Comedy Actor:ಕಾಮಿಡಿ ಆಕ್ಟರ್ ಮೃತ ಚಂದ್ರಶೇಖರ್ ಸಿದ್ದಿಗೆ ಪತ್ನಿಯಿಂದಲೇ ಹಲ್ಲೆ ಹಳೆಯ ವಿಡಿಯೋ ರಿಲೀಸ್!
Comedy Actor:ಕಾಮಿಡಿ ಆಕ್ಟರ್ ಮೃತ ಚಂದ್ರಶೇಖರ್ ಸಿದ್ದಿಗೆ ಪತ್ನಿಯಿಂದಲೇ ಹಲ್ಲೆ ಹಳೆಯ ವಿಡಿಯೋ ರಿಲೀಸ್!
ವಿಡಿಯೋ ನೋಡಿ:-
Karwar :- ಕಾಮಿಡಿ ಕಿಲಾಡಿಗಳು (comedy kiladigalu ) ಸೀಜನ್ ಮೂರರ ಖ್ಯಾತಿಯ ನಟ ಚಂದ್ರಶೇಖರ ಸಿದ್ದಿ ಆತ್ಮಹತ್ಯೆ ಮಾಡಿಕೊಂಡು ಒಂದು ವಾರಗಳು ಕಳೆದಿದೆ.ಇದೀಗ ಆತನ ಪತ್ನಿ ಮದ್ಯ ಸೇವಿಸಿ ಬಂದ ಚಂದ್ರಶೇಖರ ಸಿದ್ದಿಗೆ ಕೋಲು ಹಿಡಿದು ಹಲ್ಲೆ ಮಾಡುತ್ತಿರುವ ವಿಡಿಯೋ ಹೊರಬಂದಿದೆ.
ಮದ್ಯ ಸೇವಿಸಿ ಮನೆಗೆ ಬಂದ ಚಂದ್ರಶೇಖರ್ ಗೆ ಆತನ ಪತ್ನಿ ಕಮಲಾಕ್ಷಿ ಹಾಗೂ ಇತರರು ಸೇರಿ ಬೇಕಾಬಿಟ್ಟಿಯಾಗಿ ಹೊಡೆಯುತ್ತಿದ್ದು ,ಮದ್ಯದ ಅಮಲಿನಲ್ಲಿ ಚಂದ್ರಶೇಖರ ಸಿದ್ದಿ ಇರುವುದು ಸ್ಪಷ್ಟವಾಗಿದೆ.
ಇದನ್ಮೂ ಓದಿ:-Comedy actor :ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ದಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಚಂದ್ರಶೇಖರ ಸಿದ್ದಿ ಕಾಮಿಡಿ ಶೋ ನಂತರ ಸೀತಾರಾಮ ಕಲ್ಯಾಣ ಸೇರಿದಂತೆ ಕೆಲವು ಧಾರವಾಹಿಗಳಲ್ಲಿ ಅಭಿನಯಿಸಿದ್ದನು ,ಹೆಚ್ಚಿನ ಅವಕಾಶ ಇರದೇ ಮನನೊಂದಿದ್ದ ಈತ ಮದ್ಯ ವ್ಯಸನಿಯಾಗಿದ್ದನು. ಇದರಿಂದಾಗಿ ಪತಿ-ಪತ್ನಿ ನಡುವೆ ಜಗಳಗಳು ಆಗುತಿದ್ದು ,ಪ್ರಕರಣ ಠಾಣೆಯ ಮೆಟ್ಟಿಲೇರಿತ್ತು. ಇಬ್ಬರನ್ನೂ yallapur ಠಾಣೆಗೆ ಕರೆಯಿಸಿ ಸಂಧಾನ ಮಾಡಿ ಕಳುಹಿಸಿದ್ದರು.
ಆದರೇ ಕೂಲಿ ಕೆಲಸಕ್ಕಾಗಿ ಯಲ್ಲಾಪುರದ ಕಟ್ಟಿಗೆ ಗ್ರಾಮದಲ್ಲಿದ್ದ ಚಂದ್ರಶೇಖರ ಸಿದ್ದಿ ಅರಣ್ಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. ಇನ್ನು ಈ ಕುರಿತು ಆತನ ತಾಯಿ ಲಕ್ಷ್ಮಿ ಸಿದ್ದಿ ಯಲ್ಲಾಪುರ ಠಾಣೆಯಲ್ಲಿ ಮಗನ ಸಾವಿನ ಅನುಮಾನ ವ್ಯಕ್ತಪಡಿಸಿದ ದೂರು ನೀಡಿದ್ದರು.
ಇನ್ನು ಪತ್ನಿ ಕಮಲಾಕ್ಷಿ ಸಹ ಪಬ್ಲಿಕ್ ಟಿವಿಯಲ್ಲಿ ಗಂಡ ಕುಡಿದು ಹೊಡೆಯುವ ಬಗ್ಗೆ ನೋವು ತೋಡಿಕೊಂಡಿದ್ದರು. ಆದರೇ ಇದೀಗ ಚಂದ್ರಶೇಖರ ಗೆ ಪತ್ನಿಯೇ ಹೊಡೆಯುತ್ತಿರುವ ವಿಡಿಯೋ ಹೊರಬಂದಿದ್ದು , ಪತ್ನಿಯ ಇನ್ನೊಂದು ಮುಖ ಹೊರಬಂದಿದೆ. ಹೀಗಾಗಿ ಚಂದ್ರಶೇಖರ ತಾಯಿ ಲಕ್ಷ್ಮಿ ರವರು ಹೇಳಿರುವ ಮತ್ತು ದೂರು ನೀಡಿರುವುದಕ್ಕೆ ಮತ್ತಷ್ಟು ಪುಷ್ಟಿ ಬಂದಂತಾಗಿದೆ.
