Bhatkal: ಪ್ರತಿಭಟನೆ ಕಾರ್ಯಕರ್ತರಿಗೆ ಕೇಸ್ ನಾಯಕರಿಗೆ ಕೋಕ್ ! ಬಲಿಪಶುವಾದ್ರಾ ಬಿಜೆಪಿ ಕಾರ್ಯಕರ್ತರು!
Bhatkal: ಪ್ರತಿಭಟನೆ ಕಾರ್ಯಕರ್ತರಿಗೆ ಕೇಸ್ ನಾಯಕರಿಗೆ ಕೋಕ್ ! ಬಲಿಪಶುವಾದ್ರಾ ಬಿಜೆಪಿ ಕಾರ್ಯಕರ್ತರು!
ಕಾರವಾರ :- ತನಿಖೆ ಹೆಸರಿನಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ಉತ್ತರ ಕನ್ನಡ (uttara kannda)ಎಸ್.ಪಿ ಹಲ್ಲೆಮಾಡಿದ್ದಾರೆ ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಆರೋಪ ಮಾಡಿದ ಹಿನ್ನಲೆಯಲ್ಲಿ ಏ.8 ರಾತ್ರಿ ಸುಳ್ಳು ಸುದ್ದಿ ಹರಡಿ ಹೆದ್ದಾರಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದ 12 ಜನ ವಿರುದ್ಧ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಟ್ಕಳ ಶಹರ ಠಾಣೆಯಲ್ಲಿ ಪಿ.ಎಸ್.ಐ ನವೀನ್ ರವರಿಂದ ಎರಡು ಪ್ರತ್ತೇಕ ಪ್ರಕರಣ ದಾಖಲಿಸಿದ್ದು ,ಕಲಂ 189(2), 285,292, 353(2), ಸಹಿತ 190 ಭಾರತೀಯ ನ್ಯಾಯ ಸಂಹಿತೆ 2023 ಹಾಗೂ ಕಲಂ 35(1)(e) ಕರ್ನಾಟಕ ಪೊಲೀಸ್ ಕಾಯ್ದೆ 1963 ಅಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:-Bhatkal: ರಸ್ತೆ ತಡೆದು ಪ್ರತಿಭಟಿಸಿದ 12 ಜನರ ಮೇಲೆ ಪ್ರಕರಣ ದಾಖಲು
ಆದರೇ ಪ್ರತಿಭಟನೆ ನೇತ್ರತ್ವ ವಹಿಸಿದ್ದ ಬಿಜೆಪಿ ನಾಯಕರ ಹೆಸರನ್ನು ಕೈ ಬಿಡಲಾಗಿದೆ. ಹೆಸರಿಗೆ ಮಾತ್ರ ಬಿಜೆಪಿ ನಾಯಕರು ಕೆಲಸಕ್ಕೆ ಕಾರ್ಯಕರ್ತರು ಎನ್ನುವ ಮಾತು ಇದೀಗ ಕೇಳಿಬರುತ್ತಿದೆ. ಈ ಹಿಂದೆ ಪರೇಶ್ ಮೇಸ್ತಾ ಗಲಾಟೆಯಲ್ಲೂ ಅಂದಿನ ಬಿಜೆಪಿ ಸರ್ಕಾರ ಶಾಸಕರ ಹಾಗೂ ಮುಖಂಡರ ಮೇಲಿದ್ದ ಪ್ರಕರಣ ಹಿಂಪಡೆದಿತ್ತು. ಆದರೇ ಅಂದು ಉಗ್ರ ಪ್ರತಿಭಟನೆ ಮಾಡಿದ ಕಾರ್ಯಕರ್ತರು ಇಂದಿಗೂ ಸಹ ನ್ಯಾಯಾಲಯದಲ್ಲಿ ಕೈ ಕಟ್ಟಿ ನಿಲ್ಲುತಿದ್ದಾರೆ.
ಭಟ್ಕಳದಲ್ಲಿ ತಮ್ಮ ಪ್ರಭಾವ ಬಳಸಿ ಬೀಸೋ ದೊಣ್ಣೆಯಿಂದ ಪ್ರತಿಭಟನೆಯಲ್ಲಿ ಭಾಗಿಯಾದ ನಾಯಕರು ತಪ್ಪಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಬಿಜೆಪಿ ಕಾರ್ಯಕರ್ತರನ್ನ ಹೇಗೆ ಬಳಸಿಕೊಳ್ಳುತ್ತಿದೆ ಎಂಬುದಕ್ಕೆ ಇದು ಸಾಕ್ಷಿ ಎನ್ನುವಂತಾಗಿದ್ದು ,ಇದೀಗ ಕಾರ್ಯಕರ್ತರಲ್ಲಿ ಪಕ್ಷದ ನಾಯಕರ ಮೇಲೆ ಬೇಸರ ಬರುವಂತಾಗಿದೆ.
ಪ್ರಚಾರಕ್ಕೆ ನಮ್ಮನ್ನು ಬಳಸಿಕೊಳ್ತಾರೆ ,ಆದ್ರೆ ಕೇಸು ಬಿದ್ದಾಗ ನಾಯಕರು ಎನಿಸಿಕೊಂಡವರು ಜಾರಿಕೊಳ್ತಾರೆ ಎಂಬ ಆರೋಪ ಬುಗಿಲೆದ್ದಿದೆ.