Rain news| ಉತ್ತರ ಕನ್ನಡ ಕಡಲ ಮಕ್ಕಳಿಗೆ ಎಚ್ಚರಿಕೆ ಶುಕ್ರವಾರ ಸಮುದ್ರಕ್ಕಿಳಿಯುವ ಮುಂಚೆ ಯೋಚಿಸಿ.
Rain news| ಉತ್ತರ ಕನ್ನಡ ಕಡಲ ಮಕ್ಕಳಿಗೆ ಎಚ್ಚರಿಕೆ ಶುಕ್ರವಾರ ಸಮುದ್ರಕ್ಕಿಳಿಯುವ ಮುಂಚೆ ಯೋಚಿಸಿ.
Rain news(23 october 2025):- ಉತ್ತರ ಕನ್ನಡ ಜಿಲ್ಲೆ (uttara kannada )ಸೇರಿದಂತೆ ಹಲವು ಕಡೆ ಭಾರಿ ಹಾಗೂ ಮಧ್ಯಮ ಗಾತ್ರದ ಗಾಳಿ ಸಹಿತ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು ,ಕರಾವಳಿಯಲ್ಲಿ ಆರೆಂಜ್ ಅಲರ್ಟ ನೀಡಲಾಗಿದೆ.
ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ : ಜಿಲ್ಲಾಧಿಕಾರಿ
ಆಗ್ನೇಯ ಅರಬ್ಬಿ ಸಮುದ್ರದ ಮೇಲೆ ವಾಯುಭಾರ ಕುಸಿತವಾಗಿದ್ದು , ನಿಧಾನವಾಗಿ ಈಶಾನ್ಯ ದಿಕ್ಕಿಗೆ ಚಲಿಸುತ್ತಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ , ಉತ್ತರ ಕನ್ನಡ ಜಿಲ್ಲೆಗೆ ಅಕ್ಟೋಬರ್ 23 ರಿಂದ ಅಕ್ಟೋಬರ್ 25 ರ ಬೆಳಗ್ಗೆ 8.30 ರ ವರೆಗೆ ಆರೆಂಜ್ ಅಲರ್ಟ್ ಇರುವ ಬಗ್ಗೆ ಮುನ್ಸೂಚನೆ ನೀಡಲಾಗಿರುವುದರಿಂದ ಈ ಅವಧಿಯಲ್ಲಿ ಸಾರ್ವಜನಿಕರು ಈ ಮುಂದಿನ ಸೂಚನೆಗಳನ್ನು ಪಾಲಿಸುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ/ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ರವರ ಮುನ್ಸೂಚನೆಯಂತೆ, 45 ರಿಂದ 55 ಕೀಮೀ ವೇಗದಲ್ಲಿ ಸಮುದ್ರ ತೀರದಲ್ಲಿ ಗಾಳಿ ಬೀಸುವ ಸಾದ್ಯತೆಯ ಹಿನ್ನೆಲೆಯಲ್ಲಿ , ಮಳೆಯ(rain) ಜೊತೆಗೆ ಗಾಳಿ ಕೂಡಾ 45-55 ಕಿ.ಮೀ ವೇಗದಿಂದ ಬೀಸುವ ಸಾಧ್ಯತೆಯಿರುವುದರಿಂದ ಅಪಾಯಕಾರಿ ಮರಗಳಿರುವ ಮನೆಗಳಲ್ಲಿಯ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವುದು ಮತ್ತು ಮರಗಳ ಕೆಳಗೆ ಆಶ್ರಯ ಪಡೆಯಬಾರದು.
ಶಿಥಿಲವಾದ ಕಟ್ಟಡದಲ್ಲಿ ವಾಸಿಸುತ್ತಿರುವವರು ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವುದು. ಸಣ್ಣ ಹಾಗೂ ಮಧ್ಯಮ ದೋಣಿಗಳು ಮೀನುಗಾರಿಕೆಗೆ ಇಳಿಯಬಾರದು. ಈ ಬಗ್ಗೆ ಉಪನಿರ್ದೇಶಕರು ಮೀನುಗಾರಿಕೆ ಇಲಾಖೆ ರವರು ಎಲ್ಲಾ ಮೀನುಗಾರರಿಗೆ ತಿಳುವಳಿಕೆ ನೀಡಿ ಪ್ರಕಟಣೆಯನ್ನು ಜಾರಿಗೆ ತರುವುದು.
Karnataka|ಕೇದಾರನಾಥ ಧಾಮದಲ್ಲಿ ಮೊಳಗಿದ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ವಿರೋಧ ಧ್ವನಿ
ಮೇಲಿನ ದಿನಗಳಲ್ಲಿ ಸಾರ್ವಜನಿಕರು ಹಾಗೂ ಮೀನುಗಾರರು ಸಮುದ್ರ ಪ್ರದೇಶಗಳಿಗೆ ಹೋಗಬಾರದು, ಪ್ರವಾಸಿಗರು, ಹಾಗೂ ಸಾರ್ವಜನಿಕರು ನದಿ/ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಬೇಕು. ಸಮುದ್ರತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆವಹಿಸಬೇಕು, ಸಮುದ್ರ ತೀರದಲ್ಲಿ ಯಾವುದೇ ಮನರಂಜನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಾರದೆಂದು ಸೂಚಿಸಲಾಗಿದೆ.
ತುರ್ತು ಸೇವೆಗಾಗಿ 24*7 ಕಂಟ್ರೋಲ್ ರೂಂ ಸಂಖ್ಯೆ 08382-229857, ವಾಟ್ಸಾಪ್ ಸಂಖ್ಯೆ. 9483511015 ಸಂಪರ್ಕಿಸುವoತೆ ಜಿಲ್ಲಾಧಿಕಾರಿಗಳು ಮತ್ತು ಅಧ್ಯಕ್ಷರು , ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉತ್ತರ ಕನ್ನಡ ಜಿಲ್ಲೆ ಅವರ ಪ್ರಕಟಣೆ ತಿಳಿಸಿದೆ.
ಕಡಲ ಮಕ್ಕಳಿಗೆ ಎಚ್ಚರಿಕೆ!
ಭಾರತ ಹವಾಮಾನ ಇಲಾಖೆ ಮಾಹಿತಿಯಂತೆ ಕರ್ನಾಟಕದ ಕರಾವಳಿಯಾದ್ಯಂತ 27 ಅಕ್ಟೋಬರ್ 2025ವರೆಗೆ ಗಾಳಿಯು ಗಂಟೆಗೆ 40-50ಕಿ.ಮೀ ವೇಗದಲ್ಲಿ, ಕೆಲವೊಮ್ಮೆ 60ಕಿಮೀ ವೇಗದಲ್ಲಿ ಬೀಸುವಸಾಧ್ಯತೆಯಿದೆ. ಹೀಗಾಗಿ ಕಡಲ ಮಕ್ಕಳು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

And for orders more than 2499 rs 15% discount ( for Deepavali)
We also take birthday parties and family get together etc also

