ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Tourist Info : ಗೋವಾದಿಂದ ಕರ್ನಾಟಕಕ್ಕೆ ಅಗ್ಗದ ಮದ್ಯ ತರ್ತೀರಾ? ಈ ನಿಯಮ ಪಾಲಿಸದಿದ್ರೆ ಬೀಳುತ್ತೆ ಕೇಸ್! 

Tourist Info :-ಹೊಸವರ್ಷಕ್ಕೆ (New year 2025) ದಿನಗಣನೆ ಆರಂಭವಾಗಿದೆ. ಹೀಗಾಗಿ ಹೊಸವರ್ಷ ಆಚರಣೆಗೆ ಹಲವರು ಹಲವು ಭಾಗದಲ್ಲಿ ತೆರಳಿ ಮೋಜು ಮಸ್ತಿ ಮಾಡಲು ಸಿದ್ದತೆ ಮಾಡಿಕೊಳ್ಳೋದು ಮಾಮೂಲು.
06:01 PM Dec 30, 2024 IST | ಶುಭಸಾಗರ್
ಮದ್ಯಪಾನ ಆರೋಗ್ಯಕ್ಕೆ ಹಾನಿಕರ

Tourist Info :-ಹೊಸವರ್ಷಕ್ಕೆ (New year 2025) ದಿನಗಣನೆ ಆರಂಭವಾಗಿದೆ. ಹೀಗಾಗಿ ಹೊಸವರ್ಷ ಆಚರಣೆಗೆ ಹಲವರು ಹಲವು ಭಾಗದಲ್ಲಿ ತೆರಳಿ ಮೋಜು ಮಸ್ತಿ ಮಾಡಲು ಸಿದ್ದತೆ ಮಾಡಿಕೊಳ್ಳೋದು ಮಾಮೂಲು.

Advertisement

ಹೆಚ್ಚಾಗಿ ಗೋವಾ ರಾಜ್ಯಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಗೋವಾ ಹೋಗಿ ಮೋಜು ಮಸ್ತಿ ಮಾಡಿ ನಂತರ ಕರ್ನಾಟಕಕ್ಕೆ (Karnataka) ತೆರಳುವ ಹಲವರು ಜೊತೆಯಲ್ಲಿ ಗೋವಾ ಮದ್ಯ ತಂದು ಅಬಕಾರಿ ಚಕ್ ಪೋಸ್ಟ್ ನಲ್ಲಿ ಸಿಲುಕಿಕೊಳ್ತಾರೆ.

ಹೀಗೆ ಸಿಲುಕಿಕೊಳ್ಳುವ ಪ್ರವಾಸಿಗರು ದಂಡದ ಜೊತೆಗೆ ವಾಹನ ಕೂಡ ಜಪ್ತಿಯಾಗುತ್ತೆ. ಕೇಸ್ ಕೂಡ ಬೀಳುತ್ತೆ.

ಇದನ್ನೂ ಓದಿ:-Shivamogga ಜೋಗ ಜಲಪಾತ ವೀಕ್ಷಣೆಗೆ ಇದ್ದ ನಿರ್ಬಂಧ ತೆರವು

Advertisement

ಹಲವರು ಗೋವಾಕ್ಕೆ ತೆರಳಿದಾಗ ಮದ್ಯಗಳನ್ನು ಕರೀದಿ ಮಾಡ್ತಾರೆ. ಕರ್ನಾಟಕದಲ್ಲಿ ಹೆಚ್ಚು ಬೆಲೆ ಇರೋದ್ರಿಂದ ಇದನ್ನು ಅರಿತಿರುವ ಗೋವಾ ಮದ್ಯ ವ್ಯಾಪಾರಿಗಳು ಹೆಚ್ಚು ಮದ್ಯ ಕೊಂಡೊಯ್ಯಲು ನಾವೇ ಇಲ್ಲಿ ಪರ್ಮಿಟ್ ಕೊಡ್ತೇವೆ ಅದನ್ನು ಬಾರ್ಡರ್ ನಲ್ಲಿ ತೋರಿಸಿ ತೆಗೆದುಕೊಂಡು ಹೋಗಬಹುದು ಎಂದು ಸುಳ್ಳು ಮಾಹಿತಿ ಕೊಟ್ಟು ನೀವು ಗೋವಾ ಮದ್ಯ ಕರೀದಿಸಲು ಆಸೆ ತೋರಿಸುತ್ತಾರೆ.

ಅವರ ಮಾತು ನಂಬಿ ನೀವು ಗೋವಾ ಮದ್ಯ ಕರೀದಿಸಿದರೇ ನಿಮಗೆ ದಂಡದ ಜೊತೆ ಜೈಲೂಟ ಗ್ಯಾರಂಟಿ. ಹೀಗಾಗಿ ನೀವು ಕಾನೂನನ್ನ ಅರಿಯದಿದ್ದರೇ ತಪ್ಪು ಗ್ರಹಿಕೆಯಿಂದ ತೊಂದರೆಗೆ ಸಿಲುಕಿ ಕೊಳ್ತೀರ.

ಹಾಗಿದ್ರೆ ಗೋವಾ ಮದ್ಯವನ್ನು ಕರ್ನಾಟಕ್ಕೆ ತರಬಹುದೇ ತಂದರೆ ಏನು ಸಮಸ್ಯೆ ? ನಿಯಮ ಏನು ಎಂಬುದು ಹಲವರಿಗೆ ತಿಳಿದಿಲ್ಲ.

ಹೀಗಾಗಿ ಗೋವಾ ಮದ್ಯ ತರುವವರಿಗಾಗಿ ಇಲ್ಲಿದೆ ಕೆಲವು ಮಾಹಿತಿ.

ಗೋವಾ (Goa) ದಿಂದ ಕರ್ನಾಟಕದ ಕಡೆ ಗೋವಾ ಮದ್ಯ ತರುವವರು 750 ml ಗಿಂತ ಹೆಚ್ಚಿನ ಮದ್ಯ ತರುವಂತಿಲ್ಲ. ಇದು ಯಾವುದೇ ಬ್ರಾಂಡ್ ಇರಲಿ ಎಲ್ಲದಕ್ಕೂ ಅನ್ವಯ ಆಗಲಿದೆ.

ಒಂದು ಕಾರಿನಲ್ಲಿ ಐದು ಜನ ಇದ್ದರೇ ಐದು ಜನರೂ 750ml ಮದ್ಯ ತಂದರೇ ಅದು ಅಪರಾಧ. ಆದರೇ ಒಂದು ಕಾರಿನಲ್ಲಿ ಐದು ಜನ ಇದ್ದರೇ ಕೇವಲ ಒಂದು ಬಾಟಲಿ ಅಂದರೇ 750ml ಗಿಂತ ಕಡಿಮೆ ತರಲು ಅವಕಾಶವಿದೆ. ಕಾರಿನಲ್ಲಿ ಇರುವ ಪ್ರತಿಯೊಬ್ಬರೂ 750 ml ಒಳಗಿನ ಬಾಟಲ್ ತಂದರೆ ಅದು ಅಪರಾಧ.

ಮದ್ಯಪಾನ ಆರೋಗ್ಯಕ್ಕೆ ಹಾನಿಕರ

BUS ನಲ್ಲಿ ತಂದರೂ ಅಪರಾಧ!

ಇನ್ನು ಹಲವರು ಬಸ್ ನಲ್ಲಿ ತರುತ್ತಾರೆ . ಹೀಗೆ ತಂದರೇ ಅಪರಾಧವಾಗಿರುತ್ತದೆ. ಇದರಲ್ಲಿ ಖಾಸಗಿ ಬಸ್ ನಲ್ಲಿ ಪ್ರಯಾಣಿಕರು ತಂದರೆ ಅದಕ್ಕೆ ಬಸ್ ನ ಚಾಲಕ ,ನಿರ್ವಾಹಕ ಕಾರಣರಾಗುತ್ತಾರೆ.ಜೊತೆಗೆ ತಂದ ವ್ಯಕ್ತಿಯೂ ಅಪರಾಧಿಯಾಗುತ್ತಾರೆ. ಆದರೇ ಸರ್ಕಾರಿ ಬಸ್ ನಲ್ಲಿ ಯಾರೇ 750 ml ಗಿಂತ ಕಡಿಮೆ ಸ್ವಂತ ಉಪಯೋಗಕ್ಕೆ ತಂದರೆ ಅದಕ್ಕೆ ಅವಕಾಶವಿದೆ.

Goa ದಿಂದ ಬೆಂಗಳೂರಿಗೆ ಬಸ್ ನಲ್ಲಿ ನಿರಂತರ ಅಕ್ರಮ ಮದ್ಯ ಸಾಗಾಟ !ಕೊನೆಗೂ ಸಿಕ್ತು ಲಕ್ಷ ಲಕ್ಷ ಮದ್ಯ.

ಇನ್ನು ಗೋವಾದಿಂದ 750ml ಗಿಂತ ಅಧಿಕ ತಂದರೆ ನಿಮ್ಮ ವಾಹನ ಜಪ್ತಿ ಪಡಿಸಿ ನಿಮ್ಮಮೇಲೆ ಪ್ರಕರಣ ದಾಖಲಿಸಲು ಅಬಕಾರಿ ಹಾಗೂ ಪೊಲೀಸ್ ಇಲಾಖೆಗೆ ಅವಕಾಶವಿದೆ.

ಕೆಲವರು ನಾವು ಸ್ಪಿರೀಟ್ ತರೋದಿಲ್ಲ ,ವೈನ್ ತರುತ್ತೇವೆ ಅಥವಾ ಬಿಯರ್ ಯರುತ್ತೇವೆ ಅವಕಾಶ ಇದೆಯಾ ಎಂದು ಕೇಳಬಹುದು. ಖಂಡಿತ ಅವಕಾಶ ಇಲ್ಲ .ಆಲ್ಕೋಹಾಲ್ ಕಂಟೆಂಟ್ ಹೊಂದಿದ ಯಾವುದೇ ಪೇಯಗಳನ್ನು ಗೋವಾ ಮೂಲಕ ಕರ್ನಾಟಕಕ್ಕೆ ತರುವುದು ಅಪರಾಧವಾಗಿರುತ್ತದೆ.

ಹೀಗಾಗಿ ಗೋವಾಕ್ಕೆ ಮೋಜು ಮಸ್ತಿಗೆಂದು ಹೋಗಿ ಮದ್ಯ ಗಳು ಕಮ್ಮಿ ಬೆಲೆಗೆ ದೊರೆಯುತ್ತೆ ಅಲ್ಲಿಂದ ಪರ್ಮಿಟ್ ಸಹ ಸಿಗಲಿದೆ ಎಂದು ತಪ್ಪು ಗ್ರಹಿಸಿ ಕೊನೆಗೆ ಕರ್ನಾಟಕ ಗಡಿಯಲ್ಲಿ ಶಿಕ್ಷೆಗೊಳಗಾಗಬೇಡಿ.

ಮೋಜು ಮಸ್ತಿ ಮಾಡುವ ನೆಪದಲ್ಲಿ ಗೋವಾಕ್ಕೆ ತೆರಳುವ ಪ್ರವಾಸಿಗರು ಕರ್ನಾಟಕ ಅಬಕಾರಿ ನಿಯಮ ಅರಿತು ಕಾನೂನು ಪಾಲನೆ ಮಾಡಿ ಹೊಸ ವರ್ಷವನ್ನು ನಿಮ್ಮಿಷ್ಟದಂತೆ ಎಂಜಾಯ್ ಮಾಡಿ

 

Advertisement
Tags :
Alcohol TransportGoaKarnatakaLegal Information Travel RestrictionsLiquor Rules Tourism TipsTourist Advisory
Advertisement
Next Article
Advertisement