Mundgod|ಮುಂಡಗೋಡು ಠಾಣೆಯಲ್ಲಿ ಮುಕಳೆಪ್ಪ ,ವಿವಾಹ ನೊಂದಾವಣೆ ಅಧಿಕಾರಿ ಸೇರಿ ಏಳು ಜನರ ಮೇಲೆ ಪ್ರಕರಣ ದಾಖಲು
Mundgod|ಮುಂಡಗೋಡು ಠಾಣೆಯಲ್ಲಿ ಮುಕಳೆಪ್ಪ ,ವಿವಾಹ ನೊಂದಾವಣೆ ಅಧಿಕಾರಿ ಸೇರಿ ಏಳು ಜನರ ಮೇಲೆ ಪ್ರಕರಣ ದಾಖಲು.
ಕಾರವಾರ:-ಯೂಟ್ಯೂಬರ್ ಮುಕಳೆಪ್ಪ ವಿವಾಹ ವಿವಾದ ಸಂಬಂಧಿಸಿ ಉತ್ತರಕನ್ನಡ ಜಿಲ್ಲೆಯ ಮುಂಡಗೋಡಿನ ಸಬ್ ರಿಜಿಸ್ಟರ್ ಕಚೇರಿಗೆ ಹಿಂದೂಪರ ಸಂಘಟನೆ ಹಾಗೂ ಯುವತಿ ತಾಯಿ ಶಿವಕ್ಕ ಮುತ್ತಿಗೆಹಾಕಿ ತರಾಟೆ ತೆಗೆದುಕೊಂಡ ಬೆನ್ನಲ್ಲೇ ಇದೀಗ ವಿವಾಹ ನೊಂದಣಿ ಮಾಡಿದ ರಿಜಿಸ್ಟರ್ ಸಹಿತ ಒಟ್ಟು ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆರೋಪ ಏನು?

ವಿವಾಹ ನೊಂದಣಿ ಅಧಿಕಾರಿ ಹಣ ಪಡೆದು, ನಿಯಮ ಬಾಹಿರ ವಿವಾಹ ನೋಂದಣಿ ಮಾಡಿದ್ದಾರೆ.ಸಬ್ ರಿಜಿಸ್ಟ್ರಾರ್ ಹೇಮಾ ನಿಯಮ ಮೀರಿ ವಿವಾಹ ನೊಂದಣಿ ಮಾಡಿದ್ದಾರೆ.ಹುಬ್ಬಳ್ಳಿ- ಧಾರವಾಡ ನಿವಾಸಿಗಳನ್ನು ಮುಂಡಗೋಡ ನಿವಾಸಿಗಳೆಂದು ಸುಳ್ಳು ದಾಖಲೆ ನೀಡಿದ್ದಾರೂ . ಜೂನ್ 5 ರಂದು ದಾಖಲೆ ನೀಡಿ ಜೂನ್ 5 ರಂದೇ ವಿವಾಹ ನೋಂದಣಿ ಮಾಡಿಕೊಂಡಿದ್ದಾರೆ. ನಿಯಮದಂತೆ ವಿವಾಹವಾಗೋರು ಒಬ್ಬರಾದ್ರೂ ಸ್ಥಳೀಯರಾಗಿರಬೇಕು. ಈ ನಿಯಮವನ್ನೇ ಸಬ್ ರಿಜಿಸ್ಟ್ರಾರ್ ಗಾಳಿಗೆ ತೂರಿದ್ದಾರೆ ಎಂಬ ಅರೋಪ ವಾದರೇ ವಿವಾಹ ನೊಂದಣಿಗೆ ಅನುವು ಮಾಡಿಕೊಟ್ಟವರ ವಿರುದ್ದವೂ ಗಾಯಿತ್ರಿ ತಾಯಿ ಶಿವಕ್ಕ ಸುಳ್ಳು ದಾಖಲೆ ಸೃಷ್ಟಿಸಿರುವ ಆರೋಪ ಮಾಡಿದ್ದಾರೆ.
ಯಾರ ವಿರುದ್ಧ ದೂರು ದಾಖಲು.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಠಾಣೆಯಲ್ಲಿ ವಿವಾಹ ನೊಂದಾವಣಿ ಅಧಿಕಾರಿ ಸೇರಿ ಒಟ್ಟು ಏಳು ಜನರ ಮೇಲೆ ದೂರು ದಾಖಲಾಗಿದೆ.
ಧಾರವಾಡದ ಯೂಟ್ಯೂಬರ್ ಖ್ವಾಜಾ ಬಂದೇ ನವಾಜ್,(ಆರೋಪಿ-1) ,ಮುಂಡಗೋಡಿನ ಮೈಬೂಬಸಾಬ್ ಕಮಡೊಳ್ಳಿ( ಆರೋಪಿ-2), ಹುಬ್ಬಳ್ಳಿಯ ಅಮ್ಜದ್ ಅಲಿ ಶಿರಹಟ್ಟಿ,(ಆರೋಪಿ-3), ಹಾವೇರಿಯ ಕಾವೇರಿ ಜಗದೀಶ್ ಹೊಸಮನಿ,(ಆರೋಪಿ-4), ದೀಪಾ ಕರಮಡ್ಡಿ,(ಆರೋಪಿ-5) ದೇವರಾಜ(6) ಹಾಗೂ ಸಬ್ ರಿಜಿಸ್ಟ್ರಾರ್ ಹೇಮಾ (ಆರೋಪಿ-7) ವಿರುದ್ಧ ಪ್ರಕರಣ ದಾಖಲಾಗಿದೆ.