Uttara kannda ಮೀಟರ್ ಬಡ್ಡಿ ಕಿರುಕುಳ ಮುಂಡಗೋಡಿನಲ್ಲಿ 18 ಜನರ ಬಂಧನ
Uttara kannda ಮೀಟರ್ ಬಡ್ಡಿ ಕಿರುಕುಳ ಮುಂಡಗೋಡಿನಲ್ಲಿ 18 ಜನರ ಬಂಧನ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ (uttara kannda ) ಮೈಕ್ರೋ ಫೈನಾನ್ಸ್ ಗಿಂತ ಮೀಟರ್ ಬಡ್ಡಿ ದಂಧೆ ದೊಡ್ಡಮಟ್ಟದಲ್ಲಿದ್ದು ಎಸ್.ಪಿ ಎಂ ನಾರಾಯಣ್ ರವರ ನೇತ್ರತ್ವದಲ್ಲಿ ಪೊಲೀಸ್ ಇಲಾಖೆ ಕಾರ್ಯಾಚರಣೆಗಿಳಿದಿದ್ದು 18 ಜನ ಮೀಟರ್ ಬಡ್ಡಿ ದಂಧೆ ಕೋರರನ್ನು ಹೆಡೆಮುರಿ ಕಟ್ಟಿದೆ.
ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತ, ಜನರನ್ನು ಬೆದರಿಸುತ್ತಿದ್ದ ಆರೋಪದಡಿ ಮುಂಡಗೋಡ ಪಟ್ಟಣದ ಠಾಣೆ ಪೊಲೀಸರು 19 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, 18 ಜನರನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ ತಿಂಗಳು ಅಪಹರಣಕ್ಕೆ ಒಳಗಾಗಿದ್ದ ಜಮೀರ ಅಹಮದ್ ದರ್ಗಾವಾಲೆ ಸೇರಿದಂತೆ, ಏಳು ಜನರ ವಿರುದ್ಧ ವ್ಯಾಪಾರಿಯೊಬ್ಬರು ನೀಡಿದ ದೂರು ಆಧರಿಸಿ ಸಾಲ ವಸೂಲಿಗೆ ಕಿರುಕುಳ ನೀಡಿದ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:-Mundgod ಬೀಗ ಮುರಿದು ಐದು ಮನೆಗಳಲ್ಲಿ ಕಳ್ಳತನ ಪೊಲೀಸರು ಬಂದ್ರೂ ಬರಲಿಲ್ಲ ಮನೆ ಮಾಲೀಕರು!
ಮುಂಡಗೋಡ ಪಟ್ಟಣದಲ್ಲಿ ಎಸ್. ಪಿ ಎಂ ನಾರಾಯಣ್ ನೇತ್ರ್ವದಲ್ಲಿ ತಡರಾತ್ರಿ ಕಾರ್ಯಾಚರಣೆ ನಡೆಸಿ ಬಡ್ಡಿ ದಂಧೆ ನಡೆಸುತಿದ್ದ ಪೈರೋಜಖಾನ ಖಾನಜಾದ, ಮಹ್ಮದ ಶಫಿ ಮುಗಳಕಟ್ಟಿ, ಸಾಹೀದ್ ಮಿಲವಾಲೆ, ಮಂಜುನಾಥ ಕಾಜಗಾರ, ಕರಿಂಖಾನ್ ಖಾನಹಾದೆ, ಸಂಜು ಹರಿಜನ, ಕಿರಣ ಚವ್ಹಾಣ, ವಿಶಾಲ ಫೈಟ್, ವಸಂತ ಕೊರವರ, ಮಹ್ಮದಜಾಫರ್ ಚವಡಿ, ಅಮೀರಖಾನ್ ಪಠಾಣ, ಸುನೀಲ ಶೆಟ್ಟಿ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.

ಬಾಚಣಕಿ ಜಲಾಶಯದ ಸಮೀಪ ಗಸ್ತು ತಿರುಗುವ ವೇಳೆ ಜನರನ್ನು ಬೆದರಿಸಿ, ದರೋಡೆಗೆ ಯತ್ನಿಸಿದ ಆರೋಪದಡಿ ಮಹಮ್ಮದ ಸಾದೀಕ್ ಗಾಜೀಪೂರ, ವಾಸಿಂಖಾನ್ ಬೆಂಡಿಗೇರಿ, ಮಕ್ಖುಲ್ ಅಹಮದ ಯಳ್ಳೂರು, ಮದುಸಿಂಗ್ ರಜಪೂತ, ವಿದೇಶ ಹುಲಗೂರು, ಮಂಜುನಾಥ ಶೇರಕಾನಿ ಎಂಬುವವರನ್ನು ವಶಕ್ಕೆ ಪಡೆಯಲಾಗಿದ್ದು ಕಾರದಪುಡಿ, ರಾಡ್ ಗಳನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದಲ್ಲದೇ ಬಡ್ಡಿ ವ್ಯವಹಾರದಲ್ಲಿ ತೊಡಗಿದ್ದರ ಕುರಿತು ಆರೋಪಿಗಳ ಮನೆಯಲ್ಲಿ ದಾಖಲೆಗಳು ಸಿಕ್ಕಿವೆ. ನೀಡಿದ ಸಾಲಕ್ಕೆ ದುಪ್ಪಟ್ಟು ಮೊತ್ತ ಮರಳಿಸುವಂತೆ ಪೀಡಿಸುತ್ತಿದ್ದ ಕುರಿತು ದೂರು ಬಂದಿದ್ದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದ್ದು ಸಹಾಯವಾಣಿ ಸಹ ತೆರೆಯಲಾಗಿದೆ, ನೊಂದವರು ದೂರು ನೀಡುವಂತೆ ಕೋರಿಕೊಂಡಿದ್ದಾರೆ.
ಜಮೀರ್ ಕೋರ್ಟ ಗೆ ಶರಣಾಗತಿ!
ಮೀಟರ್ ಬಡ್ಡಿ ದಂಧೆ ಮಾಡುತಿದ್ದ ಮುಂಡಗೋಡಿನ ಕಿಂಗ ಪಿನ್ ಜಮೀರ್ ಇದೀಗ ಮುಂಡಗೋಡಿನಲ್ಲಿ ಕೋರ್ಟ ಗೆ ಶರಣಾಗಿದ್ದಾನೆ. ಕಳೆದ ರಾತ್ರಿ ಮುಂಡಗೋಡಿನಲ್ಲಿ ಎಸ್.ಪಿ ಎಂ ನಾರಾಯಣ್ ರವರೇ ಕುದ್ದು ಅಖಾಡಕ್ಕಿಳಿದು ಮೀಟರ್ ಬಡ್ಡಿ ದಂಧೆಕೋರರ ಹೆಡೆಮುರಿ ಕಟ್ಟಿದ್ದರು.
ಇದನ್ನೂ ಓದಿ:-Mundgod ಮೀಟರ್ ಬಡ್ಡಿದಂದೆ- ಸಾಲಗಾರರನ್ನು ಹೆದರಿಸಲು ಹತ್ಯೆ ಆರೋಪಿಗಳ ವಿಡಿಯೋ ಪೋಸ್ಟ್ !
ಕಿಂಗ್ ಪಿನ್ ಜಮೀರ್ ತಪ್ಪಿಸಿಕೊಂಡು ತಲೆಮರಸಿಕೊಂಡಿದ್ದನು. ಎಲ್ಲಿ ಪೊಲೀಸರು ಈತನನ್ನು ಬಿಡುವುದಿಲ್ಲ ಎಂದು ತಿಳಿಯಿತೋ ಇದೀಗ ಶರಣಾಗತಿ ಯಾಗಿದ್ದಾನೆ. ಒಟ್ಟಿನಲ್ಲಿ ಈತನ ರೌಡಿಸಂ ವಸೂಲಿಯಿಂದ ತೊಂದರೆಗೊಳಗಾದವರನ್ನ ಪೊಲೀಸರು ಹೆಡೆಮುರಿ ಕಟ್ಟುವ ಮೂಲಕ ಇದೀಗ ಮೀಟರ್ ದಂಧೆಗೆ ಬ್ರೇಕ್ ಹಾಕಿದ್ದಾರೆ.