ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Network Problems| ಜಾತಿ ಗಣತಿ ವೇಳೆ ಮೊಬೈಲ್ ಸಿಗ್ನಲ್ ಗಾಗಿ ಮರವೇರಿದ ಶಿಕ್ಷಕ !

During the ongoing caste census in Karnataka, teachers face mobile network problems in Bidar district. Some surveyors are forced to climb trees and water tanks for signal as OTP and server issues disrupt the process.
02:54 PM Sep 25, 2025 IST | ಶುಭಸಾಗರ್
During the ongoing caste census in Karnataka, teachers face mobile network problems in Bidar district. Some surveyors are forced to climb trees and water tanks for signal as OTP and server issues disrupt the process.
teachers face mobile network problems in Bidar

Network Problems| ಜಾತಿ ಗಣತಿ ವೇಳೆ ಮೊಬೈಲ್ ಸಿಗ್ನಲ್ ಗಾಗಿ ಮರವೇರಿದ ಶಿಕ್ಷಕ !

Network problems:- ರಾಜ್ಯದಲ್ಲಿ ಜಾತಿಗಣತಿ ಆರಂಭವಾಗಿದೆ. ಶಿಕ್ಷಕರಿಗೆ ಮೊಬೈಲ್ ಗೆ ಬರುವ ಓಟಿಪಿ ಸಮಸ್ಯೆ ಒಂದುಕಡೆಯಾದರೇ,ಮೊಬೈಲ್ (mobile) ಸಮಸ್ಯೆ ಇನ್ನೊಂದುಕಡೆ.

Advertisement

Karnataka|ಶರಾವತಿ ನದಿ ತೀರದಲ್ಲಿ  ಬಾಕ್ಸೈಟ್ ಗಣಿಗಾರಿಕೆಗೆ ಸಿದ್ದತೆ| ಜಿಲ್ಲೆಯಲ್ಲಿ ಯೋಜನೆಗೆ ಹೋಗುತ್ತಿರುವ ಅರಣ್ಯವೆಷ್ಟು ಗೊತ್ತಾ?

ಈ ಜಾತಿಗಣತಿಗೆ ಸರ್ವರ್‌ ಜೊತೆಗೆ ನೆಟ್‌ವರ್ಕ್‌ ಕೂಡ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.ಸಮೀಕ್ಷೆ ಬಂದ ಶಿಕ್ಷಕರು ಹಲವು ಜಿಲ್ಲೆಗಳಲ್ಲಿ ಮೊಬೈಲ್ ನೆಟ್‌ವರ್ಕ್​​ಗಾಗಿ ಮರ ಮತ್ತು ನಿರೀನ ಟ್ಯಾಂಕ್ ಹತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮೊಬೈಲ್ ನೆಟ್‌ವರ್ಕ್ ಅನಿವಾರ್ಯ.​​ ಆದರೆ ಮೊಬೈಲ್ ನೆಟ್‌ವರ್ಕ್ ಸಿಗದ ಕಾರಣ ಗಣತಿದಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಬೀದರ್​​ ಜಿಲ್ಲೆಯ ಮಹಾರಾಷ್ಟ್ರದ ‌ಗಡಿಯಲ್ಲಿ ಬರುವ ಔರಾದ್, ಕಮಲನಹರ, ಬಸವ ಕಲ್ಯಾಣ, ಹುಲಸೂರು ತಾಲೂಕಿನ ಕೆಲವು ಗ್ರಾಮ ಹಾಗೂ ತಾಂಡಾಗಳಲ್ಲಿ ಮೊಬೈಲ್ ನೆಟ್‌ವರ್ಕ್​​ ಸಮಸ್ಯೆ ಉಂಟಾಗಿದೆ.

ನೆಟ್‌ವರ್ಕ್​​ಗಾಗಿ ಶಿಕ್ಷಕರು ಮರ ಮತ್ತು ನೀರಿನ ಟ್ಯಾಂಕ್ ಹತ್ತಿದ  ಆಶ್ಚರ್ಯಕರ ಸಂಗತಿಗಳು ನಡೆದಿವೆ.

ಸೆಪ್ಟೆಂಬರ್ 22 ರಂದು ಆರಂಭಗೊಂಡಿರುವ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಗೆ ಹಲವು ರೀತಿಯ ತಾಂತ್ರಿಕ ದೋಷದಿಂದ ಆರಂಭದಲ್ಲೇ ವಿಘ್ನ ಶುರುವಾದಂತಾಗಿದೆ.

ನೆಟ್‌ವರ್ಕ್, ತರಬೇತಿ ಸೇರಿದಂತೆ ಹಲವು ರೀತಿಯ ಗೊಂದಲಗಳು ಸೃಷ್ಟಿಯಾಗಿ ಶಿಕ್ಷಕರ ಆತ್ಮ ಸ್ತೈರ್ಯ ಕುಗ್ಗಿಸಿದೆ.

ಸದ್ಯ ಜನಗಣತಿ ಆರಂಭಗೊಂಡು ಮೂರು ದಿನಗಳು ಕಳೆದರೂ ಸರ್ಕಾರದಿಂದ ಈ ಸಮಸ್ಯೆಗೆ ಪರಿಹಾರವಿಲ್ಲ. ಹೀಗಾಗಿ ಬೀದರ್ ಜಿಲ್ಲೆಯಲ್ಲಿ ವೇಗವಾಗಿ ಸರ್ವೆ ಕಾರ್ಯ ನಡೆಯುತ್ತಿಲ್ಲ. ಜಿಲ್ಲೆಯಲ್ಲಿ 3,381 ಜನರಿಂದ ಸರ್ವೆಕಾರ್ಯ ನಡೆಯುತ್ತಿದೆ. ಸುಮಾರು 3.69 ಲಕ್ಷ ಕುಟುಂಬದ ಸಮೀಕ್ಷೆ ಕಾರ್ಯ ನಡೆಯಬೇಕಿದೆ.

ಆರಂಭದಿಂದಲೂ ಧರ್ಮ, ಜಾತಿ, ಆರ್ಥಿಕ ಮಾಹಿತಿ ಯಾವ ರೀತಿ ನೀಡಬೇಕು ಎಂಬ ಗೊಂದಲಕ್ಕೆ ಒಳಗಾದ ಕುಟುಂಬಗಳು ಸೇರಿದಂತೆ ಗಣತಿದಾರರು ಇದೀಗ ನೆಟ್‌ವರ್ಕ್​​ ಸಿಗದೇ ಇರುವುದು ಇನ್ನೊಂದು ವಿಘ್ನ ಎದುರಾಗಿದೆ.

Advertisement
Tags :
Bidar newsCensus KarnatakaEducation SurveyKarnataka Caste CensusMobile Signal IssueNetwork ProblemsOTP IssuesRural ConnectivitySocial and Economic SurveyTeacher Climbs Tree
Advertisement
Next Article
Advertisement