ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

RCB ಟೀಶರ್ಟ ನಿಂದ ಮೃತ ಪತ್ತಿಯ ಗುರುತು ಮಾಡಿದ ಸಿದ್ದಾಪುರದ ಅಕ್ಷತಾ ಪತಿ

ಕಾರವಾರ :- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ(siddapur) ನಗರದ ಅಕ್ಷತಾ (27)ಮೃತಪಟ್ಟಿದ್ದು ಆಕೆಯ ಮೃತದೇಹ ಸಿದ್ದಾಪುರಕ್ಕೆ ಆಗಮಿಸಿದ್ದು ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.ಮೂಲತಹಾ ಅಕ್ಷತಾ ಮಂಗಳೂರಿನ ಮೂಲ್ಕಿಯವಳಾಗಿದ್ದು ಸಿ.ಎ ಪರೀಕ್ಷೆಯಲ್ಲಿ ಚಿನ್ನದ ಪದಕ ವಿಜೇತೆಯಾಗಿದ್ದಳು.
12:06 PM Jun 05, 2025 IST | ಶುಭಸಾಗರ್

ಅತ್ಯಂತ ಕಡಿಮೆ ದರದಲ್ಲಿ ಎಲ್ಲಾ ಅಗತ್ಯ ವಸ್ತುಗಳು ಲಭ್ಯ- ಕಾರವಾರ ಬಸ್ ನಿಲ್ದಾಣದ ಹಿಂಭಾಗ ಬ್ರಾಹ್ಮಣ ಗಲ್ಲಿ ,ಕಾರವಾರ.

ಕಾರವಾರ :- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ(siddapur) ನಗರದ ಅಕ್ಷತಾ (27)ಮೃತಪಟ್ಟಿದ್ದು ಆಕೆಯ ಮೃತದೇಹ ಸಿದ್ದಾಪುರಕ್ಕೆ ಆಗಮಿಸಿದ್ದು ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.ಮೂಲತಹಾ ಅಕ್ಷತಾ ಮಂಗಳೂರಿನ ಮೂಲ್ಕಿಯವಳಾಗಿದ್ದು ಸಿ.ಎ ಪರೀಕ್ಷೆಯಲ್ಲಿ ಚಿನ್ನದ ಪದಕ ವಿಜೇತೆಯಾಗಿದ್ದಳು.

Advertisement

ಒಂದೂವರೆ ವರ್ಷದ ಹಿಂದೆ ಇಂಜಿನಿಯರ್ ಆಗಿರುವ ಸಿದ್ದಾಪುರ ನಗರದ ಆಶಯ್ ಜೊತೆ ವಿವಾಹವಾಗಿತ್ತು. ಗಂಡ ಹೆಂಡತಿ ಇಬ್ಬರೂ ಆರ್.ಸಿ.ಬಿ ಅಭಿಮಾನಿಗಳಾಗಿದ್ದು  ನಿನ್ನೆ  ಮಧ್ಯಾಹ್ನ ಕಚೇರಿಗೆ ರಜೆ ಹಾಕಿ ಇಬ್ಬರೂ ಆರ್.ಸಿ.ಬಿ ಟೀಶರ್ಟ ಧರಿಸಿ ರೋಡ್ ಶೋಗೆ ಭಾಗವಹಿಸಲು ತೆರಳಿದ್ದರು.

 ರೋಡ್ ಶೋ ಕ್ಯಾನ್ಸಲ್ ಆಗಿದ್ದರಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಇಬ್ಬರೂ ತೆರಳಿದ್ದರು. ಕ್ರೀಡಾಂಗಣದ ಗೇಟ್ ನಂಬರ್ 17 ರಿಂದ ಒಳಹೋದ ದಂಪತಿಗಳು ಕಾಲ್ತುಳಿತವಾದಾಗ  ಆಶಯ್ ನಿಂದ ಬೇರ್ಪಟ್ಟಿದ್ದಳು. ಈ ವೇಳೆ ಇಬ್ಬರೂ ಕಾಲ್ತುಳಿತಕ್ಕೊಳಗಾದರೂ ಓರ್ವ ಮಹಿಳೆ ಆಶಯ್ ನನ್ನು ರಕ್ಷಣೆ ಮಾಡಿದ್ದರು.

ಆದರೇ ಅಕ್ಷತಾ ಜನರ ಕಾಲಡಿ ಸಿಕ್ಕಿ ಅಲ್ಲಿಯೇ ಮೃತಪಟ್ಟಿದ್ದಳು.ಇನ್ನು ಈಕೆ ಆರ್.ಸಿ.ಬಿ ಟೀಶರ್ಟ ಧರಿಸಿದ್ದರಿಂದ ಆಶಯ್ ಗೂ ಆಕೆಯನ್ನು ಗುರುತು ಹಿಡಿಯಲು ಸಾಧ್ಯವಾಗಿದ್ದು ಆಕೆ ಸಾವನ್ನಪ್ಪಿರುವುದು ಗೊತ್ತಾಗಿದೆ.ನಂತರ ಇದೀಗ ಅಕ್ಷತಾಳ ಶವವನ್ನು ಆಶಯ್ ಮನೆಗೆ ಯರಲಾಗಿದ್ದು ಇಂದು ಇಲ್ಲಿಯೇ ಶವಸಂಸ್ಕಾರ ನೆಡೆಸಲಿದ್ದು ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ

Advertisement
Tags :
Akshatha bodyChinnaswamy StadiumPoliceRCBSiddapuraUttara kanndaಸಿದ್ದಾಪುರ
Advertisement
Next Article
Advertisement