Basavaraj Horatti: ಸಿಟಿ ರವಿ-ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣದ ಬಗ್ಗೆ Big update ಕೊಟ್ಟ ಸಭಾಪತಿ
Basavaraj Horatti: ಸಿಟಿ ರವಿ-ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣದ ಬಗ್ಗೆ Big update ಕೊಟ್ಟ ಸಭಾಪತಿ
- ಸಂವಿಧಾನಿಕ ಹುದ್ದೆ ಸಭಾಪತಿ, ಸಭಾಧ್ಯಕ್ಷ ಎಂಬುದು. ಸರಕಾರ ಬದಲಾದ ತಕ್ಷಣ ಬದಲಾಯಿಸುವುದು, ಅವಿಶ್ವಾಸ ಮಾಡುವದು ಒಳ್ಳೆಯ ಸಂಪ್ರದಾಯ ಅಲ್ಲ- ಬಸವರಾಜ್ ಹೊರಟ್ಟಿ.
ಕಾರವಾರ :-ಸಿಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪ್ರಕರಣವನ್ನು ಪರಿಷತ್ತಿನ ನೀತಿ ನಿರೂಪಣಾ ಸಮಿತಿಗೆ ನೀಡಲಾಗಿದೆ. ಅವರು ವಿಡಿಯೋ ಸೇರಿದಂಗೆ ಇತರೆ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡಿದ ಬಳಿಕ ತಿರ್ಮಾನ ಕೈಗೊಳ್ಳಲಾಗುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ( basavraj Horatti ) ಹೇಳಿದರು.

ಶಿರಸಿಯಲ್ಲಿ (sirsi )ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್ ಉಪ ಸಭಾಪತಿಗಳು ಅಧ್ಯಕ್ಷರಾಗಿರುವ ಸದನದ ನೀತಿ ನಿರೂಪಣಾ ಸಮಿತಿಗೆ ಪ್ರಕರಣವನ್ನು ವಹಿಸಲಾಗಿದೆ.
ಇದನ್ನೂ ಓದಿ:-Karnataka ಗ್ರಾಮೀಣ ಪತ್ರಕರ್ತರಿಗೆ ಜಿಲ್ಲಾ ಬಸ್ ಪಾಸ್ ಆನ್‌ಲೈನ್ ಅರ್ಜಿ ಸಲ್ಲಿಸೋದು ಹೇಗೆ? ಅರ್ಹರು ಯಾರು? ವಿವರ ನೋಡಿ
ಅದರಲ್ಲಿ ಸಿಟಿ ರವಿಯೂ(CT Ravi ) ಸದಸ್ಯರಾಗಿದ್ದರು. ಅವರನ್ನು ಈಗ ಹೊರಗೆ ಇಡಲಾಗಿದೆ. ಸಮಿತಿಯವರು ಸದನದ ಆಡಿಯೋ ವಿಡಿಯೋ ಪರಿಶೀಲನೆ ಮಾಡಲಿದ್ದಾರೆ. ಮಾಧ್ಯಮದವರೂ ಸಹ ವಿಡಿಯೋ ನೀಡಿದ್ದಾರೆ. ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಅಲ್ಲಿಂದ ವರದಿ ಬಂದ ನಂತರದಲ್ಲಿ ಪ್ರಕರಣದ ಮುಂದಿನ ತಿರ್ಮಾನ ಕೈಗೊಳ್ಳಲಾಗುವುದು ಎಂದರು.
ಮೊದಲಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (laksmi hebbalkar) ಸಿಟಿ ರವಿ ವಿರುದ್ಧ ಅವಾಚ್ಯ ಪದ ಬಳಸಿದ ಕುರಿತು ದೂರು ದಾಖಲಿಸಿದ್ದರು. ಬಳಿಕ
ಸಿಟಿ ರವಿಯವರೂ ಸಹ ಪ್ರತಿ ದೂರು ನೀಡಿದ್ದಾರೆ.
ಘಟನೆಗೆ ಸಂಬಂಧಿಸಿ ಈಗಾಗಲೇ ಸಮಿತಿಗೆ ಸತ್ಯಾಸತ್ಯತೆ ಪರಿಶೀಲನೆಗೆ ತಿಳಿಸಲಾಗಿದೆ. ಅಲ್ಲಿನ ವರದಿ ಆಧರಿಸಿ ಮುಂದಿನ ಕ್ರಮ ಆಗಲಿದೆ ಎಂದ ಅವರು, ಸಭಾಪತಿಗಳು ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತುಕೊಂಡಂತೆ. ಅವರು ಪಕ್ಷಪಾತ ಮಾಡಬಾರದು. ಸಿಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದಲ್ಲಿ ನಾನು ತೆಗೆದುಕೊಂಡ ನಿರ್ಧಾರವನ್ನು ಬಿಹಾರದ ಶಾಸಕಸಭೆಯಲ್ಲೂ ಶ್ಲಾಘೀಸಲಾಗಿದೆ.
ನಿರ್ಧಾರವು ನೂರಕ್ಕೆ ನೂರರಷ್ಟು ಸರಿಯಿದೆ. ಯಾರೇ ನಿರ್ಧಾರ ತಪ್ಪು ಎಂದರೂ ಅದು ಅವರ ಅಭಿಪ್ರಾಯ ಎಂದು ಪ್ರತಿಕ್ರಿಯಿಸಿದರು.
ಸಭಾಪತಿಯಾಗಿ ಯಾವ ಪಕ್ಷದ ಪರವಾಗಿಯೂ ಇಲ್ಲ. ನಿಸ್ಪಕ್ಷಪಾತವಾಗಿ ಕಾರ್ಯ ಮಾಡುತ್ತಿದ್ದೇನೆ. ಯಾರಿಂದಲೂ ಒಂದೇ ಒಂದು ದೂರು ಇಲ್ಲ. ಸಭಾಪತಿಯಾಗಿ ಆಯ್ಕೆ ಆದ ತಕ್ಷಣ ನನ್ನ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ಅಂದೇ ರಾಜೀನಾಮೆ ನೀಡಿದ್ದೇನೆ.
ಸಂವಿಧಾನಿಕ ಹುದ್ದೆ ಸಭಾಪತಿ, ಸಭಾಧ್ಯಕ್ಷ ಎಂಬುದು ಸರಕಾರ ಬದಲಾದ ತಕ್ಷಣ ಬದಲಾಯಿಸುವದು, ಅವಿಶ್ವಾಸ ಮಾಡುವದು ಒಳ್ಳೆಯ ಸಂಪ್ರದಾಯ ಅಲ್ಲ.
ಇದನ್ನೂ ಓದಿ:-Kumta ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ಜಯಪ್ರಕಾಶ್ ಶೇಟ್ ನಿಂದ ವಂಚನೆ -ಕೋರ್ಟ ನಿಂದ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ.
ನನ್ನನ್ನು ಬದಲಾಯಿಸುತ್ತಾರೆ ಎಂಬ ವರದಿಗಳನ್ನೂ ಮಾಧ್ಯಮಗಳಲ್ಲಿ ನೋಡಿದ್ದೇನೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಸಭಾಪತಿ ಪಕ್ಷಾತೀತವಾಗಿ ಇರಬೇಕು. ನಾನೂ ಸಭಾಪತಿಯಾಗಿ ಹಾಗೇ ಇದ್ದೇನೆ. ವಯಕ್ತಿಕ ಯಾರೆ ಏನೇ ಹೇಳಿದರೂ ನಾನು ಮಾತನಾಡುವುದಿಲ್ಲ ಎಂದರು.