Shirur ಭೂ ಕುಸಿತ ದುರಂತ| ಕೇರಳದ ಮೃತ ಅರ್ಜುನ್ ಲಾರಿ ಮಾಲೀಕ ಮುನಾಫ್ ವಿರುದ್ಧ ಪ್ರಕರಣ ದಾಖಲು.
ಅಂಕೋಲ/ಕೇರಳ :ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರಿನಲ್ಲಿ ಜುಲೈ 16 ರಂದು ಗುಡ್ಡ ಕುಸಿತದಿಂದಾಗಿ ಲಾರಿ ಸಮೇತ ಗಂಗಾವಳಿ ನದಿಯಲ್ಲಿ ಮುಳುಗಿ ಸಾವಿಗೀಡಾಗಿದ್ದ ಕೇರಳದ ಕಣ್ಣೂರಿನ ಚಾಲಕ ಅರ್ಜುನ್ (Kerala arjun) ಅವರ ಸಹೋದರಿ ಅಂಜು, ಲಾರಿ ಮಾಲೀಕ ಮನಾಫ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:-Shirur ಗಂಗಾವಳಿನದಿಯಲ್ಲಿದೆ ಒಂದುಲಕ್ಷಕ್ಕೂ ಹೆಚ್ಚು ಮೆಟ್ರಿಕ್ ಮಣ್ಣು- ಕಾರ್ಯಾಚರಣೆ ತಂಡದ ಕ್ಯಾಪ್ಟನ್ ಹೇಳಿದ್ದೇನು ಗೊತ್ತಾ?
ಮನಾಫ್ ಅವರು ತಮ್ಮ ಕುಟುಂಬದ ಭಾವನಾತ್ಮಕ ಪರಿಸ್ಥಿತಿಯನ್ನು ಬಂಡವಾಳವನ್ನಾಗಿಸಿಕೊಂಡು, ಮೃತ ಸಹೋದರನ ಫೋಟೊ ಬಳಸಿ ಪ್ರಚಾರ ಪಡೆಯುತ್ತಿದ್ದಾರೆ. ಜೊತೆಗೆ ಹಣ ಸಂಗ್ರಹ ಮಾಡುತಿದ್ದಾರೆ.
ಯೂಟ್ಯೂಬ್ ಚಾನೆಲ್ (YouTube) ಪ್ರಾರಂಭಿಸಿರುವ ಮುನಾಫ್ ಕುಟುಂಬದ ಹೆಸರಿಗೆ ಕಳಂಕ ತರುತ್ತಿದ್ದಾರೆ ಎಂದು ಅರ್ಜುನ್ ಸಹೋದರಿ ಅಂಜು ದೂರಿನಲ್ಲಿ ಆರೋಪಿಸಿದ್ದಾರೆ.
ಇದಲ್ಲದೇ ಸಾಮಾಜಿಕ ಜಾಲತಾಣದಲ್ಲಿ (social media) ಕುಟುಂಬದ ಬಗ್ಗೆ ಮಾನಹಾನಿ ಪ್ರಚಾರ ಮಡುತ್ತಿರುವವರ ವಿರುದ್ದವೂ ಕೇರಳ ರಾಜ್ಯದ ಚೆರುವಾಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:-Shirur ಶೋಧ ಕಾರ್ಯಾಚರಣೆ| ಕಾರ್ಯ ನಿಲ್ಲಿಸಿದ ಡ್ರಜ್ಜಿಂಗ್ ಬಾರ್ಜ -ಮುಳುಗಿದ ಈಜು ತಜ್ಞರು!
ತನ್ನ ಹಾಗೂ ತನ್ನ ಕುಟುಂಬದ (Family)ವಿರುದ್ಧ ಸೈಬರ್ ದಾಳಿ ನಡೆಸಲು ಸಮುದಾಯದ ದ್ವೇಷವನ್ನು ಪ್ರಚೋದಿಸುವ ರೀತಿಯಲ್ಲಿ ಪರಿಸ್ಥಿತಿಯನ್ನು ಮನಾಫ್ ಸೃಷ್ಟಿಸಿದ್ದಾರೆ ಎಂದು ದೂರಿನಲ್ಲಿ ಅಂಜು ಆರೋಪಿಸಿದ್ದಾರೆ.
ಅವರು ತಮ್ಮನ್ನು ನಿರ್ಗತಿಕರು ಎಂದು ನಿರೂಪಿಸುತ್ತಿದ್ದಾರೆ. ಇದು ಕುಟುಂಬಸ್ಥರಿಗೆ ನೋವುಂಟುಮಾಡಿದೆ ಎಂದು ಹೇಳಿಕೊಂಡಿದ್ದಾರೆ.
ಮನಾಫ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 192 (ಗಲಭೆಗೆ ಕುಮ್ಮಕ್ಕು) ಹಾಗೂ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 120 (O) (ಸಾರ್ವಜನಿಕ ಶಾಂತಿ ಭಂಗ ಮತ್ತು ಅಶಾಂತಿ ಉಂಟುಮಾಡುವುದು) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಶೋಧ ಕಾರ್ಯ ಹಳ್ಳ ಹಿಡಿಸಿ ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿದ್ದ ಮುನಾಫ್!
ಮುನಾಫ್ ಮೂಲತಹಾ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ನಿವಾಸಿಯಾಗಿದ್ದಾರೆ .ತಂದೆ ಕಾಂಗ್ರೆಸ್ ಮುಖಂಡರಾಗಿದ್ದು ಈ ಹಿಂದೆ ಸಾಗರ ಪುರಸಭೆ ಸದಸ್ಯರಾಗಿದ್ದರು . ಟಿಂಬರ್ ಬಿಸಿಬೆಸ್ಸ್ ಮಾಡಿಕೊಂಡು ಕೇರಳದಲ್ಲಿ ಸಹ ತಮ್ಮ ಉದ್ಯಮ ವಿಸ್ತರಿಸಿದ್ದರು. ಸಾಗರ್ ಟ್ರಾನ್ಸಪೋರ್ಟ ಎಂಬ ಹೆಸರಿನ ಟ್ರಾನ್ಸ್ ಪೋರ್ಟ ಉದ್ಯಮ ನಡೆಸುತಿದ್ದು ಈತನ ಲಾರಿಗೆ ಅರ್ಜುನ್ ಚಾಲಕನಾಗಿದ್ದ.
ಇದನ್ನೂ ಓದಿ:-Shiruru| 75 ದಿನದ ನಂತರ ಅರ್ಜುನ್ ದೇಹ ಕುಟುಂಬಕ್ಕೆ
ಜುಲೈ 16 ರಂದು ಭೂ ಕುಸಿತವಾದ ನಂತರ ಕೇರಳದಿಂದ ಅರ್ಜುನ್ ಭಾವನೊಂದಿಗೆ ಅಂಕೋಲಕ್ಕೆ ಬಂದಿದ್ದ ಈತ ಅಂಕೋಲ ಠಾಣೆಯಲ್ಲಿ ಲಾರಿ ಕಾಣೆಯಾಗಿರುವ ದೂರು ನೀಡಿದ್ದ.
ಆದರೇ ದೂರು ನೀಡಿದ್ದರೂ ಕರ್ನಾಟಕ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೇ ನನ್ನು ಅಲೆದಾಡಿಸಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿ ಮಾಧ್ಯಮದ ದಿಕ್ಕು ತಪ್ಪಿಸಿದ್ದ.
ಇದಲ್ಲದೇ ಕಾರ್ಯಾಚರಣೆ ನಡೆಯುತ್ತಿರುವ ಸಂದರ್ಭದಲ್ಲಿ ರಾಜಕೀಯ ಪ್ರಭಾವ ಬಳಸಿ ಶೋಧ ಕಾರ್ಯ ನಡೆಯಬೇಕಿದ್ದ ಸ್ಥಳ ಬಿಟ್ಟು ಬೇರೆಭಾಗದಲ್ಲಿ ಶೋಧ ನಡೆಸಲು ಕಾರಣೀಕರ್ತನಾಗಿದ್ದಲ್ಲದೇ ಕೇರಳ ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿ ಕರ್ನಾಟಕದ ವಿರುದ್ಧ ಕೇರಳ ಜನರಲ್ಲಿ ಕೆಟ್ಟ ಭಾವನೆ ಬರುವಂತೆ ಮಾಡಿದ್ದನು.
ಇದನ್ನೂ ಓದಿ:-ಸಂಸದ ಕಾಗೇರಿ ಪ್ರಯತ್ನ-ಪ್ರಧಾನಿ ಪರಿಹಾರ ನಿಧಿಯಿಂದ ಶಿರೂರು ಸಂತ್ರಸ್ತರಿಗೆ ವಿಶೇಷ ಪರಿಹಾರ
ಈತನ ಈ ಪ್ರವೃತ್ತಿಯಿಂದ ಶೀಘ್ರ ನಡೆಯಬೇಕಿದ್ದ ಶಿರೂರು ಕಾರ್ಯಾಚರಣೆ 79 ದಿನವಾದರೂ ಈವರೆಗೂ ನಡೆಯುವಂತಾಗಿದೆ.
ಈಬಗ್ಗೆ ಕುದ್ದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ. ನಾರಾಯಣ್ ಸಹ ಮುನಾಫ್ ವಿರುದ್ಧ ಅಸಮಾಧಾನವನ್ನು ಮಾಧ್ಯಮ ಗೋಷ್ಟಿಯಲ್ಲಿ ತೋಡಿಕೊಂಡಿದ್ದರು.
ಸದ್ಯ ಮೂರನೇ ಹಂತದ ಕಾರ್ಯಾಚರಣೆಯಲ್ಲಿ ಲಾರಿ ಹೊರತೆಗೆದು ಅರ್ಜುನ್ ಮೃತದೇಹ ಕುಟುಂಬಸ್ತರಿಗೆ ನೀಡಲಾಗಿದೆ. ಆದರೇ ಲಾರಿ ಇದೀಗ ಅಂಕೋಲ ಠಾಣೆಯಲ್ಲಿದ್ದು ಈವರೆಗೂ ಆತ ಮಾತ್ರ ಠಾಣೆಗೆ ಬಂದು ಮುಂದಿನ ಕಾನೂನು ಪ್ರಕ್ರಿಯೆಗೆ ಸ್ಪಂದಿಸಿಲ್ಲ.