ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi| ಪಂಡಿತ್ ಆಸ್ಪತ್ರೆ ನಿರ್ಲಕ್ಷ| ಶಾಸಕ ಭೀಮಣ್ಣ ರ ಸುಳ್ಳು ಬಿಚ್ಚಿಟ್ಟ ಅನಂತಮೂರ್ತಿ ಹೆಗೆಡೆ 

Sirsi Pandit Hospital construction 80% complete but equipment tender delayed. Social leader Anantmurti Hegde accuses MLA Bheemanna Naik of neglect and misleading statements. Public threaten protests if no action in 30 days.'
11:48 AM Sep 22, 2025 IST | ಶುಭಸಾಗರ್
Sirsi Pandit Hospital construction 80% complete but equipment tender delayed. Social leader Anantmurti Hegde accuses MLA Bheemanna Naik of neglect and misleading statements. Public threaten protests if no action in 30 days.'

Sirsi| ಪಂಡಿತ್ ಆಸ್ಪತ್ರೆ ನಿರ್ಲಕ್ಷ| ಶಾಸಕ ಭೀಮಣ್ಣ ರ ಸುಳ್ಳು ಬಿಚ್ಚಿಟ್ಟ ಅನಂತಮೂರ್ತಿ ಹೆಗೆಡೆ 

Advertisement

ಕಾರವಾರ/ಶಿರಸಿ :- ಉತ್ತರ ಕನ್ನಡ ಜಿಲ್ಲೆಯ ಶಿರಸಿಯ(sirsi)  ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾರ್ಯ ಶೇ. 80ರಷ್ಟು ಪೂರ್ಣಗೊಂಡಿದ್ದರೂ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಅಗತ್ಯ ಯಂತ್ರೋಪಕರಣ ಖರೀದಿಯ ಟೆಂಡರ್ ಪ್ರಕ್ರಿಯೆ ಆಭಿಸಿಲ್ಲ. ಈಗಲೇ ಈ ಕಾರ್ಯ ಮಾಡಿದರೆ ಹೊಸ ಆಸ್ಪತ್ರೆ ಹಿಂದಿನ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕೊಡುಗೆ ಎಂದು ಜನ ಹೇಳುವ ಸಾಧ್ಯತೆ ಇರುವುದರಿಂದ ಹಿಂದೇಟು ಹಾಕಿರುವ ಶಾಸಕ ಭೀಮಣ್ಣ ನಾಯ್ಕ, ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿಗೆ ಆಸ್ಪತ್ರೆಯ ಕೆಲಸ ಕಾರ್ಯ ನಡೆಸುವ ಯೋಚನೆ ಹೊಂದಿದಂತಿದೆ. ಇದರಿಂದಾಗಿ ರೋಗಿಗಳು, ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ ಎಂದು ಸಾಮಾಜಿಕ ಮುಖಂಡ ಅನಂತಮೂರ್ತಿ ಹೆಗಡೆ ಆರೋಪಿಸಿದರು.

Sirsi|ರಸ್ತೆಯಾಗದೇ ಬೇಸತ್ತ ಜನ| ಓಟು ಬೇಡಿದವರ ಸ್ಮಾರಕ ಹೊಂಡಗಳಿವೆ ನಿಧಾನ ಸಾಗಿ ಎಂದು ನಾಮ ಫಲಕ ಅಲವಡಿಕೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಕಳೆದ ಅಕ್ಟೋಬರ್‌ನಲ್ಲಿಯೇ ಯಂತ್ರೋಪಕರಣಗಳ ಮತ್ತು ಕಾರ್ಡಿಯಾಲಜಿ, ನ್ಯೂರೋಲಾಜಿ ಸೇರಿದಂತೆ ವೈದ್ಯರ ಅವಶ್ಯಕತೆ ಕುರಿತಂತೆ ಪಟ್ಟಿ ಸಲ್ಲಿಕೆ ಆಗಿದೆ. ಶಾಸಕ ಭೀಮಣ್ಣ ನಾಯ್ಕ ಒಂದು ವರ್ಷವಾದರೂ ಯಾವುದೇ ಪ್ರಕ್ರಿಯೆ ಆಗಲು ಕೊಡುತ್ತಿಲ್ಲ. ಇನ್ನು 30 ದಿನಗಳೊಳಗಾಗಿ ಯಾತ್ರೋಪಕರಣಗಳಿಗೆ ಟೆಂಡ‌ರ್ ಕರೆಯುವ ಪ್ರಕ್ರಿಯೆ ಆರಂಭಗೊಳ್ಳದಿದ್ದಲ್ಲಿ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಆಸ್ಪತ್ರೆ ಹೋರಾಟ ಸಮಿತಿ ರಚಿಸಿ ಹೋರಾಟ ಮಾಡಲಾಗುವುದು. ಈ ಮೂಲಕ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

Advertisement

ಗೋಷ್ಟಿಯಲ್ಲಿ ಪ್ರಮುಖರಾದ ಜಯಶೀಲ ಗೌಡ, ಶಿವಾನಂದ ದೇಶಳ್ಳಿ, ಜಿ. ಎಸ್. ಹೆಗಡೆ, ನಾರಾಯಣ ಹೆಗಡೆ ಹಸೆಮನೆ ಇತರರಿದ್ದರು.

ಜನಸ್ಪಂದನ ಸಭೆ ನಡೆಸಲಿ.

ಮಂಕಾಳು ವೈದ್ಯ ಸೇರಿದಂತೆ ಜಿಲ್ಲೆಯ ಆಯಾ ಕ್ಷೇತ್ರದ ಶಾಸಕರು ಜನಸ್ಪಂದನ ಸಭೆ ಅಥವಾ ಜನತಾ ದರ್ಶನ ಸಭೆ ಮಾಡುತ್ತಾರೆ .ಶಿರಸಿ -ಸಿದ್ದಾಪುರ ಭಾಗದಲ್ಲಿ ಅನೇಕ ಸಮಸ್ಯೆಗಳಿದ್ದರೂ ಶಾಸಕರು ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿಲ್ಲ.ಅವರು ಜನಸ್ಪಂದನ ಸಭೆ ನಡೆಸಬೇಕು ಎಂದರು.

ಸುಳ್ಳು ಆರೋಪ ಬಿಡಲಿ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿರಸಿ ಘಟಕಕ್ಕೆ ಹೊಸ ಬಸ್‌ಗಳನ್ನು ನೀಡಿಲ್ಲ. ಹೀಗಾಗಿ 10 ಲಕ್ಷ ಕಿ. ಮೀ. ಮೇಲ್ಪಟ್ಟು ಓಡಿದ ಘಟಕದಲ್ಲಿ 79 ಬಸ್‌ಗಳಿವೆ ಎಂದು ಶಾಸಕ ಭೀಮಣ್ಣ ನಾಯ್ಕ ಸುಳ್ಳು ಹೇಳಿದ್ದಾರೆ. ಮಾಹಿತಿ ಹಕ್ಕಿನಲ್ಲಿ ಪಡೆದ ದಾಖಲೆಗಳ ಪ್ರಕಾರ ಶಿರಸಿ ಡಿಪೋಕ್ಕೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ 78 ಹೊಸ ಬಸ್‌ ಬಂದಿದೆ. ಒಬ್ಬ ಜವಾಬ್ದಾರಿಯುತ ಶಾಸಕರಾಗಿ ಈ ರೀತಿ ಸುಳ್ಳು ಹೇಳುವುದು ಸರಿಯಲ್ಲ. ಕ್ಷೇತ್ರದಲ್ಲಿ ಬಸ್ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದನ್ನು ಒಮ್ಮೆ ಪರಿಶೀಲಿಸಿಬೇಕು. ತಾಲೂಕಿನಾದ್ಯಂತ ಎಲ್ಲೆಡೆ ರಸ್ತೆಗಳು ಹೊಂಡಮಯವಾಗಿದ್ದು, ಅವುಗಳನ್ನು ಮುಚ್ಚುವುದು ಯಾವಾಗ ಎಂದು ಜನರು ಪ್ರಶ್ನಿಸುತ್ತಿದ್ದಾರೆ ಎಂದರು.

Advertisement
Tags :
Anantmurti HegdeHospital NegligenceKarnataka Assembly ElectionsKarnataka Health InfrastructureMLA Bheemanna NaikPandit Hospital SirsiPublic Protest SirsiSirsi Development IssuesSirsi newsUttara Kannada Politics
Advertisement
Next Article
Advertisement