Siddapur- ವಿದ್ಯುತ್ ಶಾರ್ಟ ಸರ್ಕ್ಯೂಟ್ -ಕೊಟ್ಟಿಗೆಯಲ್ಲಿದ್ದ ಏಳು ಹೋರಿಗಳು ಸಜೀವ ದಹನ
Siddapura news :- ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ( short circuit) ನಿಂದ ಕೊಟ್ಟಿಗೆಯಲ್ಲಿ ಇದ್ದ
10:29 PM Jan 20, 2025 IST
|
ಶುಭಸಾಗರ್
Siddapura news :- ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ( short circuit) ನಿಂದ ಕೊಟ್ಟಿಗೆಯಲ್ಲಿ ಇದ್ದ
Advertisement
7 ಹೋರಿಗಳ ಸಜೀವ ದಹನವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ (siddapura )ತಾಲೂಕಿನ ಹೇಮಗಾರ ದಲ್ಲಿ ನಡೆದಿದೆ.
ಇದನ್ನೂ ಓದಿ:-Siddapura ಅಯ್ಯಪ್ಪ ಸ್ವಾಮಿ ಜಾತ್ರೆಯಲ್ಲಿ ಕಾರು ಹರಿಸಿದ ರೋಷನ್ -ಉದ್ದೇಶಪೂರ್ವಕವಾಗಿ ಮಾಡಿದನಾ? ಜನ ಏನಂದ್ರು?
ಹೇಮಗಾರದ ಮಹೇಶ್ ಹೆಗಡೆ ಎನ್ನುವವರ ಮನೆಯಲ್ಲಿ ನಿನ್ನೆ ತಡರಾತ್ರಿ ಘಟನೆ ನಡೆದಿದ್ದು ಇಂದು ಸಂಜೆವೇಳೆಯಲ್ಲಿ ಘಟನೆ ಬೆಳಕಿಗೆ ಬಂದಿದೆ.
Advertisement
ಮನೆಯಲ್ಲಿದ್ದ ವೈರ್ ಗೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಿಡಿ ಹೊತ್ತಿದ್ದು ಕೊಟ್ಟಿಗೆಯ ಅಟ್ಟದ ಮೇಲಿರುವ ಹುಲ್ಲಿಗೆ ಈ ಕಿಡಿ ತಾಗಿ ಬೆಂಕಿ ಹತ್ತಿದೆ.ಹುಲ್ಲಿಗೆ ಬಿದ್ದ ಬೆಂಕಿ ಆವರಿಸಿ ಕೊಟ್ಟಿಗೆಯಲ್ಲಿದ್ದ 7 ಹೋರಿಗಳು ಸಜೀವ ದಹನವಾಗಿದೆ.ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement