For the best experience, open
https://m.kannadavani.news
on your mobile browser.
Advertisement

Udupi| ಕಡವೆ ಗೆ ಬೈಕ್ ಡಿಕ್ಕಿ ವಾಹನ ಸವಾರ ಸಾವು ಸಹ ಸವಾರ ಗಂಭೀರ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಾರೆಕುಡ್ಲು ಬಳಿ ಕಡವೆ ಡಿಕ್ಕಿಯಿಂದ ಬೈಕ್ ಸವಾರ ಶ್ರೇಯಸ್ ಮೊಗವೀರ (23) ಸ್ಥಳದಲ್ಲೇ ಸಾವನ್ನಪ್ಪಿ, ಸಹಸವಾರ ವಿಘ್ನೇಶ್ ಗಂಭೀರ ಗಾಯಗೊಂಡಿದ್ದಾರೆ. ಘಟನೆಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
11:43 AM Sep 14, 2025 IST | ಶುಭಸಾಗರ್
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಾರೆಕುಡ್ಲು ಬಳಿ ಕಡವೆ ಡಿಕ್ಕಿಯಿಂದ ಬೈಕ್ ಸವಾರ ಶ್ರೇಯಸ್ ಮೊಗವೀರ (23) ಸ್ಥಳದಲ್ಲೇ ಸಾವನ್ನಪ್ಪಿ, ಸಹಸವಾರ ವಿಘ್ನೇಶ್ ಗಂಭೀರ ಗಾಯಗೊಂಡಿದ್ದಾರೆ. ಘಟನೆಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
udupi  ಕಡವೆ ಗೆ ಬೈಕ್ ಡಿಕ್ಕಿ ವಾಹನ ಸವಾರ ಸಾವು ಸಹ ಸವಾರ ಗಂಭೀರ

Udupi| ಕಡವೆ ಗೆ ಬೈಕ್ ಡಿಕ್ಕಿ ವಾಹನ ಸವಾರ ಸಾವು ಸಹ ಸವಾರ ಗಂಭೀರ

Advertisement

Udpi /ಉಡುಪಿ : ಚಲಿಸುತ್ತಿದ್ದ ಬೈಕ್ ಗೆ ಕಡವೆ ಅಡ್ಡ ಬಂದಿದ್ದರಿಂದ ಬೈಕ್ ನಿಯಂತ್ರಣ ತಪ್ಪಿ ಕಡವೆಗೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಸಹಸವಾರ ಗಂಭೀರ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆ ಸಮೀಪ ತಾರೆಕುಡ್ಲುನಲ್ಲಿ ಸಂಭವಿಸಿದೆ.

ಮೃತಪಟ್ಟ ಬೈಕ್ ಸವಾರ ಕಾವ್ರಡಿಯ ಶ್ರೇಯಸ್ ಮೊಗವೀರ (23) ಎಂದು ಗುರುತಿಸಲಾಗಿದೆ.

Udupi: ತಂದೆಯ ಚಿತೆಯ ಮುಂದೆ ಭೂಗತ ಪಾತಕಿ ಬನ್ನಂಜೆ ರಾಜ

ಗಂಭೀರ ಗಾಯಗೊಂಡ ಸಹಸವಾರ ವಿಘ್ನೇಶ್ ಎಂದು ತಿಳಿದು ಬಂದಿದೆ. ಇವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಸ್ನೇಹಿತರು ಇಂದು ಮಧ್ಯಾಹ್ನ ಕಮಲಶಿಲೆ ದೇವಸ್ಥಾನಕ್ಕೆ ಹೋಗಿದ್ದು ಅಲ್ಲಿಂದ ವಾಪಸು ನೆಲ್ಲಿಕಟ್ಟೆಗೆ ಬರುತ್ತಿದ್ದ ಸಂದರ್ಭ ತಾರೆಕುಡ್ಲು ಸಮೀಪ ದೊಡ್ಡ ಕಡವೆ ಯೊಂದು ಬೈಕ್ ಗೆ ಒಮ್ಮೆಲೇ ಅಡ್ಡ ಬಂದ ಪರಿಣಾಮ ಕಡವೆಗೆ ಡಿಕ್ಕಿ ಹೊಡೆದು ಬೈಕ್ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ. ಶಂಕರನಾರಾಯಣ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ