂತೆ ಸಂಚಾರ ಮಾಡಿತಿದ್ದು ,ಗೋವಾ ರಾಜ್ಯದ ಕದಂಬ ಸಾರಿಗೆ ಸಂಚಾರ ಇರುವುದರಿಂದ ಯಾವುದೇ ಸಮಸ್ಯೆ ಎದುರಾಗಿಲ್ಲ.
ಶಿವಮೊಗ್ಗ ದಲ್ಲಿ ಬಂದ್ !
ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಬೆಳಗ್ಗೆ KSRTC ಬಸ್ ಗಳ ಸಂಚಾರ ಎಂದಿನಂತಿದ್ದರೂ ,9 ಗಂಟೆ ನಂತರ ಹೆಚ್ಚಿನ ಬಸ್ ಗಳು ರಸ್ತೆಗಿಳಿಯಲಿಲ್ಲ. ಟ್ರೈನಿ ಚಾಲಕರು ಹಾಗೂ ಖಾಸಗಿ ಚಾಲಕರನ್ನು ಬಳಸಿಕೊಂಡಿದ್ದರೂ ಪ್ರಯಾಣಿಕರು ಖಾಸಗಿ ಬಸ್ ನತ್ತ ಮುಖ ಮಾಡುವುದರ ಜೊತೆಗೆ ವಾಹನ ವ್ಯವಸ್ಥೆ ಮಾಡಿಕೊಂಡಿದ್ದು ಶಿವಮೊಗ್ಗ ಮುಖ್ಯ ನಿಲ್ದಾಣ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತಿತ್ತು.