AI Trending | "ಮದ್ವೆ ಮಾಡ್ಯ್ಕಳೆ ಕೂಸೆ" ಹವ್ಯಕರ ಹಾಡು ಹೇಗಿದೆ ನೋಡಿ!
AI Trending | "ಮದ್ವೆ ಮಾಡ್ಯ್ಕಳೆ ಕೂಸೆ" ಹವ್ಯಕರ ಹಾಡು ಹೇಗಿದೆ ನೋಡಿ!
ಶಿರಸಿ (sirsi )news:- ಹವ್ಯಕ ಬ್ರಾಹ್ಮಣರು ಕರ್ನಾಟಕ ರಾಜ್ಯದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಾದ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ನೆಲೆಗೊಂಡಿರುವ ಬ್ರಾಹ್ಮಣ ಸಮುದಾಯ. ಈ ಸಮುದಾಯದ ಜೀವನ ಪದ್ದತಿ ಬಹುವಿಷುಷ್ಟವಾಗಿದೆ. ಕನ್ನಡ ಭಾಷೆಯನ್ನು ಅವರದೇ ಶೈಲಿಯಲ್ಲಿ ಬಳಸುವ ಈ ಸಮುದಾಯ ಸಾಹಿತ್ಯ ,ಸಂಗೀತ ,ಜನಪದ ಕ್ಷೇತ್ರಕ್ಕೆ ತನ್ನದೇ ಆದ ಕೊಡಿಗೆ ನೀಡುತ್ತಿದೆ.
ಇಂತಹ ಜನಾಂಗ ಇತ್ತೀಚಿನ ದಿನದಲ್ಲಿ ಸಂಖ್ಯಾ ಬಲದಲ್ಲಿ ಕಡಿಮೆಯಾಗುತ್ತಾ ಹೋಗುತಿದ್ದು ಗಂಡು ,ಹೆಣ್ಣಿನ ಅನುಪಾತದಲ್ಲಿ ದೊಡ್ಡ ಮಟ್ಟದ ಅಂತರ ತಂದಿದೆ. ಹೀಗಾಗಿ ಈ ಜನಾಂಗದಲ್ಲಿ ಗಂಡಿಗೆ ಹೆಣ್ಣು ಸಿಗುವುದೇ ದೊಡ್ಡ ಸಮಸ್ಯೆಯಾಗಿದೆ. ಇಂತಹ ಸಮಸ್ಯೆಯನ್ನು ಇಟ್ಟುಕೊಂಡು ಶಿರಸಿಯ ಪತ್ರಕರ್ತ,ಬರಹಗಾರ ವಿನಯ್ ದಂಟಕಲ್ ರವರು "ಮದ್ವೆ ಮಾಡ್ಯ್ಕಳೆ ಕೂಸೆ" ಎಂಬ ಹಾಡನ್ನು ರಚಿಸಿದ್ದು ಹವ್ಯಕ ನುಡಿಯಲ್ಲಿ ಮೂಡಿ ಬಂದಿದೆ.
Ai ತಂತ್ರಜ್ಞಾನ ಬಳಸಿ ಈ ಹಾಡನ್ನು ಹಾಡಲಾಗಿದ್ದು ಪ್ರಾಯೋಗಿಕವಾಗಿ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ.
ವಿನಯ್ ದಂಟಕಲ್ ಅವರು ಬರೆದ ಈ ಗೀತೆ ಹವ್ಯಕ ಸಂಸ್ಕೃತಿಯ ಹಾಸ್ಯಮಯ ಮನೋಭಾವಶೈಲಿಯನ್ನು ಪ್ರತಿಬಿಂಬಿಸುತ್ತದೆ. ಸ್ಥಳೀಯ ನುಡಿಗಟ್ಟುಗಳು, ಹಾಸ್ಯಮಯ ಸಾಲುಗಳು ಹಾಗೂ ಟಪ್ಪಾಂಗುಚ್ಚಿ ಲಯವು ಹಾಡಿಗೆ ವಿಶಿಷ್ಟ ರಸದೊಯ್ದು ಕೊಡುತ್ತಿವೆ.
ಆಧುನಿಕ ಧ್ವನಿತಂತ್ರಜ್ಞಾನ ಬಳಸಿ ನಿರ್ಮಿಸಿರುವ ಈ ಹಾಡು, ಹವ್ಯಕ ಆಲ್ಬಮ್ ಸಾಂಗ್ ಸರಣಿಯ ಮೊದಲ ಭಾಗ ವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹವ್ಯಕ ಗೀತೆಗಳು ಬಿಡುಗಡೆಯಾಗಲಿವೆ. ಸ್ಥಳೀಯ ಭಾಷೆ ಮತ್ತು ಆಧುನಿಕ ಸಂಗೀತದ ಸಂಯೋಜನೆಯು ಈ ಹಾಡಿಗೆ ಹೊಸ ಚೈತನ್ಯ ನೀಡಿದೆ.
ಯೂಟ್ಯೂಬ್‌ನಲ್ಲಿ ಟ್ರೆಂಡ್ ಆಗುತ್ತಿರುವ ಈ ವೀಡಿಯೋ ಹಾಡಿನಲ್ಲಿ ಮಲೆನಾಡಿನ ನೈಸರ್ಗಿಕ ಸೊಬಗು, ಹವ್ಯಕ ಪರಂಪರೆ ಹಾಗೂ ಹಳ್ಳಿಯ ಜೀವನದ ಹಾಸ್ಯಮಯ ಅಂಶಗಳು ಚೆನ್ನಾಗಿ ಮೂಡಿವೆ. ಹಾಡಿನ ಸರಳತೆ ಹಾಗೂ ಸೊಗಸಾದ ಟ್ಯೂನ್ ಕಾರಣದಿಂದ ಅದು ವಾಟ್ಸಾಪ್, ಇನ್‌ಸ್ಟಾಗ್ರಾಮ್ ರೀಲ್‌ಗಳು ಮತ್ತು ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು ಹೊಸ ಟ್ರಂಡ್ ಎಬ್ಬಿಸಲು ಸಿದ್ದವಾಗಿದೆ.
ಹಾಡಿನ ವಿಡಿಯೋ ನೋಡಿ:-