Udupi: ತಂದೆಯ ಚಿತೆಯ ಮುಂದೆ ಭೂಗತ ಪಾತಕಿ ಬನ್ನಂಜೆ ರಾಜ
Udupi: ತಂದೆಯ ಚಿತೆಯ ಮುಂದೆ ಭೂಗತ ಪಾತಕಿ ಬನ್ನಂಜೆ ರಾಜ
Udupi:- ಅಂಡರ್ ವರ್ಲ್ಡ್ ಡಾನ್, ಥ್ರೆಡ್ ಕಿಂಗ್ ಎಂದೇ ಹೆಸರು ಪಡೆದ ಬನ್ನಂಜೆ ರಾಜ ಯಾನೆ ರಾಜೇಂದ್ರ ಶೆಟ್ಟಿಗಾರ್ ಪೆರೋಲ್ ಮೇಲೆ ಬಿಡುಗಡೆಯಾಗಿದ್ದಾನೆ.
ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಬನ್ನಂಜೆ ರಾಜನನ್ನು ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ ನಲ್ಲಿ ಬೆಳಗಾವಿಯಿಂದ ಉಡುಪಿಗೆ ಕರೆ ತಂದಿದ್ದಾರೆ. ಬನ್ನಂಜೆ ರಾಜನ ತಂದೆ ತಹಸಿಲ್ದಾರ್ ಸುಂದರ ಶೆಟ್ಟಿಗಾರ್ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿ ಮಗನ ಕರ್ತವ್ಯ ನಿರ್ವಹಿಸಿದ್ದಾನೆ.
ಇದನ್ನೂ ಓದಿ:-Karnataka Rains | ರಾಜ್ಯದ ಹಲವು ಕಡೆ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ
ಅಂಕೋಲದ ಆರ್ ಎನ್ ನಾಯಕ್ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ರಾಜೇಂದ್ರ ಶೆಟ್ಟಿಗಾರ್ ನಿಗೆ 14 ದಿನ ಪೆರೋಲ್ ಸಿಕ್ಕಿದೆ.
ಏಪ್ರಿಲ್ 27ರಂದು ರಾಜನ ತಂದೆ, ಸರ್ಕಾರ ಇಲಾಖೆಯ ವಿವಿಧ ಹುದ್ದೆಗಳನ್ನು ನಿರ್ವಹಿಸಿ ತಹಸೀಲ್ದಾರರಾಗಿ ನಿವೃತ್ತಿ ಹೊಂದಿದ ಸುಂದರ ಶೆಟ್ಟಿಗಾರ್ ಏಪ್ರಿಲ್ 27ರಂದು ಮೃತಪಟ್ಟಿದ್ದರು. ಈ ಕಾರಣವನ್ನು ಇಟ್ಟುಕೊಂಡು ರಾಜ್ಯ ಹೈಕೋರ್ಟ್ ಬನ್ನಂಜೆ ರಾಜನಿಗೆ ಪೆರೋಲ್ ಮಂಜೂರು ಮಾಡಿದೆ.
ಜಿಲ್ಲಾ ಎಸ್.ಪಿ ಡಾ. ಅರುಣ್ ಕುಮಾರ್ ಮಾತನಾಡಿ, ಪೆರೋಲ್ ಮೇಲೆ ಬನ್ನಂಜೆ ರಾಜ ಉಡುಪಿಗೆ ಬಂದಿದ್ದು, ಹಲವು ನಿಯಮಗಳಿವೆ, ಮೊಬೈಲ್ ಇಂಟರ್ನೆಟ್ ಬಳಸುವಂತಿಲ್ಲ. ಮನೆ ಬಿಟ್ಟು ಹೊರಗೆ ಹೋಗುವಂತಿಲ್ಲ. ಸಹಚರರ ಜೊತೆ ಯಾವುದೇ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದರು.
ಮಲ್ಪೆ ಬಾಪು ತೋಟದ ನಿವಾಸಿಯಾಗಿರುವ ಬನ್ನಂಜೆ ರಾಜನ ಮನೆಯಲ್ಲಿ ತಂದೆ ಮೃತಪಟ್ಟು ಏಳು ದಿನಗಳ ನಂತರ ಅಂತಿಮ ಸಂಸ್ಕಾರದ ವಿಧಿ ವಿಧಾನಗಳು ನಡೆದವು. ನೂರಾರು ಜನ ಕುಟುಂಬಸ್ಥರು ಆಪ್ತರು ಪರಿಚಯಸ್ತರು, ಅಂತಿಮ ವಿಧಿ ವಿಧಾನದಲ್ಲಿ ಭಾಗಿಯಾದರು. ಮಲ್ಪೆ ಬೀಚ್ ರಸ್ತೆಯಲ್ಲಿರುವ ಹಿಂದು ರುದ್ರ ಭೂಮಿಯಲ್ಲಿ ಸುಂದರ್ ಶೆಟ್ಟಿಗಾರ ಅಂತ್ಯ ಸಂಸ್ಕಾರ ನಡೆಯಿತು. ಪುತ್ರ ರಾಜೇಂದ್ರ ಶೆಟ್ಟಿಗಾರ್, ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾನೆ.
ಬನ್ನಂಜೆ ರಾಜಾ (Bannanje raja) ಅವರ ತಾಯಿ ವಿಲಾಸಿನಿ ಟೀಚರ್ ಸುತ್ತಮುತ್ತ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿ ಉತ್ತಮ ಶಿಕ್ಷಕಿ ಎಂದು ಹೆಸರುಗಳಿಸಿದರು. ಅವರ ತಂದೆ ಸುಂದರ ಶೆಟ್ಟಿಗಾರ್, ಸರಕಾರಿ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಅಂತಿಮವಾಗಿ ತಹಶೀಲ್ದಾರ್ ಆಗಿ ನಿವೃತ್ತರಾದರು. ಅವರಿಗೆ ಸಾಕಾಷ್ಟು ಅಭಿಮಾನಿಗಳು ಬಂಧುಮಿತ್ರರಿದ್ದಾರೆ.ಆದರೇ ಮಗ ಮಾತ್ರ ಮಾಡದ ಕೆಲಸಗಳು ಮಾತ್ರ ನೂರಾರು.
ಬನ್ನಂಜೆಗೆ ಜೀವಾವಧಿ ಶಿಕ್ಷೆ ಜೊತೆ, 22 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಮೇ 14ಕ್ಕೆ ಪೆರೋಲ್ ಅವಧಿ ಪೂರ್ಣಗೊಳ್ಳಲಿದೆ. ಅಪರ ಕ್ರಿಯೆಗಳನ್ನು ನೆರವೇರಿಸಿ ಬನ್ನಂಜೆ ರಾಜ ಮತ್ತೆ ಹಿಂಡಲಗಾ ಜೈಲಿಗೆ ವಾಪಸ್ ಹೋಗಲಿದ್ದಾನೆ. ಬನ್ನಂಜೆಗೆ ಫೀಲ್ಡ್ ನಲ್ಲಿ ಸಿಕ್ಕಾಪಟ್ಟೆ ಥ್ರೆಟ್ ಇದ್ದು, ಪೊಲೀಸರು 24 ಗಂಟೆ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.