ಮೋದಿ ಕಾರ್ಯಕ್ರಮಕ್ಕೆ "ಅನಂತ" ಗೈರು! ಜನ ಏನಂದ್ರು?
ಕಾರವಾರ :- ಉತ್ತರ ಕನ್ನಡ(uttra Kannada) ಜಿಲ್ಲೆಯ ಶಿರಸಿಯ(sirsi) ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಮೋದಿ ಚುನಾವಣಾ ಪ್ರಚಾರ (election campaign)ನಡೆಸಿದರು. ಆದ್ರೆ ಕಾರ್ಯಕ್ರಮದಲ್ಲಿ ಬಿಜೆಪಿ(Bjp) ಕಾರ್ಯಕರ್ತರು ನಿರೀಕ್ಷೆ ಮಾಡಿದ್ದ ಸಂಸದ ಅನಂತಕುಮಾರ್ ಹೆಗಡೆ ಗೈರಾಗಿರುವುದು ಪಕ್ಷದ ನಾಯಕರೂ ಸೇರಿದಂತೆ ಜನರ ಆಕ್ರೋಶಕ್ಕೆ ಕಾರಣವಾಯಿತು.
ಹೌದು ನರೇಂದ್ರ ಮೋದಿ (pm narendra modi) ಹೆಸರಲ್ಲಿ ಗೆದ್ದ ಅನಂತಕುಮಾರ್ ಹೆಗಡೆ 30 ವರ್ಷದ ಸುದೀರ್ಘ ಸಂಸದರಾಗಿ ರಾಜಕೀಯ ಮಡಿದವರು.
ಇದನ್ನೂ ಓದಿ:-ಕಾಗೇರಿಗೆ ಅನಂತ ಮೌನದ ಪೆಟ್ಟು! ಮತ್ತೆ ಪ್ರಸಕ್ತ ರಾಜಕಾರಣಕ್ಕೆ ಬರಲಿದ್ದಾರಾ ಹಿಂದು ಹುಲಿ?
ಈ ಬಾರಿ ಮೋದಿ (modi)ಗೆಲ್ಲಬೇಕು ಎನ್ನುತ್ತಲೇ ಚುನಾವಣೆ ಪೂರ್ವ ಪ್ರಚಾರ ಮಾಡಿದವರು. ಹೀಗಿರುವಾಗ ಮೋದಿಯೇ ಕುದ್ದು ಶಿರಸಿಗೆ ಆಗಮಿಸಿದಾಗ ಗೈರಾಗಿ ತಮ್ಮ ಮುನಿಸನ್ನು ಹೊರಹಾಕಿದ್ದಾರೆ.
ಇನ್ನು ಮೋದಿ ಕಾರ್ಯಕ್ರಮಕ್ಕೆ ಗೈರಾದ ಕಾರಣ ಅನಂತಕುಮಾರ್ ಹೆಗಡೆ ಬಗ್ಗೆ ಅಭಿಮಾನವಿದ್ದ ಅದೆಷ್ಟೋ ಜನರು ಈಗಲಾದರೂ ಮೋದಿ ಕಾರ್ಯಕ್ರಮಕ್ಕೆ ಬರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೇ ,ಬಿಜೆಪಿ ,ಹಿಂದುತ್ವ, ಮೋದಿ ಎನ್ನುವ ಹೆಗಡೆ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿ ಬಾರದೇ ಹೋದರು ಇದು ಸರಿಯಲ್ಲಾ ಅವರ ಉಪಸ್ಥಿತಿ ಇರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಅನಂತ ರಾಜಕೀಯ ಯುಗಾಂತ್ಯ!
ಇನ್ನು ಬಹುತೇಕ ಬಿಜೆಪಿ ಮುಖಂಡರಿಗೆ ಹೆಗಡೆ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇತ್ತು. ಅವರು ಪಕ್ಷದ ರಾಜಕೀಯ ಅಸ್ಥಿತ್ವದ ಪ್ರಶ್ನೆ ಸಹ ಅವರ ಉಪಸ್ಥಿತಿಯಲ್ಲಿತ್ತು. ಹೀಗಿರುವಾಗ ಅವರ ಅಸಹಕಾರ ,ಮೋದಿ ವಿರುದ್ಧ ನಡೆ ಅವರ ರಾಜಕೀಯ ವೃತ್ತಿಯಮೇಲೂ ಪರಿಣಾಮ ಬೀರುತ್ತದೆ.
ಮೂಲಗಳ ಪ್ರಕಾರ ರಾಜ್ಯ ರಾಜಕಾರಣಕ್ಕೆ ಬರುವ ಹುಮ್ಮಸ್ಸು ಅವರಲ್ಲಿ ಇದ್ದರೂ ಅವರ ನಡೆಯೇ ಇದೀಗ ಅವರಿಗೆ ಮುಳುವಾಗುತ್ತಿದೆ.
ಇನ್ನು ರಾಜಕೀಯ ಸಾಕು ಎನ್ನುತ್ತಿರುವ ಹೆಗಡೆ ರಾಜಕೀಯ ನಿವೃತ್ತಿ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ತಮ್ಮ ಉದ್ಯಮದ ಕಡೆ ಹೆಚ್ಚು ಗಮನ ಹರಿಸುತಿದ್ದಾರೆ ಎಂದು ಹೇಳಲಾಗುತ್ತಿದೆ.ಆದರೇ ಅನಂತಕುಮಾರ್ ಹೆಗಡೆ ನಿಲುವುಗಳನ್ನು ನೋಡಿದರೇ ಅವರ ರಾಜಕೀಯ ಯುಗಾಂತ್ಯದತ್ತ ಸಾಗುತ್ತಿದೆ.
ಮೋದಿ ವೇದಿಕೆಯಲ್ಲಿ ಅನಂತ ಮಾಯ!
ಯಾವುದೇ ಪ್ರಚಾರ ಸಭೆಗಳಿರಲಿ ರಾಜ್ಯ ರಾಷ್ಟ್ರ ನಾಯಕರ ಫೋಟೋಗಳು ಸಹ ವೇದಿಕೆಯಲ್ಲಿ ಮೇಳೈಸುತ್ತದೆ.ಆದರೇ ಇಂದು ನಡೆದ ಕಾರ್ಯಕ್ರಮದಲ್ಲಿ ವೇದಿಕೆ ಹೊರಭಾಗದಲ್ಲಿ ಅನಂತಕುಮಾರ್ ಹೆಗಡೆ ಭಾವಚಿತ್ರ ಬಿಟ್ಟರೇ ವೇದಿಕೆ ಮೇಲೆ ಹೆಗಡೆ ಭಾವ ಚಿತ್ರ ಕಾಣೆಯಾಗಿತ್ತು. ಈ ಮೂಲಕವೇ ತಿಳಿದುಕೊಳ್ಳಬೇಕಾದ್ದು ಏನೆಂದರೇ ಹೆಗಡೆ ಒಳಗಿಲ್ಲ ಹೊರಗಿದ್ದಾರೆ ಎಂಬ ಹಾಸ್ಯ ಚಟಾಕೆ ಕಾರ್ಯಕ್ರಮಕ್ಕೆ ಬಂದವರು ನುಡಿದರು.
ಹೆಗಡೆ ಗೈರು ಕಾಗೇರಿ ಗೆ ಪೈರು!
ಕಾಗೇರಿಗೆ ಟಿಕೇಟ್ ಸಿಕ್ಕನಂತರ ಹೆಗಡೆ ಮೌನ ಬಿಜೆಪಿಗೆ (Bjp) ದೊಡ್ಡ ಆಘಾತ ತಂದಿತ್ತು. ಹೆಗಡೆ ಪರ ಇದ್ದವರು ಕಾಗೇರಿಗೆ ಟಿಕೇಟ್ ಕೊಟ್ಟಿದ್ದು ಸರಿಯಲ್ಲ ಎಂಬ ಅಭಿಪ್ರಾಯ ಹೇಳುತ್ತಲೇ ಬಂದಿದ್ದರು.ಆದ್ರೆ ಮೋದಿ ಕಾರ್ಯಕ್ರಮಕ್ಕೆ ಹೆಗಡೆ ಗೈರಾಗಿರುವುದು ಇದೀಗ ರಾಜಕೀಯ ಎದುರಾಳಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಪ್ಲಸ್ ಆಗುತಿದ್ದು ಕಾಗೇರಿ ಎಲ್ಲವನ್ನೂ ಮರೆತು ಹೆಗಡೆ ಭೇಟಿಗಾಗಿ ಕಾದರೇ ಸ್ವಾರ್ಥಕ್ಕಾಗಿ ಹೆಗಡೆ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂಬ ಅಭಿಪ್ರಾಯ ಜನರಲ್ಲಿ ಮೂಡುತಿದ್ದು ಕಾಗೇರಿ ಪರ ಒಲವು ಮೂಡುವಂತೆ ಮಾಡಿದೆ.