For the best experience, open
https://m.kannadavani.news
on your mobile browser.
Advertisement

Mundgod: ವಿದ್ಯಾರ್ಥಿ ಪಾಠ ಕಲಿಯಲಿಲ್ಲ ,ಶಿಕ್ಷಕಿ ಹೊಡೆತಕ್ಕೆ ಮೈಯೆಲ್ಲಾ ಬಾಸುಂಡೆ!

ಕಾರವಾರ :- ವಿದ್ಯಾರ್ಥಿ (student) ಸರಿಯಾಗಿ ಕಲಿಯುವುದಿಲ್ಲ ಎಂದು ಬಾಸುಂಡೆ ಬರುವಂತೆ ಶಿಕ್ಷಕಿ ಥಳಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ (mundgodu) ತಾಲೂಕಿನ ಕಾಳಗನಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
11:10 PM Aug 07, 2025 IST | ಶುಭಸಾಗರ್
ಕಾರವಾರ :- ವಿದ್ಯಾರ್ಥಿ (student) ಸರಿಯಾಗಿ ಕಲಿಯುವುದಿಲ್ಲ ಎಂದು ಬಾಸುಂಡೆ ಬರುವಂತೆ ಶಿಕ್ಷಕಿ ಥಳಿಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ (mundgodu) ತಾಲೂಕಿನ ಕಾಳಗನಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
mundgod  ವಿದ್ಯಾರ್ಥಿ ಪಾಠ ಕಲಿಯಲಿಲ್ಲ  ಶಿಕ್ಷಕಿ ಹೊಡೆತಕ್ಕೆ ಮೈಯೆಲ್ಲಾ ಬಾಸುಂಡೆ

Mundgod: ವಿದ್ಯಾರ್ಥಿ ಪಾಠ ಕಲಿಯಲಿಲ್ಲ ,ಶಿಕ್ಷಕಿ ಹೊಡೆತಕ್ಕೆ ಮೈಯೆಲ್ಲಾ ಬಾಸುಂಡೆ!

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ :- ವಿದ್ಯಾರ್ಥಿ (student) ಸರಿಯಾಗಿ ಕಲಿಯುವುದಿಲ್ಲ ಎಂದು ಬಾಸುಂಡೆ ಬರುವಂತೆ ಶಿಕ್ಷಕಿ ಥಳಿಸಿದ ಘಟನೆ
ಉತ್ತರಕನ್ನಡ ಜಿಲ್ಲೆಯ ಮುಂಡಗೋಡ (mundgodu) ತಾಲೂಕಿನ ಕಾಳಗನಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಎರಡನೇ ತರಗತಿ ಓದುತ್ತಿರುವ ಬಾಲಕನಿಗೆ, ಬೆನ್ನಿನ ಮೇಲೆ ಬಾಸುಂಡೆ ಮೂಡುವ ಹಾಗೆ ಭಾರತಿ ನಾಯ್ಕ ಎಂಬ ಶಿಕ್ಷಕಿಯೊಬ್ಬರು ಹೊಡೆದಿರುವ ಘಟನೆ ನಡೆದಿದೆ. ಸರಿಯಾಗಿ ಬರೆಯುವುದಿಲ್ಲ, ಕಲಿಸಿರೋದನ್ನು ಮನನ ಮಾಡಿಕೊಳ್ಳುವುದಿಲ್ಲ ಎಂದು ಸಿಟ್ಟಿಗೆದ್ದು ಶಿಕ್ಷಕಿಯು ವಿದ್ಯಾರ್ಥಿಗೆ ಕೋಲಿನಿಂದ ಹೊಡೆದಿದ್ದಾರೆ.
ಶಾಲೆ ಬಿಟ್ಟ ನಂತರ ಮನೆಗೆ ಹೋದ ಬಾಲಕ, ಮನೆಯಲ್ಲಿ ನೋವು ತಡೆದುಕೊಳ್ಳಲಾರದೇ ಅಳಲು ಆರಂಭಿಸಿದ್ದಾನೆ.

ಇದನ್ನೂ ಓದಿ:-Mundgod: ಬಸ್ ನಿಲ್ದಾಣಕ್ಕೆ ಬೇಲಿ ಹಾಕಿ ಪ್ರತಿಭಟಿಸಿದ ಭೂ ದಾನ ನೀಡಿದ ವ್ಯಕ್ತಿ ಕಾರಣ ಕೇಳಿದ್ರೆ ಶಾಕ್!

ಮನೆಯವರು ಮೈಮೇಲಿನ ಶರ್ಟ್‌ ಬಿಚ್ಚಿ ನೋಡಿದಾಗ ಬಾಸುಂಡೆಗಳು ಮೂಡಿರುವುದು ಕಂಡುಬಂದಿದೆ. ಬಾಲಕನ ತಾಯಿ, ಗ್ರಾಮದ ಪ್ರಮುಖರಲ್ಲಿ ತಮ್ಮ ಮಗನಿಗೆ, ಶಿಕ್ಷಕಿ ಹೊಡೆದಿರುವುದನ್ನು ತೋರಿಸಿ ಕಣ್ಣೀರು ಹಾಕಿದ್ದಾರೆ. ಶಾಲೆ ಬಿಟ್ಟ ನಂತರ ಮಾಹಿತಿ ತಿಳಿಯುತ್ತಿದ್ದಂತೆ ಬಿಇಒ ಸುಮಾ ಜಿ. ಶಾಲೆಗೆ ಭೇಟಿ ನೀಡಿದ್ದು, ಬಾಲಕನ ಪಾಲಕರು ಹಾಗೂ ಶಿಕ್ಷಕಿಯ ಜತೆ ಮಾತನಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಈ ವೇಳೆ ಶಿಕ್ಷಕಿ, ತಾನು ಉದ್ದೇಶಪೂರ್ವಕವಾಗಿ ಬಾಲಕನಿಗೆ ಹೊಡೆದಿಲ್ಲ. ನನ್ನಿಂದ ತಪ್ಪಾಗಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ. ಶಿಕ್ಷಕಿಯ ಮಾತು ಕೇಳಿ ಬಿಇಒ ಸುಮಾ ಆಕೆಯ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ನಂತರ ಬಾಲಕನನ್ನು ಮುಂಡಗೋಡದ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಶಾಲಾಭಿವೃದ್ಧಿ ಸಮಿತಿಯವರು ಹಾಗೂ ಬಾಲಕನ ಕುಟುಂಬಸ್ಥರು ಪೊಲೀಸ್‌ ಠಾಣೆಗೆ ತೆರಳಿ ಮಾಹಿತಿ ನೀಡಿದ್ದು ಪ್ರಕರಣ ಮಾತ್ರ ದಾಖಲಾಗಿಲ್ಲ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ