Sirsi:ಮಹಿಳೆ ಮೇಲೆ ಮಚ್ಚು ಬೀಸಿದವನಿಗೆ 10 ವರ್ಷ ಜೈಲು ಶಿಕ್ಷೆ.
Sirsi:ಮಹಿಳೆ ಮೇಲೆ ಮಚ್ಚು ಬೀಸಿದವನಿಗೆ 10 ವರ್ಷ ಜೈಲು ಶಿಕ್ಷೆ.
ಕಾರವಾರ: ಮಹಿಳೆಯ ಮೇಲೆ ಮಚ್ಚು ಬೀಸಿ ಕೊಲೆ ಯತ್ನ ಮಾಡಿದವನಿಗೆ 10 ವರ್ಷ ಜೈಲು ಶಿಕ್ಷೆ(Conviction) ಹಾಗೂ 10 ಸಾವಿರ ರೂ. ದಂಡ ವಿಧಿಸಿ ಶಿರಸಿಯ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಯಲ್ಲಾಪುರ ತಾಲೂಕಿನ ಇಂದಿರಾ ನಗರದ ಜಾಫರ್ ಸಾದಿಕ್ ಇಮಾಮ್ ಪಟೇಲ್ ಶಿಕ್ಷೆಗೊಳಗಾದ ವ್ಯಕ್ತಿ. ಆತನಿಂದ ಹಲ್ಲೆಗೊಳಗಾದ ಹಸೀನಾ ಸಯ್ಯದ್ ಶೇಖ್ ಎಂಬಾಕೆಗೆ 10 ಸಾವಿರ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೇ, ಇನ್ನೊಬ್ಬ ಅಪರಾಧಿ ಆಶಾಬಿ ಇಮಾಮ್ ಪಟೇಲ್‌ಗೆ 2 ಸಾವಿರ ರೂ. ದಂಡ ವಿಧಿಸಲಾಗಿದೆ.
ಘಟನೆ ಏನು?
2021 ರಲ್ಲಿ ಅರಣ್ಯ ಅತಿಕ್ರಮಣ ವಿಷಯಕ್ಕೆ ಸಂಬಂಧ ಜಾಫರ್ ಹಾಗೂ ಇತರರು ಮತ್ತು ಹಸೀನಾ ಸಯ್ಯದ್ ನಡುವೆ ಜಗಳ ನಡೆದಿತ್ತು. ಜಾಫರ್ ಹಸೀನಾ ಅವರ ತಲೆಗೆ ಕತ್ತಿಯಿಂದ ಹೊಡೆದು ಕೊಲೆಗೆ ಯತ್ನಿಸಿದ್ದ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಯಲ್ಲಾಪುರ ಪಿಎಸ್‌ಐ ಮಂಜುನಾತ ಗೌಡರ್ ಪ್ರಕರಣದ ತನಿಖೆ ಕೈಗೊಂಡು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ:-Sirsi ಭತ್ತದ ಹುಲ್ಲು ಕೊಂಡೊಯ್ಯುತಿದ್ದ ಲಾರಿಗೆ ಬೆಂಕಿ ! ಸಾವಿರಾರು ರೂಪಾಯಿ ನಷ್ಟ.
ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ ಎಂ. ಮಳಗೀಕರ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ಸಾಕ್ಷಿಗಳ ವಿಚಾರಣೆ ನಡೆಸಿದ ಶಿರಸಿಯ 1 ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಕಿರಣ ಕಿಣಿ ಅವರು ತೀರ್ಪು ಪ್ರಕಟಿಸಿದ್ದಾರೆ.
ಪ್ರಕರಣದಲ್ಲಿ 2 ನೇ ಆರೋಪಿಯಾಗಿದ್ದ ಇಮಾಮ್ ಖಾದ್ರಿ ಪಟೇಲ್ ಮೃತಪಟ್ಟಿದ್ದಾರೆ. ಇನ್ನೊಬ್ಬ ಆರೋಪಿ ಅಪ್ರಾಪ್ತಿಯಾಗಿದ್ದು, ಆಕೆಯ ವಿರುದ್ದ ಪ್ರತ್ಯೇಕ ದೋಷಾರೋಪಣಾ ಪಟ್ಟಿ ಸಿದ್ಧಪಡಿಸಿ, ಬಾಲ ನ್ಯಾಯ ಮಂಡಳಿಗೆ ಸಲ್ಲಿಸಲಾಗಿದೆ.
ಪ್ರಕರಣದಲ್ಲಿ ಗಾಯಗೊಂಡಿರುವ ಹಸೀನಾ ಶೇಖ್ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರವನ್ನು ಪಡೆಯಲು ಅರ್ಹರು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.