Karnataka| ಹವಾಮಾನ ಇಲಾಖೆಯಿಂದ ಮಳೆ ಎಚ್ಚರಿಕೆ |ಎಷ್ಟು ದಿನ ಮಳೆ ಗೊತ್ತಾ?
Karnataka| ಹವಾಮಾನ ಇಲಾಖೆಯಿಂದ ಮಳೆ ಎಚ್ಚರಿಕೆ |ಎಷ್ಟು ದಿನ ಮಳೆ ಗೊತ್ತಾ?
Rain news 23 september 2025:-ರಾಜ್ಯ ಬಹುತೇಕ ಜಿಲ್ಲೆಗಳಲ್ಲಿ ಒಂದು ವಾರಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೊತೆಗೆ ರಾಜ್ಯದ ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಸೇರಿ 7 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಇನ್ನು ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸೆ.27ರ ಬಳಿಕ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಚ್ಚರ ವಹಿಸಿ
ಸೆಪ್ಟಂಬರ್ 23 ರದ 27 ರ ವರೆಗೆ ಉತ್ತರ ಕನ್ನಡ,ಶಿವಮೊಗ್ಗ ,ಉಡುಪಿ,ಮಂಗಳೂರು ಭಾಗದಲ್ಲಿ ಅಲ್ಪ ಮಳೆಯಾಗಲಿದೆ. ಬಹುತೇಕ ಮಳೆ ಮಧ್ಯಹ್ನ ಹಾಗೂ ರಾತ್ರಿ ವೇಳೆ ಸುರಿಯಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಿ ನಂತರ ಬಿಸಿಲಿನ ವಾತಾವರಣ ಇರಲಿದೆ.
ಸೆಪ್ಟಬರ್ 27 ರ ನಂತರ ಶಿವಮೊಗ್ಗ, ಉತ್ತರ ಕನ್ನಡ,ಉಡುಪಿ ಯಲ್ಲಿ ಸಾಧಾರಣ ,ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು ಈ ಸಂದರ್ಭದಲ್ಲಿ ಗಾಳಿ ಅಲ್ಪ ಹೆಚ್ಚಾಗಲಿದ್ದು ,ಉಡುಪಿ,ಮಂಗಳೂರು,ಉತ್ತರ ಕನ್ನಡ ಜಿಲ್ಲೆಯ ಹೆದ್ದಾರಿ ಸವಾರರು ಎಚ್ಚರದಿಂದ ಇರಬೇಕಾಗಿದೆ.
ಇಂದು ಉತ್ತರ ಕನ್ನಡ,ಉಡುಪಿ,ಶಿವಮೊಗ್ಗ ಜಿಲ್ಲೆಯ ಕೆಲವು ಭಾಗದಲ್ಲಿ ಅಲ್ಪ ಮಳೆಯಾಗಿದೆ. ಕೆಲವು ಭಾಗದಲ್ಲಿ ಮೋಡ ಕವಿದ ವಾತಾವರಣ ಸಹ ಇದ್ದು ನಾಳೆಯೂ ಈ ಭಾಗದಲ್ಲಿ ಮಮಳೆಯಾಗಲಿದೆ