For the best experience, open
https://m.kannadavani.news
on your mobile browser.
Advertisement

Karnataka:ಮುರುಡೇಶ್ವರ ದೇವಸ್ಥಾನದ ಹೆಸರಲ್ಲಿ ನಕಲಿ ಲಕ್ಕಿ ಡ್ರಾ- ದುಡ್ಡು ದೋಚುತ್ತಿರುವವರ ವಿರುದ್ಧ ದೂರು ದಾಖಲು

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪ್ರಸಿದ್ಧ ಶ್ರೀ ಮುರುಡೇಶ್ವರ ದೇವಾಲಯದ (murdeshwar) ಹೆಸರಿನಲ್ಲಿ ನಕಲಿ ಲಕ್ಕಿ ಡ್ರಾ ಆಯೋಜನೆ ಮಾಡಲಾಗಿದ್ದು ,ದೇವಸ್ಥಾನದ ಹೆಸರಿನಲ್ಲಿ ಟಿಕೇಟ್ ಮಾರಾಟ ಮಾಡುತ್ತಿರುವವರ ವಿರುದ್ಧ ದೇವಸ್ಥಾನದ ಆಡಳಿತ ಮಂಡಳಿ ಮುರುಡೇಶ್ವರ ಠಾಣೆಯಲ್ಲಿ ದೂರು ನೀಡಿದೆ.
11:26 PM Aug 07, 2025 IST | ಶುಭಸಾಗರ್
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪ್ರಸಿದ್ಧ ಶ್ರೀ ಮುರುಡೇಶ್ವರ ದೇವಾಲಯದ (murdeshwar) ಹೆಸರಿನಲ್ಲಿ ನಕಲಿ ಲಕ್ಕಿ ಡ್ರಾ ಆಯೋಜನೆ ಮಾಡಲಾಗಿದ್ದು ,ದೇವಸ್ಥಾನದ ಹೆಸರಿನಲ್ಲಿ ಟಿಕೇಟ್ ಮಾರಾಟ ಮಾಡುತ್ತಿರುವವರ ವಿರುದ್ಧ ದೇವಸ್ಥಾನದ ಆಡಳಿತ ಮಂಡಳಿ ಮುರುಡೇಶ್ವರ ಠಾಣೆಯಲ್ಲಿ ದೂರು ನೀಡಿದೆ.
karnataka ಮುರುಡೇಶ್ವರ ದೇವಸ್ಥಾನದ ಹೆಸರಲ್ಲಿ ನಕಲಿ ಲಕ್ಕಿ ಡ್ರಾ  ದುಡ್ಡು ದೋಚುತ್ತಿರುವವರ ವಿರುದ್ಧ ದೂರು ದಾಖಲು

ಮುರುಡೇಶ್ವರ ದೇವಸ್ಥಾನದ ಹೆಸರಲ್ಲಿ ನಕಲಿ ಲಕ್ಕಿ ಡ್ರಾ- ದುಡ್ಡು ದೋಚುತ್ತಿರುವವರ ವಿರುದ್ಧ ದೂರು ದಾಖಲು

Advertisement

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪ್ರಸಿದ್ಧ ಶ್ರೀ ಮುರುಡೇಶ್ವರ ದೇವಾಲಯದ (murdeshwar) ಹೆಸರಿನಲ್ಲಿ ನಕಲಿ ಲಕ್ಕಿ ಡ್ರಾ ಆಯೋಜನೆ ಮಾಡಲಾಗಿದ್ದು ,ದೇವಸ್ಥಾನದ ಹೆಸರಿನಲ್ಲಿ ಟಿಕೇಟ್ ಮಾರಾಟ ಮಾಡುತ್ತಿರುವವರ ವಿರುದ್ಧ ದೇವಸ್ಥಾನದ ಆಡಳಿತ ಮಂಡಳಿ ಮುರುಡೇಶ್ವರ ಠಾಣೆಯಲ್ಲಿ ದೂರು ನೀಡಿದೆ.

ಇದನ್ನೂ ಓದಿ:-Murdeshwar : ಮುರುಡೇಶ್ವರ ದಲ್ಲಿ ಹೊರ ರಾಜ್ಯದ ಮಹಿಳೆ ತಂದು ವೇಶ್ಯಾವಾಟಿಕೆ -ಮೂರು ಜನರ ಬಂಧನ.

“ನವೀನ್ ಬ್ರೋ” ಎಂಬ ಇನ್‌ಸ್ಟಾಗ್ರಾಂ ಖಾತೆ ಮೂಲಕ “ಶ್ರೀ ಮುರುಡೇಶ್ವರ ಅದೃಷ್ಟ ಡ್ರಾ” ಎಂಬ ಹೆಸರಿನಲ್ಲಿ ಲಾಟರಿ ಪ್ರಚಾರ ನಡೆಯುತ್ತಿದ್ದು, ಪೋಸ್ಟರ್ ನಲ್ಲಿ 501 ಬಹುಮಾನಗಳಿವೆ ಎಂದು ಉಲ್ಲೇಖಿಸಲಾಗಿದೆ. ಪ್ರತಿ ಟಿಕೆಟ್‌ಗೆ ₹299 ಹಣ ಕಟ್ಟಬೇಕೆಂದು ತಿಳಿಸಲಾಗಿದೆ.

ಲಾಟರಿ ಟೋಕನ್‌ಗಾಗಿ ಆನ್‌ಲೈನ್ ಮೂಲಕ ಮೊಬೈಲ್ ಸಂಖ್ಯೆಯ ಬಳಕೆ ಮಾಡಲಾಗುತ್ತಿದ್ದು, ಸಾರ್ವಜನಿಕರಲ್ಲಿ ನಂಬಿಕೆ ಮೂಡಿಸಿ ಹಣ ವಸೂಲಿಗೆ ಪ್ರಯತ್ನ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೇವಾಲಯದ ಚಿತ್ರ ಹಾಗೂ ಹೆಸರನ್ನು ದುರುಪಯೋಗಪಡಿಸಿಕೊಂಡು ಈ ರೀತಿಯ ಮೋಸಮಾಡುವ ಪ್ರಚಾರ ನಡೆಯುತ್ತಿದೆ.ಯಾರೂ ಮೋಸ ಹೋಗಿ ಹಣ ಕಳದೆಕೊಳ್ಳಬಾರದು ಎಂದು ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ.ದೂರುದಾಖಲಿಸಿಕೊಂಡಿರುವ ಮುರುಡೇಶ್ವರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ