For the best experience, open
https://m.kannadavani.news
on your mobile browser.
Advertisement

SIRSI:ಮಾವನ ಜನ್ಮ ದಿನಕ್ಕಾಗಿ ಶಿರಸಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಟ ಶಿವರಾಜ್ ಕುಮಾರ್| ವಿಡಿಯೋ ನೋಡಿ

Sirsi news 25 October 2024:- ಮಾಜಿ ಮುಖ್ಯಂತ್ರಿ ದಿವಂಗತ ಎಸ್ ಬಂಗಾರಪ್ಪನವರ(firmer Cm S.Bangarappa) ಜನ್ಮ ದಿನದ ಹಿನ್ನಲೆಯಲ್ಲಿ ಕರುನಾಡ ಚಕ್ರವರ್ತಿ ಖ್ಯಾತಿಯ ನಟ ಶಿವರಾಜ ಕುಮಾರ್ ಕುಟುಂಬ ಸಮೇತರಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
10:31 PM Oct 25, 2024 IST | ಶುಭಸಾಗರ್
sirsi ಮಾವನ ಜನ್ಮ ದಿನಕ್ಕಾಗಿ ಶಿರಸಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಟ ಶಿವರಾಜ್ ಕುಮಾರ್  ವಿಡಿಯೋ ನೋಡಿ

SIRSI:ಮಾವನ ಜನ್ಮ ದಿನಕ್ಕಾಗಿ ಶಿರಸಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಟ ಶಿವರಾಜ್ ಕುಮಾರ್| ವಿಡಿಯೋ ನೋಡಿ

Advertisement

Sirsi news 25 October 2024:- ಮಾಜಿ ಮುಖ್ಯಂತ್ರಿ ದಿವಂಗತ ಎಸ್ ಬಂಗಾರಪ್ಪನವರ(former Cm S.Bangarappa) ಜನ್ಮ ದಿನದ ಹಿನ್ನಲೆಯಲ್ಲಿ
ಕರುನಾಡ ಚಕ್ರವರ್ತಿ ಖ್ಯಾತಿಯ ನಟ ಶಿವರಾಜ ಕುಮಾರ್ ಕುಟುಂಬ ಸಮೇತರಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಪೂಜೆ ಸಲ್ಲಿಸಿದ ವಿಡಿಯೋ ಇಲ್ಲಿದೆ:-

ಶನಿವಾರ ಮಾಜಿ ಮುಖ್ಯಮಂತ್ರಿ ದಿ.ಎಸ್. ಬಂಗಾರಪ್ಪನವರ (S.Bangarappa) ಜನ್ಮದಿನವಾಗಿದ್ದು ಈ
ಹಿನ್ನಲೆಯಲ್ಲಿ ಶಿರಸಿಗೆ ಭೇಟಿ ನೀಡಿರುವ ಅವರು, ಪತ್ನಿ ಹಾಗೂ ಬಂಗಾರಪ್ಪನವರ ಮಗಳಾದ ಗೀತಾ ಶಿವರಾಜಕುಮಾರ್ (Shiva rajkumar)ಅವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಹಾಗೂ ಶಿರಸಿ ಶಾಸಕ ಹಾಗೂ ಬಂಗಾರಪ್ಪನವರ ಬಾವ ಭೀಮಣ್ಣ ನಾಯ್ಕ ಅವರೂ ಸಹ ಕುಟುಂಬ ಸಮೇತರಾಗಿ ಬಂದು ನಟ ಶಿವರಾಜ್ ಕುಮಾರ್ ಅವರೊಂದಿಗೆ ಪೂಜೆ ನೆರವೇರಿಸಿದರು.

ಇದನ್ನೂ ಓದಿ:-Dandeli| ರಿಪೇರಿಗೆ ತಂದ ಸ್ಕೂಟಿ ಬೆಂಕಿಗಾಹುತಿ ವಿಡಿಯೋ ನೋಡಿ

ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಶಿವಾನಂದ ಶೆಟ್ಟಿ, ಸುಧೀರ್ ಹಂದ್ರಾಳ ಸೇರಿದಂತೆ ಹಲವಾರು ಅಭಿಮಾನಿಗಳು, ಕಾರ್ಯಕರ್ತರು ಭಾಗಿಯಾಗಿದ್ದರು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ