ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Doctor :ವರ್ಷದಲ್ಲಿ ಒಂದೇ ಹೆರಿಗೆ ಮಾಡಿಸಿದ ಸರ್ಕಾರಿ ವೈದ್ಯ

ಶಿವಮೊಗ್ಗ:  ಶಿವಮೊಗ್ಗ (shivamogga) ಜಿಲ್ಲೆಯ ಸಾಗರದ ಸರ್ಕಾರಿ ವಿಭಾಗೀಯ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರೊಬ್ಬರು ಕಳೆದೊಂದು ವರ್ಷದಲ್ಲಿ ಕೇವಲ ಒಂದು ಹೆರಿಗೆ ಮಾಡಿಸಿದ್ದಾರೆ. ಸೊರಬ ತಾಲ್ಲೂಕಿನ
10:15 PM May 01, 2025 IST | ಶುಭಸಾಗರ್
ಶಿವಮೊಗ್ಗ:  ಶಿವಮೊಗ್ಗ (shivamogga) ಜಿಲ್ಲೆಯ ಸಾಗರದ ಸರ್ಕಾರಿ ವಿಭಾಗೀಯ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರೊಬ್ಬರು ಕಳೆದೊಂದು ವರ್ಷದಲ್ಲಿ ಕೇವಲ ಒಂದು ಹೆರಿಗೆ ಮಾಡಿಸಿದ್ದಾರೆ. ಸೊರಬ ತಾಲ್ಲೂಕಿನ

Doctor :ವರ್ಷದಲ್ಲಿ ಒಂದೇ ಹೆರಿಗೆ ಮಾಡಿಸಿದ ಸರ್ಕಾರಿ  ವೈದ್ಯ!

Advertisement

ಶಿವಮೊಗ್ಗ:  ಶಿವಮೊಗ್ಗ (shivamogga) ಜಿಲ್ಲೆಯ ಸಾಗರದ ಸರ್ಕಾರಿ ವಿಭಾಗೀಯ ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರೊಬ್ಬರು ಕಳೆದೊಂದು ವರ್ಷದಲ್ಲಿ ಕೇವಲ ಒಂದು ಹೆರಿಗೆ ಮಾಡಿಸಿದ್ದಾರೆ. ಸೊರಬ ತಾಲ್ಲೂಕಿನ ಕುಪ್ಪಗಡ್ಡೆ ಸರ್ಕಾರಿ ಆಸ್ಪತ್ರೆಯಲ್ಲಿ ಮೂವರು ಸ್ಟಾಫ್‌ ನರ್ಸ್‌ಗಳಿದ್ದು, ಮೂರು ವರ್ಷಗಳಿಂದ ಅಲ್ಲಿ ಒಂದೂ ಹೆರಿಗೆ ಆಗಿಲ್ಲ. ಎಲ್ಲ ಗರ್ಭಿಣಿಯರನ್ನೂ ಖಾಸಗಿ ಆಸ್ಪತ್ರೆಗೆ ರೆಫ‌ರ್ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದರೆ ₹50,000ದಿಂದ ₹1 ಲಕ್ಷ ಬಿಲ್ ಪಾವತಿಸಬೇಕಿದೆ.

ಹೌದು ಈ ಕುರಿತು ಶಿವಮೊಗ್ಗದ  ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿಧಾನಪರಿಷತ್‌ ಸದಸ್ಯೆ ಭಾರತಿ ಶೆಟ್ಟಿ ಮಾಹಿತಿ ಸಮೇತ ಸಭೆಯ ಗಮನಕ್ಕೆ ತಂದರು.

ಭಾರತಿ ಶೆಟ್ಟಿ ಅವರ ಆರೋಪವನ್ನು ಸಭೆಯಲ್ಲಿದ್ದ ಡಿಎಚ್‌ಒ ಡಾ.ನಟರಾಜ್ ಒಪ್ಪಿಕೊಂಡರಲ್ಲದೆ, ವಿಭಾಗೀಯ ಆಸ್ಪತ್ರೆಯ ವೈದ್ಯರ ವಿರುದ್ದ ಕ್ರಮ ಕೈಗೊಂಡಿದ್ದು, ವಾರಕ್ಕೆ ಮೂರು ದಿನ ಹೊಸನಗರ ಆಸ್ಪತ್ರೆಗೆ ನಿಯೋಜನೆ ಮಾಡಲಾಗಿದೆ ಎಂದರು.

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಖಾಸಗಿ ಆಸ್ಪತ್ರೆಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಸರ್ಕಾರಿ ಆಸ್ಪತ್ರೆಗಳಿಗೆ ಬರುವವರನ್ನು ಕಳುಹಿಸಲಾಗುತ್ತಿದೆ.

ಇನ್ನು ಈ ಕುರಿತು ಸಾಗರ ಶಾಸಕ ಗೋಪಾಲಕೃಷ್ಣ ಸಹ ಅಸಮಧಾನ ಹೊರಹಾಕಿದ್ದು ಇಂತ ವೈದ್ಯರನ್ನು ಬೇರೆಡೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು.

Advertisement
Tags :
DoctorKarnatakaNewsSagarShivamoggaSorabhaಸಾಗರ
Advertisement
Next Article
Advertisement