ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Yallapur: ಹಳ್ಳದಲ್ಲಿ ಕೊಚ್ಚಿಹೋದ ಓರ್ವ ಯುವಕನ ಶವ ಪತ್ತೆ 

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೇಡ್ತಿ ನದಿಯ ಕವಲಗಿ ಹಳ್ಳದಲ್ಲಿ ಕೊಚ್ಚಿ ಹೊಗಿದ್ದ ಇಬ್ಬರ ಸಹೋದರರ ಪೈಕಿ 24 ಗಂಟೆ ಬಳಿಕ ಓರ್ವನ ಮೃತ ದೇಹ ಪತ್ತೆಯಾಗಿದೆ.
10:52 PM Aug 11, 2025 IST | ಶುಭಸಾಗರ್
ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೇಡ್ತಿ ನದಿಯ ಕವಲಗಿ ಹಳ್ಳದಲ್ಲಿ ಕೊಚ್ಚಿ ಹೊಗಿದ್ದ ಇಬ್ಬರ ಸಹೋದರರ ಪೈಕಿ 24 ಗಂಟೆ ಬಳಿಕ ಓರ್ವನ ಮೃತ ದೇಹ ಪತ್ತೆಯಾಗಿದೆ.

Yallapur: ಹಳ್ಳದಲ್ಲಿ ಕೊಚ್ಚಿಹೋದ ಓರ್ವ ಯುವಕನ ಶವ ಪತ್ತೆ 

Advertisement

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ(yallapur) ತಾಲೂಕಿನ ಬೇಡ್ತಿ ನದಿಯ ಕವಲಗಿ ಹಳ್ಳದಲ್ಲಿ ಕೊಚ್ಚಿ ಹೊಗಿದ್ದ ಇಬ್ಬರ ಸಹೋದರರ ಪೈಕಿ 24 ಗಂಟೆ ಬಳಿಕ ಓರ್ವನ ಮೃತ ದೇಹ ಪತ್ತೆಯಾಗಿದೆ.

ರಫೀಕ್ ಇಬ್ರಾಹಿಂ ಸಾಬ್ (27) ಮೃತ ದೇಹ ಪತ್ತೆಯಾಗಿದ್ದು ಹನೀಫ್ ಇಬ್ರಾಹಿಂ ಸಾಬ್ ಸಯ್ಯದ (25) ಗಾಗಿ ಶೋಧ ಕಾರ್ಯ ಮುಂದುವರೆದಿದೆ.

Advertisement

ಮೀನು ಹಿಡಿದು ಮರಳಿ ಮನೆಗೆ ಹೋಗುವಾಗ ಕೊಚ್ಚಿ ಹೊಗಿದ್ದ ಸಹೋದರಿಗಾಗಿ  ಯಲ್ಲಾಪುರದ CPI ರಮೇಶ್ ಹಾನಾಪುರ ನೇತ್ರತ್ವದಲ್ಲಿ ಶೋಧ ಕಾರ್ಯ ನಡೆಯುತಿದ್ದು  ನಿನ್ನೆ ರಾತ್ರಿಯಿಂದ ಇಬ್ಬರಿಗಾಗಿ ರಮೇಶ್ ಹಾನಾಪುರ ತಂಡ ಶೋಧ ಕಾರ್ಯ ನಡೆಸುತಿತ್ತು.

ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹೇಗಾಗಿತ್ತು ಘಟನೆ?

ಅಬ್ಬರದ ಮಳೆಯಿಂದ ಕವಲಗಿ ಹಳ್ಳದಲ್ಲಿ ಭಾನುವಾರ ಮೀನು ಹಿಡಿಯಲು ಹೋಗಿದ್ದ ಸಹೋದರರಾದ ಹನೀಫ್ ಮತ್ತು ಇಮಾಮ್ ಮೀನುಹಿಡಿದುಕೊಂಡು ಕೈ ಕೈ ಹಿಡಿದು ಹಳ್ಳ ದಾಟುವಾಗ ಮದನಸರ ಗ್ರಾಮದ ರಫೀಕ್ ಇಬ್ರಾಹಿಂ ಸಾಬ್ ಸಯ್ಯದ್( 27), ಹನೀಫ್ ಇಬ್ರಾಹಿಂ ಸಾಬ್ ಸಯ್ಯದ್( 25), ಇಮಾಮ್ ಕಾಶೀಮ್ ಸಯ್ಯದ್ ಕೊಚ್ಚಿ ಹೋಗಿದ್ದರು.ಈ ಮೂವರ ಪೈಕಿ ರಫೀಕ್ ಮತ್ತು ಇಮಾಮ್ ನನ್ನ ರಕ್ಷಿಸಿದ್ದ ಜಮಾಲ್ ಸಾಬ್ ,ತಮ್ಮ ಹನೀಫ್ ಕೊಚ್ಚಿಕೊಂಡ ಹೊಗುತ್ತಿದ್ದನ್ನು ನೋಡಲಾಗದೆ ರಫೀಕ್ ಮತ್ತೆ ನೀರಿಗೆ ಹಾರಿದ್ದನು.

ಇದನ್ನೂ ಓದಿ:-Yallapur:ಯಲ್ಲಾಪುರ ಬೇಡ್ತಿ ನದಿಯ  ಹಳ್ಳದಲ್ಲಿ ಕೊಚ್ಚಿಹೋದ ಸಹೋದರರು

 ಹಳ್ಳದ ನೀರಿನ ರಭಸಕ್ಕೆ ತಮ್ಮನ ರಕ್ಷಣೆಗೆ ಹೋದ ಅಣ್ಣ ರಫೀಕ್ ಕೂಡ ಕೊಚ್ಚಿ ಹೊಗಿದ್ದಾನೆ.ರಾತ್ರಿಯೇ ಕೊಚ್ಚಿ ಹೋಗಿರುವ ಇಬ್ಬರು ಸಹೋದರರಾಗಿ ಶೋಧ ಕಾರ್ಯ ನಡೆದಿತ್ತು.

ಇನ್ನು ಕೊಚ್ಚಿ ಹೋದ ಇಬ್ವರು ಸಹೋದರರಿಗೂ ಮದುವೆ ಆಗಿ ಮಕ್ಕಳಿದ್ದಾರೆ,ಆದರೇ ಇದೀಗ ಈ ಮಕ್ಕಳು ಅನಾತರಾಗುವಂತಾಗಿದೆ‌

 

Advertisement
Tags :
bedthi riverbody foundKarnatakaNewsYallapur
Advertisement
Next Article
Advertisement