ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Sirsi| ಪಶ್ಚಿಮಘಟ್ಟ ನದಿ ಕಣಿವೆಗಳ ಸಂರಕ್ಷಣೆ ಮತ್ತು ಬೃಹತ್ ಯೋಜನೆಗಳ ಪರಿಣಾಮ ಕುರಿತು ವಿಚಾರ ಸಂಕಿರಣ ದಲ್ಲಿ ಏನಾಯ್ತು? ವಿವರ ನೋಡಿ

Sirsi: State-level seminar on Western Ghats river valley conservation discusses environmental impact of major projects like Bedthi-Aghanashini and Sharavathi.
10:58 PM Nov 23, 2025 IST | ಶುಭಸಾಗರ್
Sirsi: State-level seminar on Western Ghats river valley conservation discusses environmental impact of major projects like Bedthi-Aghanashini and Sharavathi.

Sirsi| ಪಶ್ಚಿಮಘಟ್ಟ ನದಿ ಕಣಿವೆಗಳ ಸಂರಕ್ಷಣೆ ಮತ್ತು ಬೃಹತ್ ಯೋಜನೆಗಳ ಪರಿಣಾಮ ಕುರಿತು ವಿಚಾರ ಸಂಕಿರಣ ದಲ್ಲಿ ಏನಾಯ್ತು? ವಿವರ ನೋಡಿ

Advertisement

ಶಿರಸಿ:- ನದಿ ನೀರಿನ ನೈಸರ್ಗಿಕ ಹರಿವಿನಲ್ಲಿ ಬದಲಾವಣೆ ಆದರೆ ಹಲವು ಕ್ಷೇತ್ರಗಳಲ್ಲಿ ಇದರ ಪರಿಣಾಮ ಆಗಲಿದೆ. ಕೃಷಿ, ಭೂಮಿ, ಮೀನುಗಾರಿಕೆ ಹೀಗೆ ಹಲವು ಕ್ಷೇತ್ರಗಳಲ್ಲಿ ಇದು ಪರಿಣಾಮ ಬೀರುತ್ತದೆ. ಇದರ ಬಗ್ಗೆ ವಿಜ್ಞಾನಿಗಳು ಅರಿವು ಮೂಡಿಸಲಿದ್ದಾರೆ. ವೈಜ್ಞಾನಿಕ ಅಂಶಗಳನ್ನು ಸರ್ಕಾರ , ಕಾನೂನಿನ ಮುಂದೆ ಇಟ್ಟಾಗ ಮಾತ್ರ ಆ ಹೋರಾಟಕ್ಕೆ ಮತ್ತಷ್ಟು ಬಲ ಬರುತ್ತದೆ. ವೈಜ್ಞಾನಿಕ ಅಂಶಗಳನ್ನು ಕಲೆ ಹಾಕುವುದು ಈ ನಿಟ್ಟಿನಲ್ಲಿ ಅತೀ ಅವಶ್ಯಕ ಎಂದು ಸ್ವರ್ಣವಲ್ಲಿ ಪೀಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಭಾನುವಾರ ನಗರದ ಟಿ.ಎಸ್.ಎಸ್ ಸಭಾಂಗಣದಲ್ಲಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣ ಸಮೀತಿ ಸೋಂದಾ ಮತ್ತು ಟಿ ಎಸ್ ಎಸ್ ಶಿರಸಿ ಸಂಯುಕ್ತ ಆಶ್ರಯದಲ್ಲಿ ನಡೆದ ಪಶ್ಚಿಮಘಟ್ಟ ನದಿ ಕಣಿವೆಗಳ ಸಂರಕ್ಷಣೆ ಮತ್ತು ಬೃಹತ್ ಯೋಜನೆಗಳ ಪರಿಣಾಮ ಕುರಿತಂತೆ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಬೇರೆ ಬೇರೆ ಕಡೆಯಿಂದ ವಿಜ್ಞಾನಿಗಳು ಮತ್ತು ತಜ್ಞರು ಈ ವಿಚಾರ ಸಂಕಿರಣಕ್ಕೆ ಆಗಮಿಸಿದ್ದಾರೆ. ಜಿಲ್ಲೆಯಲ್ಲಿ 4 ಪ್ರಮುಖ ಯೋಜನೆಗಳು ಇದೀಗ ಪ್ರಸ್ತಾಪಿತವಾಗಿವೆ. ಅದರಲ್ಲಿ ಬೇಡ್ತಿ ವರದಾ , ಅಘನಾಶಿನಿ-ವೇದಾವತಿ  ಈ ನದಿ ನೀರು ತಿರುವು ಯೋಜನೆ, ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಹಾಗೂ ಖೇಣಿ ಬಂದರಿನ ಯೋಜನೆಗಳು ಸೇರಿವೆ. 40 ವರ್ಷದ ವೈಜ್ಞಾನಿಕ ಪ್ರಗತಿಗೂ ಪ್ರಸ್ತುತ ಪ್ರಗತಿಗೂ ಅಂತರವಿದೆ. ಈ ಗೋಷ್ಠಿಗಳು ಪ್ರಸ್ತುತ ಅಂಶವನ್ನ ತಿಳಿಸುತ್ತವೆ. ನದಿಗಳು ಭೂ ತಾಯಿಯ ರಕ್ತನಾಳಗಳಿದ್ದಂತೆ. ಅದರ ಪಾತ್ರಗಳು ಬದಲಾದರೆ ದುಷ್ಪರಿಣಾಮ ಖಂಡಿತ. ಸರ್ಕಾರ 5 ವರ್ಷದಲ್ಲಿ 50 ವರ್ಷದ ಸಂಪಾದನೆ ಮಾಡುತ್ತದೆ. ಆದರೆ ನಾವು ಇಲ್ಲೇ ಇರುವವರು , ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ನಾವು ಅನುಭವಿಸಬೇಕಾಗುತ್ತದೆ. ಆದ್ದರಿಂದ ಈ ಯೋಜನೆಗಳನ್ನು ವಿರೋಧಿಸಬೇಕು ಎಂದರು.

Uttara kannada | ನ್ಯೂಸ್ ಹೈಲೆಟ್ಸ್ | ಎಲ್ಲಿ ಏನು ಸುದ್ದಿ ವಿವರ ನೋಡಿ

Advertisement

ಪರಿಸರ ವಿಜ್ಞಾನಿ ಕೇಶವ ಕೂರ್ಸೆ ಮಾತನಾಡಿ, ಕಳೆದ 5 ದಶಕದಿಂದ ಪರಿಸರದ ಬಗ್ಗೆ ಹೋರಾಟಗಳು ನಡೆಯುತ್ತಿವೆ. ಹಿಂದಿನ ಶ್ರೀಗಳ ನೇತೃತ್ವದಲ್ಲಿ 1981 ರಲ್ಲಿ ಅಣೆಕಟ್ಟಿನ ಪರಿಣಾಮದ ಬಗ್ಗೆ ಜಾಗತಿಕ ವಿಚಾರ ಗೋಷ್ಠಿ ನಡೆಸಿದ್ದರು. ಅದು ಟಿ ಎಸ್ ಎಸ್ ಹಾಲ್ ನಲ್ಲಿ ನಡೆದಿತ್ತು ಎನ್ನುವುದು ಹೆಮ್ಮೆಯ ಸಂಗತಿ. ಅಂದಿನ ಹೋರಾಟದ ಫಲವಾಗಿ ಯೋಜನೆಗೆ ತಡೆ ಬಿದ್ದಿತ್ತು. 25 ವರ್ಷಗಳ ಹಿಂದೆ 3 ದಿನಗಳ ಕಾಲ ಎಲ್ಲರ ಸಹಕಾರದಲ್ಲಿ ವಿಚಾರ ಗೋಷ್ಠಿ ನಡೆದಿತ್ತು. ನೀರಾವರಿ ತಜ್ಞ ಡಾ ರಾಜೇಂದ್ರ ಪೋದ್ದಾರ, ಕೃಷಿಕರು, ಉತ್ತರ ಕನ್ನಡದ ಭೂಮಿಯ ಜಲದ ಬಗ್ಗೆ ಅರಿತಿದ್ದಾರೆ. ಅವರು ಬಂದಿರುವುದು ನಮಗೆ ಬಳ ತಂದಿದೆ ಎಂದು ವಿಚಾರ ಸಂಕಿರಣದ ಸ್ವರೂಪವನ್ನ ವಿವರಿಸಿದರು.

Sirsi | RSS ಮತ್ತು ಹಿಂದೂ ಸಂಘಟನೆ ಬಗ್ಗೆ WhatsApp ನಲ್ಲಿ ಅವಹೇಳನ ಸ್ಟೇಟಸ್ ಹಾಕಿದವ ಕಂಬಿ ಹಿಂದೆ

ಟಿ.ಎಸ್.ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಈಗಾಗಲೇ ಹೋರಾಟದ ದಿಸೆಯಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟಗಳು ನಡೆಯುತ್ತಿವೆ. ಗೋಷ್ಠಿಯ ಸರಿಯಾದ ಮನವರಿಕೆ ಆಗಬೇಕು. ಪಶ್ಚಿಮ ಘಟ್ಟಗಳ ಧಾರಣಾ ಸಾಮರ್ಥ್ಯದ ಬಗೆಗಿನ ವರದಿ ಇಡೀ ನಮ್ಮ ಜಿಲ್ಲೆಯ ಮನೆ ಮನೆಯನ್ನು ಮುಟ್ಟಬೇಕು. ಆಗ ಜನರು ಮತ್ತಷ್ಟು ಹೋರಾಟಕ್ಕೆ ಬರಲು ಇದು ಸ್ಪೂರ್ತಿಯಾಗುತ್ತದೆ. ಹೋರಾಟದ ಬೆಂಬಲಕ್ಕೆ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು ಕೈಜೋಡಿಸಲಿವೆ ಎಂದರು.ಅನಂತ ಆಶೀಸರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

Sirsi | ಶಿರಸಿ ಶಾಸಕ ಭೀಮಣ್ಣ ನಾಯ್ಕಫಾರ್ಮ ಹೌಸ್ ನಲ್ಲಿ ನಾಯಿ ಮರಿ ಕಳ್ಳತನ | ವಿಡಿಯೋ ನೋಡಿ ಬೆಚ್ಚಿ ಬಿದ್ರು! 

ಪರಿಸರ ಶಾಸ್ತ್ರ ವಿಜ್ಞಾನಿ, ಡಾ ಟಿ ವಿ ರಾಮಚಂದ್ರ , ನೀರಾವರಿ ತಜ್ಞ ಡಾ ರಾಜೇಂದ್ರ ಪೋದ್ದಾರ, ಭೂಗರ್ಭಶಾಸ್ತ್ರಜ್ಞ ಡಾ ಶ್ರೀನಿವಾಸ ರೆಡ್ಡಿ, ಪರಿಸರ ಹೋರಾಟಗಾರ ಕಿಶೋರ್ ಕುಮಾರ್ ಹೊಂಗಡಹಳ್ಳ ಮತ್ತಿತರರು ಉಪಸ್ಥಿತರಿದ್ದರು..

Advertisement
Tags :
Bedthi Aghanashini ProjectKarnatakaRiver Valley ConservationSirsi newsswarnavalli swamijiWestern Ghats
Advertisement
Next Article
Advertisement