Sagar | ಸಾಗರದಲ್ಲಿ ರಾಜ್ಯ ಮಟ್ಟದ ನಾಟಕೋತ್ಸವ 2025 | ಡಿ.5,6,7 -ಏನೆಲ್ಲಾ ವಿಶೇಷ ಇಲ್ಲಿದೆ ವಿವರ
Sagar | ಸಾಗರದಲ್ಲಿ ರಾಜ್ಯ ಮಟ್ಟದ ನಾಟಕೋತ್ಸವ 2025 | ಡಿ.5,6,7 -ಏನೆಲ್ಲಾ ವಿಶೇಷ ಇಲ್ಲಿದೆ ವಿವರ.
Sagar:- ಕಲೆ ಮತ್ತು ಸಾಹಿತ್ಯಕ್ಕೆ ಹೆಸರಾದ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಅಭಿನಯ ಸಾಗರ ಕಲಾ ತಂಡ ದಿಂದ ಡಿಸೆಂಬರ್ 5,6,7 ರಂದು ರಾಜ್ಯಮಟ್ಟದ ನಾಟಕೋತ್ಸವವನ್ನು ಸಾಗರದ(sagar) ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಆಯೋಜನೆ ಮಾಡಲಾಗಿದೆ.
ಮೂರು ದಿನ ವಿಶೇಷ ನಾಟಕಗಳನ್ನು ಏರ್ಪಡಿಸಲಾಗಿದ್ದು ಮೂರು ದಿನ ಏನೆಲ್ಲಾ ವಿಶೇಷವಿದೆ ಇಲ್ಲಿದೆ ಮಾಹಿತಿ.
ಡಿಸೆಂಬರ್ 5 ರ ಶುಕ್ರವಾರ ಶುನಶ್ಯೇಪ ನಾಟಕ
ಒಡ್ಡೋಲಗ ರಂಗ ಪರ್ಯಟನೆ ,ಹಿತ್ತಲಕೈ ರವರಿಂದ ಶುನಶ್ಯೇಪ ನಾಟಕ ಪ್ರದರ್ಶನಗೊಳ್ಳಲಿದ್ದು ,ಕಲಾ ನಿರ್ದೇಶಕ ಮಂಜುನಾಥ್ ಬೆಡಿಗೇರ ನಿರ್ದೇಶನದ ಈ ನಾಟಕದಲ್ಲಿ ರಂಗದ ಮೇಲೆ ಗಣಪತಿ ಬಿ. ಹಿತ್ತಲಕ್ಕೆ, ಪುಷ್ಪಾ ರಾಘವೇಂದ್ರ ಸಾಗರ, ಪ್ರಶಾಂತ್ ವರದಾಮೂಲ, ಗಣಪತಿ ಎಂ ನಂದಿತಳೆ, ಮಾಧವ ಶರ್ಮ ಕಲ್ದಾರ್, ಕೇಶವ ಹೆಗಡೆ ಕಿಬೈ, ನವೀನ್‌ಕುಮಾರ್ ಕುಣಜಿ, ಪ್ರಸಾದ ಹೆಗಡೆ ಹಲಗೇರಿ, ಮಾನ್ಯ ಎಲ್. ಪೂಜಾರಿ, ನೇಹಾ ಎನ್. ದೇಶಭಂಡಾರಿ, ನಿಶಾ ಎನ್.ದೇಶಭಂಡಾರಿ, ಶಕ್ತಿಧರ ಯು. ಭಟ್, ಕು| ಸೂರ್ಯ, ಕು|ವರುಣ್ ಅಭಿನಯಿಸಲಿದ್ದು ಭಾರ್ಗವ ಹೆಗ್ಗೋಡು ರವರ ಸಂಗೀತ,ಅಕ್ಷರ ಇಂದ್ರ, ಸಾಗರ ಸಂಗೀತ ಸಾಂಗತ್ಯ ಇದ್ದರೇ ರಂಗಸಜ್ಜಿಕೆ,ವಸ್ತ್ರವಿನ್ಯಾಸ ಹಾಗೂ ಪ್ರಸಾದವ ವನ್ನು ಗುರುಮೂರ್ತಿ ವರದಾಮೂಲ ರವರು ನಿರ್ವಹಿದಲಿದ್ದು ಶ್ರೀಧರ ಭಾಗವತ ಚಿಕ್ಕಹೊನ್ನೇಸರ ರವರು ರಂಗಕ್ಕೆ ಬೆಳಕಿನ ಸಂಯೋಜನೆ ನಿರ್ವಹಿಸಲಿದ್ದಾರೆ.ಮುರುಗೇಶ್ ಬಸ್ತಿಕೊಪ್ಪ, ಗಣಪತಿ ಹೆಗಡೆ ವಡ್ಡಿನಗದ್ದೆ. ನಂದನ ಹೆಗಡೆ ಮಘಗಾರ ರವರು ತಾಂತ್ರಿಕ ನೆರವು ನೀಡಲಿದ್ದು ರಂಗದಲ್ಲಿ ಶುನಶ್ಯೇಪ ನಾಟಕ ಮೂಡಿಬರಲಿದೆ.
ಡಿಸೆಂಬರ್ 6 ಶನಿವಾರ ನನ್ನ ತೇಜಸ್ವಿ ನಾಟಕ ಪ್ರದರ್ಶನ .
ಕಲಾ ಮಾಧ್ಯಮ ಬೆಂಗಳೂರು ರವರಿಂದ ನನ್ನ ತೇಜಸ್ವಿ ನಾಟಕ ಪ್ರದರ್ಶನ ಗೊಳ್ಳಲಿದ್ದು ಶ್ರೀಮತಿ ರಾಜೇಶ್ವರಿ ತೇಜಸ್ವಿ ವಿರಚಿತ ಈ ನಾಟಕವು ಬಿ.ಎಂ ಗಿರಿರಾಜ ರವರಿಂದ ನಿರ್ದೇಶನ ಹಾಗೂ ರಂಗರೂಪ ಪಡೆಯಲಿದೆ.
ರಂಗದ ಮೇಲೆ ಸವಿತಾ ಪರಮ್, ಕಲಾಮಾಧ್ಯಮ ಪರಮ್, ಕಾತ್ಯಾಯಿನಿ ಮುರುಡೇಶ್ವರ, ವಸಂತ್ ಬರಗಾಲೆ, ರಂಗು ಸಮರ್ಪಣ, ನವೀನ್, ಪವನ್ ಕುಮಾರ್ ರಾಮಣ್ಣ, ನವ್ಯಶ್ರೀ ಆರ್., ರಾಧಾರಾಣಿ, ಹರಿ ಸಮಷ್ಟಿ, ಸಂತೋಷ್ ಕರ್ಕಿ.ಸಂಗೀತ ಭರತ್ ಬಿ.ಜೆ. ಅಭಿನಯಿಸಲಿದ್ದು ,ಡಾ. ಶಮಿತಾ ಮಲ್ನಾಡ್ ರವರ ಗಾಯನ ಹೊಸ್ಮನೆ ಮೂರ್ತಿ ರವರ ಕಲೆ ,
ಮಂಜು ನಾರಾಯಣ್ ರವರ ಬೆಳಕು ,ಶೈಲೇಂದರ್ ಸಿಂಗ್ ರವರ ತಾಂತ್ರಿಕ ಸಹಾಯ,ವಿಭಿನ್ ಎಸ್ ಸಂತೋಷ್ ರವರ ಭಿತ್ತಿಪತ್ರ ವಿನ್ಯಾಸ ಕಲಾಮಾಧ್ಯಮ ತಂಡದ ಪ್ರಚಾರ ,ಸವಿತಾ-ರಾಧಾರಾಣಿ ರವರ ವಸ್ತ್ರವಿನ್ಯಾಸ ವಿದ್ದು ,ಸವಿತಾ ಪರಮ್ ರವರ ರಂಗ ನಿರ್ವಹಣೆ ಇರಲಿದೆ.
ಡಿಸೆಂಬರ್ 7 ಭಾನುವಾರ ಮಾಯಾದ್ವೀಪ ನಾಟಕ ಪ್ರದರ್ಶನ .
ನೆನಪು ಕಲ್ಚರಲ್ ಚಾರಿಟೆಬಲ್ ಟ್ರಸ್ಟ್ , ಬೆಂಗಳೂರು ಇವರಿಂದ ಮಾಯಾದ್ವೀಪ ನಾಟಕ ಪ್ರದರ್ಶನಗೊಳ್ಳಲಿದೆ.
ದಿಲೀಪ್ ಬಿ.ಎಂ., ಜಯರಾಮ್ ಶ್ರೀನಿವಾಸ್, ಸಂಜೀವ, ವಿಕ್ರಮ್ ರಂಗನಾಥಗೌಡ, ಮಹದೇವ್, ರಾಘವೇಂದ್ರ ಹಾಲುಮತ, ನಯನ್ ಕುಮಾರ್, ಕಿಶೋರ್ ಕುಮಾರ್ ವಿ, ಶ್ರೇಯಸ್ ವಿ. ಭಾರಧ್ವಾಜ್, ದೀಪಕ್ ಶಿವಶಂಕರ್, ದರ್ಶನ್. ಆರ್, ಅಮರೇಶ್ ಸಜ್ಜನ್, ಯೋಗೇಶ್, ಖುಷಿ ಕುಯ್ಯಮುಡಿ, ತನುಜ ಜಗದೀಶ್, ಲಾವಣ್ಯ ಕೃಷ್ಣ, ಸಹಜ ಎಸ್., ರಜತ್. ರ ರು ರಂಗದ ಮೇಲೆ ಅಭಿನಯಿಸಿದರೇ ಸಂಗೀತ ನಿರ್ದೇಶನ ಹರಿಪ್ರಸಾದ್ ,ಸಹನಿರ್ದೇಶನ ಪ್ರಜ್ವಲ್ ಎಚ್ ರವರು ನೆರವೇರಿಸಲಿದ್ದು ರಾಕೇಶ್, ಸುರಭಿ ಎಸ್., ಶೃತಿ, ಶ್ರೇಯ ಬಡಚಿ, ಅನನ್ಯ ಹಿನ್ನಲೆ ಗಾಯನ,ವಿಜಯ್ ಬೆಣಚ ಮತ್ತು ತಂಡ ದಿಂದ ಪ್ರಸಾಧನ ,ದಿಲೀಪ್ ಬಿ.ಎಂ. ರಿಂದ ಸಂಪೂರ್ಣ ನಿರ್ವಹಣೆ ಈ ನಾಟಕಕ್ಕೆ ಇದೆ.
ನಾಟಕ ನಡೆಯುವ ಸಮಯ ಪ್ರತಿ ದಿನ ಸಂಜೆ 6-30 ಕ್ಕೆ
ಸ್ಥಳ :- ಕಾಗೋಡು ರಂಗಮಂದಿರ. ಸಾಗರ
ನಾಟಕೋತ್ಸವದಲ್ಲಿ ಭಾಗವಹಿಸುವವರು ಈ ಕೆಳಗಿನ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ.
9611410119.
9538633760 .