Sagar ಭಾಗದಲ್ಲಿ ಆನೆಗಳು ಪ್ರತ್ಯಕ್ಷ ! ವಿಡಿಯೋ ನೋಡಿ
Shivamogga news 27 December 2024 : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ (Anandpura) ,ಲಕ್ಕವಳ್ಳಿ ಸುತ್ತಮುತ್ತ ಆನೆಗಳ ಉಪಟಳ (Wild Elephants) ಹೆಚ್ಚಾಗಿದೆ.
ಇಂದು ಬೆಳಗ್ಗೆ ಲಕ್ಕವಳ್ಳಿ ಸಮೀಪ ಆನೆಯೊಂದು ಮರಿಯಾನೆ ಜೊತೆಗೆ ಕಾಣಿಸಿಕೊಂಡಿದೆ. ಕೂಡಲೆ ಗ್ರಾಮಸ್ಥರು ಜೋರಾಗಿ ಕೂಗಿ ಆನೆಗಳನ್ನು ಓಡಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.
ಬೆಳಗ್ಗೆ 6 ಗಂಟೆ ಸುಮಾರಿಗೆ ಮೂಡಹಗಲು ಲಕ್ಷ್ಮಣಪ್ಪ ಎಂಬುವರ ತೋಟಕ್ಕೆ ನೀರು ಬಿಡಲು ಹೋದಾಗ ಆನೆಗಳು ಕಾಣಿಸಿಕೊಂಡಿದ್ದು ಭಯದಿಂದ ಮನೆಗೆ ಓಡಿ ಬಂದ ಯುವಕ ಮನೆಯವರಲ್ಲಿ ವಿಚಾರ ತಿಳಿಸಿದ್ದು ತಕ್ಷಣ ಮನೆಯವರು ಕೂಗಿ ಗಲಾಟೆ ಮಾಡಿದ ಬಳಿಕ ತೋಟದಿಂದ ಕಾಡಾನೆಗಳು ಹೊರ ಹೋಗಿವೆ.
ಈ ಗ್ರಾಮದ ಅಡಿಕೆ ತೋಟಕ್ಕೆ ಆನೆಗಳ ಹಿಂಡು ದಾಳಿ ನಡೆಸಿದ್ದು ಗ್ರಾಮಸ್ಥರಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.
ಇದನ್ನೂ ಓದಿ:-Sagar : ಸಿಗಂದೂರು ಶರಾವತಿ ನದಿಯಲ್ಲಿ ತೆಪ್ಪ ಮುಳಗಿ ಯುವಕರು ಕಣ್ಣರೆ.
ಕಳೆದ 15 – 20 ದಿನಗಳಿಂದ ಈ ಭಾಗದ ರೈತರು ಕಾಡಾನೆ ದಾಳಿಯಿಂದ ಆತಂಕದಲ್ಲಿದ್ದಾರೆ.
ಮೂಡಾಗಲು ಗ್ರಾಮದ ಲಕ್ಷ್ಮಣಪ್ಪ ಎಂಬುವರ ಮನೆಯ ಹತ್ತಿರ ಕಾಡಾನೆಗಳು ಬಂದಿದ್ದು ಮನೆಯವರು ಭಯ ಭೀತರಾಗಿದ್ದಾರೆ.
ಅಲ್ಲಿನ ರೈತರು ಆನೆಗಳನ್ನು ಓಡಿಸಲು ಧಾವಿಸಿದ್ದು ಲಕ್ಕವಳ್ಳಿ ಗ್ರಾಮದ ತೋಟಗಳ ಮೂಲಕ ಹಾದು ಹೋಗಿವೆ. ಇಷ್ಟು ದಿನಗಳ ಕಾಲ ಕಾಡಿನ ಅಂಚಿನಲ್ಲೇ ಸಂಚರಿಸುತ್ತಿದ್ದಂತಹ ಆನೆಗಳು ಮನೆಯ ಅಂಗಳಕ್ಕೆ ಬರಲು ಆರಂಭಿಸಿವೆ .
ಆನೆಗಳು ಗ್ರಾಮಕ್ಕೆ ಬಂದಿರುವ ವಿಷಯ ತಿಳಿಯುತ್ತಿದ್ದಂತೆ ಚೋರಡಿ ವಲಯ ಅರಣ್ಯಾಧಿಕಾರಿ ರವಿ ನಾಯಕ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು ಆನೆಗಳ ಹುಡುಕಾಟವನ್ನು ಪ್ರಾರಂಭಿಸಿದ್ದು ಬೇರೆಡೆ ಓಡಿಸಲು ಕಾರ್ಯತಂತ್ರ ರೂಪಿಸಿದ್ದಾರೆ.