Sirsi : ಬೆಣ್ಣೆಹೊಳೆಯಲ್ಲಿ ತೇಲಿಹೋದ ರಾಹುಲ್ ಗಾಗಿ ಮುಂದುವರೆದ ಶೋಧ- ಅಲ್ಲಿ ಸಿಕ್ಕಿದ್ದೇನು
Sirsi : ಬೆಣ್ಣೆಹೊಳೆಯಲ್ಲಿ ತೇಲಿಹೋದ ರಾಹುಲ್ ಗಾಗಿ ಮುಂದುವರೆದ ಶೋಧ- ಅಲ್ಲಿ ಸಿಕ್ಕಿದ್ದೇನು
Sirsi news:- ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ತಾಲೂಕಿ ಬಂಡಲ್ ಗ್ರಾಮಪಂಚಾಯ್ತಿ ವ್ಯಾಪ್ತಿಯ ಬೆಣ್ಣೆಹೊಳೆ ಫಾಲ್ಸ್ ನಲ್ಲಿ ಭಾನುವಾರ ಕಾಣೆಯಾಗಿದ್ದ ಹೂವಿನ ಹಡಗಲಿ ಮೂಲದ ರಾಹುಲ್ ಈವರೆಗೂ ಸಿಕ್ಕಿಲ್ಲ.
ಭಾನುವಾರ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಸೋಮವಾರವೂ ಕಾರ್ಯಾಚರಣೆ ಮುಂದುವರೆಸಿದ್ದರು.
ಈ ಕಾರ್ಯಾಚರಣೆಯಲ್ಲಿ ರಾಹುಲ್ ಬಟ್ಟೆ,ಚಪ್ಪಲಿಗಳು ಮಾತ್ರ ದೊರೆತಿದ್ದು ,ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಬೆಣ್ಣೆಹೊಳೆಯಲ್ಲಿ ತೇಲಿಹೋಗಿ ಅಘನಾಶಿನಿ ನದಿಯಲ್ಲಿ ಆತ ಕಾಣೆಯಾಗಿರುವ ಸಾಧ್ಯತೆಯನ್ನು ಊಹಿಸಲಾಗಿದೆ. ದಟ್ಟ ಅರಣ್ಯವಾದ ಕಾರಣ ಶೋಧ ಕಾರ್ಯಕ್ಕೂ ಅಡೆತಡೆಗಳಾಗಿದ್ದು ಮಂಗಳವಾರವೂ ಶೋಧಕಾರ್ಯ ಮುಂದುವರೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಗಾಯಗೊಂಡಿರುವ ಶ್ರೀನಿವಾಸ್ ನಿಗೆ ಬೆನ್ನುಮೂಳೆ ಮುರಿದು ಎರಡು ಕಾಲುಗಳು ಸ್ವಾದೀನ ಕಳೆದುಕೊಂಡಿದೆ. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ಕಳುಹಿಸಿಕೊಡಲಾಗಿದೆ.
ಭಾನುವಾರ ನಡೆದಿದ್ದು ಏನು?
ಬೆಣ್ಣೆಹೊಳೆ ಜಲಪಾತ ವೀಕ್ಷಣೆಗಾಗಿ ಶಿರಸಿಯಿಂದ ಬೈಕ್ ನಲ್ಲಿ ಹೋಗಿದ್ದ ನಾಲ್ಕುಜನ ಫಾರೆಸ್ಟ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ರಾಹುಲ್ ಮತ್ತು ಶ್ರೀನಿವಾಸ್ ಕಾಲುಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದರು.
Sirsi news|ಕಾಡು ಪ್ರಾಣಿಗಾಗಿ ಇಟ್ಟ ನಾಡಬಾಂಬ್ ಸ್ಪೋಟ -ಹಸು ಗಂಭೀರ ಗಾಯ
ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಕಲ್ಲು ಬಂಡೆಯಡಿ ಸಿಲುಕಿದ್ದ ಶ್ರೀನಿವಾಸ್ ನನ್ನು ರಕ್ಷಣೆ ಮಾಡಿದ್ದರು.ಆದರೇ ರಾಹುಲ್ ಮಾತ್ರ ಪತ್ತೆಯಾಗಿರಲಿಲ್ಲ. ಇದೀಗ ರಾಹುಲ್ ಗಾಗಿ ಎರಡು ದಿನ ಕಾರ್ಯಾಚರಣೆ ನಡೆಸಿರುವ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಆತನ ಬಟ್ಟೆ ,ಚಪ್ಪಲಿಯನ್ನು ಪತ್ತೆಮಾಡಿದ್ದಾರೆ.
